ಆರ್‌ಸಿಬಿ- ಸಿಎಸ್‌ಕೆ ಮುಖಾಮುಖಿಯಲ್ಲಿ ಸ್ಮರಣೀಯ ಕ್ಷಣ ಯಾವುದು? ಫ್ಯಾನ್ಸ್ ಉತ್ತರ ಏನಾಗಿತ್ತು? ವಿಡಿಯೋ
CSK vs RCB IPL 2025: ಐಪಿಎಲ್ 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮಾರ್ಚ್ 28ರಂದು ಚೆನ್ನೈನಲ್ಲಿ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಗೆಲುವಿನ ನಿರೀಕ್ಷೆಯಲ್ಲಿವೆ. ಈ ಪಂದ್ಯಕ್ಕೂ ಮುನ್ನ ಅಭಿಮಾನಿಗಳು ಈ ಎರಡು ತಂಡಗಳ ನಡುವಿನ ಸ್ಮರಣೀಯ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ
ಐಪಿಎಲ್ 2025 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ತಮ್ಮ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಉತ್ತಮ ಆರಂಭವನ್ನು ಪಡೆದಿವೆ. ಇದೀಗ ಎರಡೂ ತಂಡಗಳು ಮಾರ್ಚ್ 28 ರಂದು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಸಿಎಸ್‌ಕೆ ಮತ್ತು ಆರ್‌ಸಿಬಿ ತಂಡಗಳು ಸ್ಟಾರ್ ಆಟಗಾರರನ್ನು ಹೊಂದಿರುವುದರಿಂದ ಈ ಎರಡು ತಂಡಗಳ ಅಭಿಮಾನಿಗಳ ಸಾಕಷ್ಟು ದೊಡ್ಡದಿದೆ. ಹೀಗಾಗಿ ಕ್ರೀಡಾಂಗಣ ಭರ್ತಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಲ್ಲದೆ ಉಭಯ ತಂಡಗಳ ಈ ಹಿಂದೆ ನಡುವೆ ನಡೆದ ಪಂದ್ಯಗಳು ಸಾಕಷ್ಟು ರೋಚಕತೆ ಸೃಷ್ಟಿಸಿವೆ. ಎರಡೂ ತಂಡಗಳು ಗೆಲುವಿಗಾಗಿ ಜಿದ್ದಾಜಿದ್ದಿನ ಪೈಪೋಟಿ ನೀಡುವುದನ್ನು ನಾವು ನೋಡಿದ್ದೇವೆ. ಇದೀಗ ಉಭಯ ತಂಡಗಳ ಮುಖಾಮುಖಿಗೂ ಮುನ್ನ ಈ ಹಿಂದೆ ನಡೆದ ಪಂದ್ಯಗಳಲ್ಲಿ ಯಾವುದು ಸ್ಮರಣೀಯ ಕ್ಷಣವಾಗಿತ್ತು ಎಂಬುದನ್ನು ಅಭಿಮಾನಿಗಳು ವಿವರಿಸಿದ್ದಾರೆ.