ಮಗನ ಹತ್ಯೆಗೆ ಪ್ರಯತ್ನ ನಡೆದಿರುವ ವಿಚಾರ ತನಗೆ ಗೊತ್ತಿಲ್ಲವೆಂದು ಹೇಳಿ ಆಶ್ಚರ್ಯ ಮೂಡಿಸಿದ ರಾಜಣ್ಣ
ಹನಿ ಟ್ರ್ಯಾಪ್ ವಿಚಾರವೇ ಬೇರೆ ಮಗನ ದೂರಿನ ವಿಚಾರವೇ ಬೇರೆ ಎಂದು ರಾಜಣ್ಣ ಹೇಳುತ್ತಾರೆ. ಹನಿ ಟ್ರ್ಯಾಪ್ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿರುವುದನ್ನು ರಾಜಣ್ಣ ಸ್ವಾಗತಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಮಂತ್ರಿ ಜಿ ಪರಮೇಶ್ವರ್ ಪ್ರಕರಣವನ್ನು ಚರ್ಚಿಸಿ ಸಿಐಡಿ ತನಿಖೆಗೆ ಒಪ್ಪಿಸಿದ್ದಾರೆ, ಅವರ ತೀರ್ಮಾನವನ್ನು ತಾನು ಸ್ವಾಗತಿಸುತ್ತೇನೆ ಎಂದು ರಾಜಣ್ಣ ಹೇಳಿದರು.
ಬೆಂಗಳೂರು, ಮಾರ್ಚ್ 27: ಮಗಳ ಹುಟ್ಟುಹಬ್ಬ ಆಚರಣೆಯ ಸಂದರ್ಭದಲ್ಲಿ ತನ್ನ ಕೊಲೆಗೆ ಪ್ರಯತ್ನ ನಡೆದಿತ್ತು ಎಂದು ಕೆಎನ್ ರಾಜಣ್ಣ ಅವರ ಪುತ್ರ ಮತ್ತ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ (Rajendra Rajanna) ಇವತ್ತು ಪೊಲೀಸ್ ಮಹಾನಿರ್ದೇಶರಿಗೆ ದೂರು ನೀಡಿದ್ದಾರೆ. ಅದರೆ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಒಲ್ಲದ ಮನಸ್ಸಿನಿಂದ ಮಾತಾಡಿದ ಸಚಿವ ರಾಜಣ್ಣ ಅದರ ಬಗ್ಗೆ ತನಗೇನೂ ಗೊತ್ತಿಲ್ಲ, ತನ್ನನೇನೂ ಕೇಳಬೇಡಿ ಎನ್ನುತ್ತಾರೆ. ಮಗನ ಹತ್ಯೆಗೆ ಯತ್ನ ನಡೆದಿತ್ತು ಅನ್ನೋದು ಬಹಳ ಗಂಭೀರ ವಿಚಾರವಾದರೂ ರಾಜಣ್ಣ ಯಾಕೆ ತನಗೆ ಗೊತ್ತಿಲ್ಲವೆಂದು ಹೇಳಿದರೋ ಗೊತ್ತಾಗಲಿಲ್ಲ.
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಜಣ್ಣ ಪ್ರಸ್ತಾಪಿಸಿದ ಹನಿ ಟ್ರ್ಯಾಪ್ ಪ್ರಕರಣ ಕರ್ನಾಟಕ ಇತಿಹಾಸದ ಅತಿದೊಡ್ಡ ಲೈಂಗಿಕ ಹಗರಣ: ಸುರೇಶ್ ಗೌಡ
Latest Videos

Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!

ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್

ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ

ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
