ರೈತರಿಗೆ ಡಬಲ್ ಗುಡ್ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..ಏನದು ಗೊತ್ತಾ?
ಕೃಷಿ ಸಚಿವ ಚಲುವರಾಯಸ್ವಾಮಿ ಅವರು ರೈತರಿಗೆ ಡಬಲ್ ಗುಡ್ನ್ಯೂಸ್ ನೀಡಿದ್ದಾರೆ. ಒಂದು ಕಡೆ ರಾಗಿ, ಜೋಳ, ತೊಗರಿಗೆ MSP ದರ ನಿಗದಿ ಮಾಡುವ ಬಗ್ಗೆ ತೀರ್ಮಾನಿಸಿದ್ದರೆ, ಮತ್ತೊಂದೆಡೆ ರೈತರಿಗೆ ಉಚಿತ ಮಂಡಿ ಚಿಪ್ಪು ಸಮಸ್ಯೆಗೆ ಉಚಿತ ಶಸ್ತ್ರ ಚಿಕಿತ್ಸೆ ಕೊಡಿಸುವ ಬಗ್ಗೆ ಘೋಷಣೆ ಮಾಡಿದ್ದಾರೆ. ಹಾಗಾದ್ರೆ, ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಸಚಿವರು ಏನೇನು ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ.
ಬೆಂಗಳೂರು, (ಮಾರ್ಚ್ 27): ರಾಗಿ, ಜೋಳ, ತೊಗರಿಗೆ MSP ದರ ನಿಗದಿ ಮಾಡುವ ಬಗ್ಗೆ ಇಂದು(ಮಾರ್ಚ್ 27) ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಚಿವ ಸಂಪುಟದ ಬಳಿಕ ಹಲವು ಸಚಿವರು ಸೇರಿಕೊಂಡು ಈ ಬಗ್ಗೆ ಸಭೆ ಮಾಡಿದ್ದು, ಸಭೆಯಲ್ಲಿ ರಾಗಿ, ಜೋಳ, ತೊಗರಿ ಖರೀದಿ ಮಾಡುವ ಬಗ್ಗೆ ಮಹತ್ವದ ತೀರ್ಮಾನವಾಗಿದೆ. ಇನ್ನು ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ , ರಾಗಿ, ಜೋಳ, ತೊಗರಿ ಖರೀದಿ ಮಾಡುತ್ತಿದ್ದೇವೆ. 7550 ರೂ. ತೊಗರಿಗೆ ಕೇಂದ್ರ ನಿಗದಿ ಮಾಡಿದೆ. ಇದಕ್ಕೆ 450 ರೂ. ಹೆಚ್ಚುವರಿ ಕೊಟ್ಟು ಖರೀದಿ ಮಾಡುತ್ತಿದ್ದೇವೆ. ಜಿಯೋ ಟ್ಯಾಗ್ ಕೊಟ್ಟು ಖರೀದಿ ಮಾಡಲಾಗುತ್ತೆ. ರಾಗಿಯನ್ನ 20 ಕ್ವಿಂಟಾಲ್ ನಿಂದ 30 ಕ್ವಿಂಟಾಲ್ ಖರೀದಿಗೆ ಮುಂದಾಗಿದ್ದೇವೆ ಎಂದು ಮಾಹಿತಿ ನೀಡಿದರು.
ಇನ್ನು ಇದೇ ವೇಳೆ ರೈತರಿಗೆ ಮತ್ತೊಂದು ಗುಡನ್ಯೂಸ್ ನೀಡಿದ್ದಾರೆ. ಬೆಂಗಳೂರಿನ ಕಾವೇರಿ ಆಸ್ಪತ್ರೆಯು CSR ಫಂಡ್ ನಲ್ಲಿ 100 ಜನ ರೈತರಿಗೆ ಮಂಡಿ ಚಿಪ್ಪು ಸಮಸ್ಯೆಗೆ ಉಚಿತ ಶಸ್ತ್ರ ಚಿಕಿತ್ಸೆ ಮಾಡಲು ಮುಂದಾಗಿದ್ದಾರೆ. 15 ಕೋಟಿ ರೂ. ವೆಚ್ಚದಲ್ಲಿ 100 ರಿಂದ 150 ಜನ ರೈತರಿಗೆ ಶಸ್ತ್ರ ಚಿಕಿತ್ಸೆ ಮಾಡುತ್ತೇವೆ. ರೋಬೋಟಿಕ್ ಮೂಲಕ ಚಿಕಿತ್ಸೆ ನೀಡುತ್ತಿದ್ದು, ಓರ್ವ ರೋಗಿಗೆ 3- 4 ಲಕ್ಷ ಆಗುತ್ತದೆ. ಆಯಾ ತಾಲ್ಲೂಕು, ಜಿಲ್ಲಾ ಹೆಡ್ ಕ್ವಾಟ್ರಸ್ ನಿಂದ ಪ್ರಕ್ರಿಯೆ ಶುರುವಾಗಲಿದೆ. ಈ ಚಿಕಿತ್ಸೆ ಒಳಗಾಗುವವ ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ ಇದ್ದರೆ ಸೂಕ್ತ ಎಂದಿದ್ದಾರೆ.