ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ: ಮಹಿಳೆ ವಿಡಿಯೋ ವೈರಲ್
ನನ್ನ ಜಾತ್ರೆ ನಿಲ್ಸಿದ್ದೀರಿ ಮೂರ್ ದಿನಗಳಲ್ಲಿ ಮೂರ್ ಹೆಣ ಬೀಳುತ್ತೆ ಎಂದು ಮಹಿಳೆಯೊರ್ವಳು ಹೇಳಿದ ವೀಡಿಯೋ ವೈರಲ್ ಆಗಿದೆ. ಎರಡು ಸಮುದಾಯಗಳ ನಡುವೆ ಸಣ್ಣ ಗಲಾಟೆ ಹಿನ್ನಲೆಯಲ್ಲಿ ಚಾಮರಾಜನಗರ (Chamarajanagara) ತಾಲ್ಲೂಕು ತಮ್ಮಡಹಳ್ಳಿಯಲ್ಲಿ ಗುಜ್ಜಮ್ಮತಾಯಿ ಕೊಂಡೋತ್ಸವ ಸ್ಥಗಿತಗೊಂಡಿದೆ. ಹೀಗಾಗಿ ಮಹಿಳೆಯೋಬ್ಬರು ಮೈಮೇಲಿ ದೇವರು ಬಂದಿದೆ ಎಂದು ನನ್ನ ಕೊಂಡ, ನನ್ನ ಜಾತ್ರೆ, ನನ್ನ ಕನ್ನಕನ್ನಡಿ ಎಲ್ಲವನ್ನು ನಿಲ್ಲಿಸಿ ಮೋಸ ಮಾಡಿದ್ದಾರೆ. ಮೂರು ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದು ಭವಿಷ್ಯ ನುಡಿದಿದ್ದಾಳೆ.
ಚಾಮರಾಜನಗರ, (ಮಾರ್ಚ್ 27): ನನ್ನ ಜಾತ್ರೆ ನಿಲ್ಸಿದ್ದೀರಿ ಮೂರ್ ದಿನಗಳಲ್ಲಿ ಮೂರ್ ಹೆಣ ಬೀಳುತ್ತೆ ಎಂದು ಮಹಿಳೆಯೊರ್ವಳು ಹೇಳಿದ ವೀಡಿಯೋ ವೈರಲ್ ಆಗಿದೆ. ಎರಡು ಸಮುದಾಯಗಳ ನಡುವೆ ಸಣ್ಣ ಗಲಾಟೆ ಹಿನ್ನಲೆಯಲ್ಲಿ ಚಾಮರಾಜನಗರ (Chamarajanagara) ತಾಲ್ಲೂಕು ತಮ್ಮಡಹಳ್ಳಿಯಲ್ಲಿ ಗುಜ್ಜಮ್ಮತಾಯಿ ಕೊಂಡೋತ್ಸವ ಸ್ಥಗಿತಗೊಂಡಿದೆ. ಹೀಗಾಗಿ ಮಹಿಳೆಯೋಬ್ಬರು ಮೈಮೇಲಿ ದೇವರು ಬಂದಿದೆ ಎಂದು ನನ್ನ ಕೊಂಡ, ನನ್ನ ಜಾತ್ರೆ, ನನ್ನ ಕನ್ನಕನ್ನಡಿ ಎಲ್ಲವನ್ನು ನಿಲ್ಲಿಸಿ ಮೋಸ ಮಾಡಿದ್ದಾರೆ. ಮೂರು ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದು ಭವಿಷ್ಯ ನುಡಿದಿದ್ದಾಳೆ. ಮಹಿಳೆ ಕೊಂಡ ಹಾಯಲು ಮೂರು ದಿನ ಉಪವಾಸ ಇದ್ದಳು. ಆದ್ರೆ, ಗಲಾಟೆ ಹಿನ್ನೆಲೆಯಲ್ಲಿ ಪೊಲೀಸರು ಕೊಂಡೋತ್ಸವನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದ ಮಹಿಳೆ , ತನ್ನ ಮೇಲೆ ಗುಜ್ಜಮ್ಮತಾಯಿ ಎಂದು ಹೇಳಿಕೊಂಡು ರೀತಿ ಹೇಳಿಕೆ ನೀಡಿದ್ದು ಜನರಲ್ಲಿ ಆತಂಕ ಮೂಡಿಸಿದೆ.