ದೆಹಲಿಯಿಂದ ನೇರವಾಗಿ ಚಿಂಚೋಳಿಯಲ್ಲಿರುವ ತಮ್ಮ ಶುಗರ್ ಫ್ಯಾಕ್ಟರಿ ಗೆಸ್ಟ್ ಹೌಸ್ಗೆ ಬಂದಿರುವ ಯತ್ನಾಳ್
ಕೇಂದ್ರೀಯ ಶಿಸ್ತು ಸಮಿತಿ ತಮ್ಮನ್ನು ಪಕ್ಷದಿಂದ ಉಚ್ಚಾಟಿಸಿದ ಬಳಿಕ ಬಸನಗೌಡ ಪಾಟೀಲ್ ಯತ್ನಾಳ್ ಬಹಳ ನೊಂದಿದ್ದಾರೆ. ದೆಹಲಿಯಲ್ಲಿ ಒಬ್ಬಂಟಿಯಾಗಿ ತಿರುಗುತ್ತಿದ್ದ ಅವರ ಮುಖದಲ್ಲಿ ನೋವು ಎದ್ದು ಕಾಣುತಿತ್ತು. ಮುಂದಿನ ನಡೆಯ ಬಗ್ಗೆ ಅವರು ಇನ್ನೂ ಯೋಚಿಸಿರಲಾರರು. ಪ್ರಾಯಶಃ ಕುಟುಂಬದ ಸದಸ್ಯರು, ಹಿತೈಷಿಗಳು ಮತ್ತು ಬಸವಜಯ ಮತ್ಯುಂಜಯ ಸ್ವಾಮೀಜಿ ಅವರ ಮಾರ್ಗದರ್ಶನ ಪಡೆದು ಮುಂದುವರಿಯಬಹುದು.
ಕಲಬುರಗಿ, ಮಾರ್ಚ್ 27: ಬಸನಗೌಡ ಪಾಟೀಲ್ ಯತ್ನಾಳ್ ದೆಹಲಿಯಿಂದ ವಾಪಸ್ಸಾಗಿದ್ದಾರೆ. ಅವರು ನೇರವಾಗಿ ತಮ್ಮ ಕ್ಷೇತ್ರ ವಿಜಯಪುರಕ್ಕೆ ಹೋಗದೆ, ಜಿಲ್ಲೆಯ ಚಿಂಚೋಳಿಯಲ್ಲಿರುವ ಅವರ ಸಿದ್ಧಸಿರಿ ಶುಗರ್ ಫ್ಯಾಕ್ಟರಿಯ ಗೆಸ್ಟ್ಹೌಸ್ ನಲ್ಲಿ (sugar factory guest house) ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರ ಇಬ್ಬರು ಗಂಡುಮಕ್ಕಳಲ್ಲಿ ಒಬ್ಬರಾಗಿರುವ ರಾಮನಗೌಡ ಪಾಟೀಲ್ ಗೆಸ್ಟ್ ಹೌಸ್ಗೆ ಆಗಮಿಸಿ ತಮ್ಮ ತಂದೆಯನ್ನು ಮಾತಾಡಿಸಿಕೊಂಡು ಹೋದರು. ಮಾಧ್ಯಮದವರ ಯಾವ ಪ್ರಶ್ನೆಗೂ ಉತ್ತರ ಕೊಡದೆ ರಾಮನಗೌಡ ಕಾರು ಹತ್ತಿ ಹೋಗುವುದನ್ನು ದೃಶ್ಯಗಳಲ್ಲಿ ನೋಡಬಹುದು.
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಸನಗೌಡ ಯತ್ನಾಳ್ ಉಚ್ಚಾಟನೆ ಎಲ್ಲ ಬಿಜೆಪಿ ನಾಯಕರಿಗೆ ಒಂದು ಪಾಠ: ಬಿವೈ ರಾಘವೇಂದ್ರ, ಸಂಸದ
Latest Videos

ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ

ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ

ಅಜಯ್ ರಾವ್ ಓದಿದ್ದು ಎಸ್ಎಸ್ಎಲ್ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ

ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಗಂಗಾ ನದಿಯಲ್ಲಿ ಮುಳುಗಿದ ಯುವಕ
