ಬಸನಗೌಡ ಯತ್ನಾಳ್ ಉಚ್ಚಾಟನೆ ಎಲ್ಲ ಬಿಜೆಪಿ ನಾಯಕರಿಗೆ ಒಂದು ಪಾಠ: ಬಿವೈ ರಾಘವೇಂದ್ರ, ಸಂಸದ
ಯತ್ನಾಳ್ರ ಉಚ್ಚಾಟನೆ ಬಿಜೆಪಿಯಲ್ಲಿ ಮಿಶ್ರ ಪ್ರತಿಕ್ರಿಯೆ ಉಂಟು ಮಾಡಿದೆ, ಕೆಲವರು ಸಂಭ್ರಮಿಸುತ್ತಿದ್ದರೆ ಕೆಲವರು ದುಃಖ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದಾಗ ರಾಘವೇಂದ್ರ ಯಾರೂ ಸಂಭ್ರಮಿಸಬಾರದು, ಯತ್ನಾಳ್ ಒಬ್ಬ ಹಿರಿಯ ಅನುಭವಿ ನಾಯಕರಾಗಿದ್ದರು, ಅವರ ಕೊರತೆಯನ್ನು ಹೇಗೆ ನೀಗಿಸಬಹುದು ಅನ್ನೋದರ ಬಗ್ಗೆ ಪಕ್ಷದ ಕಾರ್ಯಕರ್ತರು ಯೋಚಿಸಬೇಕು ಎಂದರು.
ದೆಹಲಿ, ಮಾರ್ಚ್ 27: ಬಸನಗೌಡ ಪಾಟೀಲ್ ಯತ್ನಾಳ್ರ (Basangouda Patil Yatnal) ಉಚ್ಚಾಟನೆ ನಿರೀಕ್ಷಿತವಾಗಿತ್ತು ಎಂದು ದೆಹಲಿಯಲ್ಲಿರುವ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಹೇಳಿದರು. ಯತ್ನಾಳ್ ಉಚ್ಚಾಟನೆ ಎಲ್ಲ ಬಿಜೆಪಿ ನಾಯಕರಿಗೆ ಒಂದು ಪಾಠ, ಪಕ್ಷ ಒಂದು ಮನೆಯ ಹಾಗೆ, ಮನೆಯ ಗೌರವ ಕಾಪಾಡುವುದು ಪ್ರತಿಯೊಬ್ಬ ಸದಸ್ಯನ ಕರ್ತವ್ಯವಾಗಿರುತ್ತದೆ ಎಂದು ಹೇಳಿದ ರಾಘವೇಂದ್ರ, ಯತ್ನಾಳ್ ಬೆಂಬಲಿಗರಿಂದ ಪಕ್ಷಕ್ಕೆ ಯಾವುದೇ ಸಮಸ್ಯೆ ಎದುರಾಗಲಾರದು, ಸಂಘಟನೆ ಕೆಲಸದಲ್ಲಿ ಸವಾಲುಗಳು ಎದುರಾಗುತ್ತವೆ, ಅದರೆ ಎಲ್ಲವನ್ನೂ ಸರಿದೂಗಿಸಿಕೊಂಡು ಮತ್ತು ಎಲ್ಲರನ್ನೂ ಜೊತೆಗೆ ಕರೆದೊಯ್ಯುವ ಕ್ಷಮತೆ ವಿಜಯೇಂದ್ರ ಅವರಲ್ಲಿದೆ ಎಂದರು.
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪಕ್ಷಕ್ಕೆ ಮುಜುಗರವಾಗುವ ರೀತಿ ಮಾತಾಡಬಾರದೆಂದು ಯತ್ನಾಳ್ಗೆ ಹೇಳಿದ್ದೆ, ಅವರು ಕೇಳಲಿಲ್ಲ: ಎಸ್ ಟಿ ಸೋಮಶೇಖರ್

ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ

ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?

‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ

ಫ್ಲೈಓವರ್ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
