ಪಕ್ಷಕ್ಕೆ ಮುಜುಗರವಾಗುವ ರೀತಿ ಮಾತಾಡಬಾರದೆಂದು ಯತ್ನಾಳ್ಗೆ ಹೇಳಿದ್ದೆ, ಅವರು ಕೇಳಲಿಲ್ಲ: ಎಸ್ ಟಿ ಸೋಮಶೇಖರ್
ಯತ್ನಾಳ್ ಅವರಂತೆ ತಾನು ಯಾವತ್ತೂ ಪಕ್ಷಕ್ಕೆ, ಪಕ್ಷದ ನಾಯಕರಿಗೆ ಮತ್ತು ಸಂಘ ಪರಿವಾರದವರಿಗೆ ಮುಜುಗರ ಉಂಟಾಗುವ ರೀತಿ ಮಾತಾಡಿಲ್ಲ, ಹೆಬ್ಬಾರ್ ಮತ್ತು ತನಗೆ ನೋಟೀಸ್ ನೀಡಿರುವುದು ಸತ್ಯ, ಅದಕ್ಕೆ ಸಮರ್ಪಕವಾದ ಉತ್ತರ ನೀಡುತ್ತೇವೆ ಎಂದು ಹೇಳುವ ಸೋಮಶೇಖರ್, ಅಸೆಂಬ್ಲಿ ಅಧಿವೇಶನದ ನಂತರ ಯತ್ನಾಳ್ರನ್ನು ಉಚ್ಚಾಟಿಸುವ ಸಂಕೇತ ಸಿಕ್ಕಿತ್ತು ಎಂದು ಹೇಳಿದರು.
ಬೆಂಗಳೂರು, ಮಾರ್ಚ್ 27: ಬಸನಗೌಡ ಪಾಟೀಲ್ ಯತ್ನಾಳ್ (Basavaraj Patil Yatnal) ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿದ ಬಳಿಕ ರಾಜ್ಯ ಬಿಜೆಪಿ ಘಟಕದಲ್ಲಿ ತಳಮಳ ಶುರುವಾಗಿದೆ. ಶಾಸಕರಾದ ಎಸ್ ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರಿಗೂ ನೋಟೀಸ್ಗಳು ಜಾರಿಯಾಗಿವೆ. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಸೋಮಶೇಖರ್, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಯತ್ನಾಳ್ ಉಚ್ಚಾಟನೆಗೊಳ್ಳಬೇಕಿತ್ತು, ಆಗಿಂದಲೂ ಅವರು ಸರ್ಕಾರ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಮಾತಾಡುತ್ತಿದ್ದರು, ಹಾಗೆಲ್ಲ ಮಾತಾಡಬಾರದು ಅಂತ ಅವರಿಗೆ ತಾನು ಹೇಳಿದ್ದೂ ಉಂಟು, ಆದರೆ ಯತ್ನಾಳ್ ಬೇರೆಯವರ ಮಾತು ಕೇಳಲ್ಲ ಎಂದು ಸೋಮಶೇಖರ್ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸೋಮಶೇಖರ್ ಕೇವಲ ತಾಂತ್ರಿಕವಾಗಿ ಬಿಜೆಪಿ ಶಾಸಕ, ಭಾವನಾತ್ಮವಾಗಿ ಆತ ಕಾಂಗ್ರೆಸ್ ಜೊತೆಗಿದ್ದಾನೆ: ಸಿಟಿ ರವಿ

ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಲಾಭ: ತಂಗಡಿಗಿ

ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ

ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್

ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
