ಪಕ್ಷವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುವವರಿಗೆ ನೋಟೀಸ್ ಇಲ್ಲ, ಅದರೆ ನನಗೆ ನೀಡುತ್ತಾರೆ: ಸೋಮಶೇಖರ್
ತಾನು ಬಿಜೆಪಿ ನಾಯಕರ ವಿರುದ್ಧ ಯಾವತ್ತೂ ವೈಯಕ್ತಿಕವಾದ ಕಾಮೆಂಟ್ಗಳನ್ನು ಮಾಡಿಲ್ಲ, ಡಿಕೆ ಶಿವಕುಮಾರ್ ಅವರನ್ನು ಕ್ಷೇತ್ರದ ಅಭಿವೃದ್ಧಿ ಕೆಲಸಗಳ ನಿಮಿತ್ತ ಭೇಟಿಯಾಗುತ್ತೇನೆ, ಅವರನ್ನು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಯಾವತ್ತೂ ಭೇಟಿಯಾಗಿಲ್ಲ, ಅವರು ಬೆಂಗಳೂರು ನಗರಭಿವೃದ್ಧಿ ಸಚಿವರಾಗಿರುವುದರಿಂದ ಭೇಟಿಯಾಗಲೇ ಬೇಕಾಗುತ್ತದೆ ಎಂದು ಸೋಮಶೇಖರ್ ಹೇಳಿದರು.
ಬೆಂಗಳೂರು, 26 ಮಾರ್ಚ್: ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ನೋಟೀಸ್ ನೀಡಿರುವುದಕ್ಕೆ ಯಶವಂತಪುರ ಶಾಸಕ ಎಸ್ಟಿ ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷದ ನಾಯಕರಿಗೆ ಹೆಚ್ಐವಿ ಸೋಂಕಿನ ಚುಚ್ಚುಮದ್ದನ್ನು ನೀಡಲು ಪ್ರಯತ್ನ ಮಾಡಿದವರಿಗೆ ನೋಟೀಸ್ ನೀಡಲ್ಲ, 120 ಕೋಟಿ ಅವ್ಯವಹಾರ ನಡೆದಿರುವುದನ್ನ ಪ್ರಸ್ತಾಪಿಸುವವರಿಗೆ ನೋಟೀಸ್ ಇಲ್ಲ, ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸುವವರು ಆರಾಮಾಗಿ ತಪ್ಪಿಸಿಕೊಳ್ಳುತ್ತಾರೆ, ಆದರೆ ಪಕ್ಷದ ಶಿಸ್ತಿನ ಸಿಪಾಯಿಯಂತಿರುವ ತನಗೆ ನೋಟೀಸ್ ನೀಡುತ್ತಾರೆ ಎಂದು ಸೋಮಶೇಖರ್ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸೋಮಶೇಖರ್ ಕೇವಲ ತಾಂತ್ರಿಕವಾಗಿ ಬಿಜೆಪಿ ಶಾಸಕ, ಭಾವನಾತ್ಮವಾಗಿ ಆತ ಕಾಂಗ್ರೆಸ್ ಜೊತೆಗಿದ್ದಾನೆ: ಸಿಟಿ ರವಿ