AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮ ನಿವಾಸದಲ್ಲಿ ಕೆಲ ಮಾಜಿ ಶಾಸಕರನ್ನು ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ

ತಮ್ಮ ನಿವಾಸದಲ್ಲಿ ಕೆಲ ಮಾಜಿ ಶಾಸಕರನ್ನು ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 26, 2025 | 12:57 PM

Share

ಪಕ್ಷದ ಹಾಲಿ ಶಾಸಕರೇ ಸರ್ಕಾರದ ಹಲವು ನಿರ್ಣಯಗಳ ಬಗ್ಗೆ ಅಸಮಾಧಾನಗೊಂಡಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಶಾಸಕರ ಜೊತೆ ಮಾತುಕತೆ ನಡೆಸಿರುವುದು ಕೊಂಚ ಅಚ್ಚರಿ ಮೂಡಿಸುತ್ತದೆ. ಅಮರೇಗೌಡ ಬಯ್ಯಾಪುರ, ರಾಮಪ್ಪ ಮುಖ್ಯಮಂತ್ರಿಯವರ ಭೇಟಿಗೆ ತಾವಾಗಿಯೇ ಬಂದರೋ ಅಥವಾ ಖುದ್ದು ಮುಖ್ಯಮಂತ್ರಿಯವರು ಕರೆಸಿದ್ದಾರೋ ಅಂತ ಗೊತ್ತಾಗಿಲ್ಲ. ಆರೋಗ್ಯ ವಿಚಾರಿಸಲು ಬಂದಿರುವ ಸಾಧ್ಯತೆ ಇದೆ.

ಬೆಂಗಳೂರು, ಮಾರ್ಚ್ 26 : ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಅವರು ಸಂವಿಧಾನ ಬದಲಿಸುತ್ತೇವೆ ಎಂದಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿರುವ ಹಿನ್ನೆಲೆ ರಾಜ್ಯ ರಾಜಕಾರಣದಲ್ಲಿ ಗಲಿಬಿಲಿಯ ಸನ್ನಿವೇಶ ಮೂಡಿರುವುದು ಸುಳ್ಳಲ್ಲ. ಏತನ್ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಿವಾಸದಲ್ಲಿ ಕೆಲ ಮಾಜಿ ಶಾಸಕರನ್ನು ಭೇಟಿಯಾಗಿದ್ದಾರೆ. ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕ ರಾಮಪ್ಪ ಅವರು ಇಂದು ಸಿದ್ದರಾಮಯ್ಯ ನಿವಾಸಕ್ಕೆ ಅಗಮಿಸಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹನಿಟ್ರ್ಯಾಪ್​​ ಕೋಲಾಹಲ ಬೆನ್ನಲ್ಲೇ ಸಿದ್ದರಾಮಯ್ಯ ಭೇಟಿಯಾದ ಖರ್ಗೆ, ಮಹತ್ವದ ಚರ್ಚೆ!

Published on: Mar 26, 2025 12:40 PM