ಶಿವಕುಮಾರ್ ವಿರುದ್ಧ ಆರೋಪ ಮಾಡೋದು ಬಿಟ್ಟು ತನ್ನ ವಿರುದ್ಧ ಮಾತಾಡುತ್ತಿರುವವರ ಮೇಲೆ ಮುನಿರತ್ನ ಕೇಸ್ ಹಾಕಲಿ: ಸೋಮಶೇಖರ್
ಎಂಟು ಸಲ ಶಾಸಕರಾಗಿ ಆಯ್ಕೆಯಾಗಿರುವ ಶಿವಕುಮಾರ್ ವಿರುದ್ಧ ಮುನಿರತ್ನ ಆರೋಪ ಮಾಡುತ್ತಿದ್ದಾರೆ, ಅನೆ ಹೋಗುತ್ತಿದ್ದರೆ ನಾಯಿ ಬೊಗಳುತ್ತಿರುತ್ತಂತೆ ಎಂದು ಹೇಳಿದ ಸೋಮಶೇಖರ್, ನಾಯರ್, ನಾರಾಯಣ ಸ್ವಾಮಿ ಮತ್ತು ಮಹಿಳೆ ಪತ್ರಿಕಾ ಗೋಷ್ಠಿ ನಡೆಸಿ ಮಾತಾಡಿದ ಬಳಿಕ ಶಿವಕುಮಾರ್ ವಿರುದ್ಧ ಮಾತಾಡುವುದನ್ನು ಮುನಿರತ್ನ ನಿಲ್ಲಿಸಿದ್ದಾರೆ ಎಂದು ಹೇಳಿದರು.
ಬೆಂಗಳೂರು, 24 ಮಾರ್ಚ್: ನಗರದಲ್ಲಿ ಇಂದು ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್, ಡಿಕೆ ಶಿವಕುಮಾರ್ ವಿರುದ್ಧ ಮುನಿರತ್ನ ಆರೋಪ ಮಾಡುತ್ತಿರೋದು ಅಲ್ಲ, ಅವರು ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ, ಆರ್ ಆರ್ ನಗರದ ವೇಲು ನಾಯರ್, ಲಗ್ಗೆರೆ ನಾರಾಯಣಸ್ವಾಮಿ ಮತ್ತೊಬ್ಬ ಮಹಿಳೆ ಮಾಡುತ್ತಿರುವ ಅರೋಪ ಈಗಿಂದಲ್ಲ, ಬಹಳ ದಿನಗಳಿಂದ ಮಾಡುತ್ತಿದ್ದಾರೆ, ವಿಧಾನ ಸೌಧದಲ್ಲೇ ತನ್ನ ಮೇಲೆ ಅತ್ಯಾಚಾರ ನಡೆಯಿತು ಅಂತ ಅ ಮಹಿಳೆ ಹೇಳುತ್ತಿದ್ದಾರೆ, ಮುನಿರತ್ನಗೆ ತಾಕತ್ತಿದ್ದರೆ ಮೊದಲು ಈ ಮೂವರ ಮೇಲೆ ಕೇಸ್ ಹಾಕಲಿ ಎಂದು ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರನ್ಯಾ ರಾವ್ ಪ್ರಕರಣದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಮಂತ್ರಿಗಳು ಯಾಕೆ ಭಾಗಿಯಾಗಿರಬಾರದು? ಎಸ್ಟಿ ಸೋಮಶೇಖರ್
Latest Videos