ಚೀಟಿಯಲ್ಲಿ ಬರೆದಿದ್ದುದನ್ನು ಹೇಳಿದರೆ ಎರಡೂ ಪಕ್ಷಗಳ ಮಹಾನ್ ನಾಯಕರು ಮನೆಗೆ ಹೋಗುತ್ತಾರೆ: ಯತ್ನಾಳ್
ಚೀಟಿಯನ್ನು ಯಾವ ಪಕ್ಷದವರು ಕಳಿಸಿದ್ದು ಅಂತ ತನಗೆ ಗೊತಿಲ್ಲ, ಆದರೆ ಅದರಲ್ಲಿ ಬರೆದಿದ್ದನ್ನು ಹೇಳಿದರೆ ದೊಡ್ಡ ಕ್ರಾಂತಿಯೇ ನಡೆದು ಹೋಗುತ್ತದೆ, ಅದರಲ್ಲಿ ಏನು ಬರೆದಿತ್ತು ಅಂತ ಈಗ ಹೇಳಲಾರೆ, ಮುಂಬರುವ ದಿನಗಳಲ್ಲಿ ಖಂಡಿತವಾಗಿಯೂ ಹೇಳುತ್ತೇನೆ, ಅದನ್ನು ಹೇಳಿದರೆ ಎರಡೂ ಪಕ್ಷಗಳ ಮಹಾನ್ ನಾಯಕರು ಮನೆಗೆ ಹೋಗಬೇಕಾಗುತ್ತದೆ ಎಂದು ಬಸನಗೌಡ ಪಾಟೀಲ್ ಹೇಳಿದರು.
ನವದೆಹಲಿ, 24 ಮಾರ್ಚ್: ವಿಧಾನಸಭಾ ಬಜೆಟ್ ಅಧಿವೇಶನ ಸಮಯದಲ್ಲಿ ಸಚಿವ ಕೆಎನ್ ರಾಜಣ್ಣ ಹನಿ ಟ್ರ್ಯಾಪ್ ವಿಷಯವನ್ನು ಪ್ರಸ್ತಾಪಿಸುತ್ತಿದಾಗ ಸದನದಲ್ಲಿ ಹರಿದಾಡಿದ ಚೀಟಿಯೊಂದರ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ದೆಹಲಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಆ ಚೀಟಿ ಯಾರು ಕಳಿಸಿದ್ದು ಅಂತ ಗೊತ್ತಿಲ್ಲ, ಆದರೆ ಹಿರಿಯ ಸಚಿವ ರಾಜಣ್ಣನವರು ಬಹಿರಂಗವಾಗೇ ಹನಿ ಟ್ರ್ಯಾಪ್ ಪ್ರಯತ್ನ ತನ್ನ ಮೇಲೆ ನಡೆಯುತ್ತಿದೆ ಅಂತ ಹೇಳಿದ್ದಾರೆ, ಅದನ್ನು ಯಾಕೆ ಮಾಡುತ್ತಿದ್ದಾರೆ, ಯಾಕೆ ಬ್ಲ್ಯಾಕ್ ಮೇಲ್ ಪ್ರಯತ್ನ ನಡೆದಿದೆ ಅಂತ ಜನತೆಗೆ ಗೊತ್ತಾಗಬೇಕು, ರಾಜಣ್ಣ ಅವರು ಯಾರ ಹೆಸರನ್ನೂ ಹೇಳಿಲ್ಲ ಅದರೆ ಅವರ ಮಾತಿನ ಧಾಟಿ ನೋಡಿದರೆ ಅವರದ್ದೇ ಪಕ್ಷದ ಮಂತ್ರಿಯೊಬ್ಬ ಭಾಗಿಯಾಗಿರುವಂತಿದೆ ಎಂದು ಯತ್ನಾಳ್ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರನ್ಯಾ ಚಿನ್ನ ಸ್ಮಗ್ಲಿಂಗ್ ಪ್ರಕರಣ: ಸಚಿವರ ನಂಟಿನ ರಹಸ್ಯದ ಬಗ್ಗೆ ಯತ್ನಾಳ್ ಸ್ಫೋಟಕ ಸುಳಿವು