ಸಚಿವನ ಹನಿ ಟ್ರ್ಯಾಪ್ ಆರೋಪಗಳಲ್ಲಿ ಎಷ್ಟು ಹುರುಳಿದೆ ಅನ್ನೋದು ಸಿಬಿಐ ತನಿಖೆ ಮೂಲಕ ಗೊತ್ತಾಗಬೇಕು: ಸಿಟಿ ರವಿ
ಹಿರಿಯ ಸಚಿವರೊಬ್ಬರು ಸದನದಲ್ಲಿ ಹನಿ ಟ್ರ್ಯಾಪ್ ಪ್ರಯತ್ನ ನಡೆದಿರುವುದನ್ನು ಪ್ರಸ್ತಾಪಿಸಿ ಸಚಿವನಾದ ತನಗೆ ರಕ್ಷಣೆ ಇಲ್ಲವೆಂದಿದ್ದಾರೆ, ಅವರು ಯಾರ ಹೆಸರನ್ನೂ ಹೇಳಿಲ್ಲವಾದರೂ ಮತ್ತೊಬ್ಬ ಹಿರಿಯ ಸಚಿವ ಶಾಮೀಲಾಗಿರುವುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಅದರಲ್ಲಿ ಯಾರೇ ಭಾಗಿಯಾಗಿರಲಿ, ತನಿಖೆ ನಡೆಯಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು ಎಂದು ರವಿ ಹೇಳಿದರು.
ಚಿಕ್ಕಮಗಳೂರು, ಮಾರ್ಚ್ 24: ಹನಿ ಟ್ರ್ಯಾಪ್ (honey trap) ಪ್ರಯತ್ನ ನಡೆದಿದೆ ಅಂತ ಹಿರಿಯ ಸಚಿವರೊಬ್ಬರು ಹೇಳಿದ್ದು ರಾಜ್ಯದೆಲ್ಲೆಡೆ ಚರ್ಚೆಯಾಗುತ್ತಿದೆ, 48 ಜನ ಶಾಸಕರು, ಮಂತ್ರಿಗಳು ನ್ಯಾಯಾಧೀಶರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ, ಈ ಆರೋಪಗಳಲ್ಲಿ ಎಷ್ಟು ಸತ್ಯಾಂಶವಿದೆ, ಎಷ್ಟು ಉತ್ಪ್ರೇಕ್ಷೆ ಇದೆ ಅಂತ ಗೊತ್ತಾಗಬೇಕು ಎಂದು ಬಿಜೆಪಿ ಎಂಎಲ್ಸಿ ಸಿಟಿ ರವಿ ಹೇಳಿದರು. ಉನ್ನತಮಟ್ಟದ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ, ಉನ್ನತಮಟ್ಟದ ತನಿಖೆಗಿಂತ ನ್ಯಾಯಾಂಗ ಇಲ್ಲವೇ ಸಿಬಿಐ ತನಿಖೆಯಾಗಬೇಕು ಎಂದು ತಾನು ಹೇಳಿರುವುದಾಗಿ ರವಿ ಚಿಕ್ಕಮಗಳೂರಲ್ಲಿ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹನಿಟ್ರ್ಯಾಪ್ ಕೋಲಾಹಲ ಬೆನ್ನಲ್ಲೇ ಸಿದ್ದರಾಮಯ್ಯ ಭೇಟಿಯಾದ ಖರ್ಗೆ, ಮಹತ್ವದ ಚರ್ಚೆ!