Sign In

By signing in or creating an account, you agree with Associated Broadcasting Company's Terms & Conditions and Privacy Policy.

Honey Trap

Honey Trap

ಹನಿ ಟ್ರ್ಯಾಪಿಂಗ್ ಎನ್ನುವುದು ಬೇಹುಗಾರಿಕೆ ಅಥವಾ ಗುಪ್ತಚರ ಕಾರ್ಯಾಚರಣೆಗಳಲ್ಲಿ ಬಳಸಲಾಗುವ ರಹಸ್ಯ ತಂತ್ರವಾಗಿದೆ. ರಹಸ್ಯಗಳನ್ನು ಹೊರತೆಗೆಯಲು ಮಹಿಳೆಯರನ್ನು ಮುಂದಿಟ್ಟುಕೊಂಡು ಕಾರ್ಯಾಚರಣೆ ನಡೆಸುವುದನ್ನು ಹನಿ ಟ್ರ್ಯಾಪ್ ಎಂದು ಕರೆಯಲಾಗುತ್ತದೆ. ರಾಜಕೀಯದಲ್ಲಿ ಇತ್ತೀಚೆಗೆ ಇದು ಹೆಚ್ಚಾಗಿ ಕೇಳಿಬರುತ್ತಿದೆ. ಮಹಿಳೆಯರು ತಮ್ಮ ಟಾರ್ಗೆಟ್ ವ್ಯಕ್ತಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿ, ನಂತರ ಬ್ಲಾಕ್ಮೇಲ್ ಮಾಡಿ ತಮ್ಮ ಉದ್ದೇಶ ಈಡೇರಿಸಿಕೊಳ್ಳುವುದು ಇತ್ತೀಚೆಗೆ ಹೆಚ್ಚಾಗಿದೆ. ಶ್ರೀಮಂತ ಮತ್ತು ಪ್ರಭಾವಿ ವ್ಯಕ್ತಿಗಳನ್ನು ಈ ಹನಿ ಟ್ರ್ಯಾಪ್ ತಂತ್ರದ ಮೂಲಕ ಬಲೆಗೆ ಕೆಡವಲಾಗುತ್ತದೆ. ಕರ್ನಾಟಕದ ರಾಜಕೀಯದಲ್ಲಿ ಆಗಾಗ ಹನಿ ಟ್ರ್ಯಾಪಿಂಗ್ ಪ್ರಕರಣ ಬೆಳಕಿಗೆ ಬರುತ್ತಲೇ ಇರುತ್ತದೆ

ಇನ್ನೂ ಹೆಚ್ಚು ಓದಿ

ಒಂದು ಕಿಸ್​ಗೆ 50 ಸಾವಿರ ರೂ! ಲಕ್ಷಾಂತರ ರೂ. ಸುಲಿಗೆ: ಬೆಂಗಳೂರಿನಲ್ಲಿ ಖತರ್ನಾಕ್ ಟೀಚರ್, ಹನಿಟ್ರ್ಯಾಪ್ ಗ್ಯಾಂಗ್ ಬಂಧನ

ರಾಜಕಾರಣಿಗಳ ಹನಿಟ್ರ್ಯಾಪ್ ದೊಡ್ಡಮಟ್ಟದಲ್ಲಿ ಸುದ್ದಿಯಾಗಿರುವ ಸಂದರ್ಭದಲ್ಲೇ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್​ನಲ್ಲಿ ಖಾಸಗಿ ಪ್ರೀಸ್ಕೂಲ್ ಶಿಕ್ಷಕಿಯೊಬ್ಬಳು ಪ್ರಿ ಸ್ಕೂಲ್​ಗೆ ಬರುತ್ತಿದ್ದ ಮಕ್ಕಳ ಪೋಷಕನನ್ನೇ ಹನಿಟ್ರ್ಯಾಪ್ ಮಾಡಿ ಲಕ್ಷಾಂತರ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ. ಪೋಷಕನಿಗೆ ಮುತ್ತು ಕೊಟ್ಟು 50 ಸಾವಿರ ರೂ. ಪೀಕಿಸಿದ್ದ ಆರೋಪಿ, ರಿಲೇಷನ್​​ಶಿಪ್​​ನಲ್ಲಿ ಇರುವುದಾಗಿ ಲಕ್ಷಾಂತರ ರೂ. ವಂಚಿಸಿ ಪೊಲೀಸ್ ಬಲೆಗೆ ಬಿದ್ದಿದ್ದಾಳೆ.

ಸಿಟಿ ರವಿಗೆ ಕಬ್ಬಿನ ಗದ್ದೆ ತೋರಿಸಿದ ಅಧಿಕಾರಿಗಳು ಕಾಮಖೆಡ್ಡಾ ಮತ್ತು ರಾಜೇಂದ್ರ ಕೊಲೆ ಯತ್ನದ ಸೂತ್ರಧಾರಿಯನ್ನು ಹಿಡಿಯುವರೇ?

ಕಾಮಖೆಡ್ಡಾ ಮತ್ತು ಮಂತ್ರಿ ಕೆನ್​ ರಾಜಣ್ಣ ಅವರ ಮಗ, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರನ್ನು ಕೊಲೆ ಸಂಚಿನ ಹಿಂದಿರುವ ಸೂತ್ರಧಾರ ಒಬ್ಬರೇ ಎಂಬ ಆರೋಪದ ಬಗ್ಗೆ ಎರಡೂ ಸದನಗಳ ಪೀಠಾಸೀನ ಅಧಿಕಾರಿಗಳು ಮುಂದೆ ನಿಂತು ಸದನದ ಹಕ್ಕು ಮತ್ತು ಮರ್ಯಾದೆ ಎತ್ತಿ ಹಿಡಿಯುವ ಕೆಲಸ ಮಾಡಲೇಬೇಕಾಗಿದೆ.

ರಾಜೇಂದ್ರ ರಾಜಣ್ಣ ಹನಿಟ್ರ್ಯಾಪ್, ಕೊಲೆ ಯತ್ನದ ಸಂಚುಕೋರ ಒಬ್ಬನೇ! ಬೆಂಗಳೂರಿನ ಪ್ರಬಲ ವ್ಯಕ್ತಿ

ಸಹಕಾರ ಸಚಿವ ಕೆಎನ್​​ ರಾಜಣ್ಣ ಹನಿಟ್ರ್ಯಾಪ್ ಯತ್ನ ಸುದ್ದಿ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಯಾದ ನಂತರ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಅವರ ಮಗ ರಾಜೇಂದ್ರ, ತಮ್ಮ ಕೊಲೆಗೆ ಯತ್ನ ನಡೆದಿತ್ತು ಎಂದು ಆರೋಪಿಸಿದ್ದರು. ಇದೀಗ ಹನಿಟ್ರ್ಯಾಪ್ ಹಾಗೂ ಕೊಲೆ ಯತ್ನದ ಸಂಚುಕೋರ ಒಬ್ಬನೇ ಎಂಬದು ತಿಳಿದುಬಂದಿದೆ.

ಮಗನ ಹತ್ಯೆಗೆ ಪ್ರಯತ್ನ ನಡೆದಿರುವ ವಿಚಾರ ತನಗೆ ಗೊತ್ತಿಲ್ಲವೆಂದು ಹೇಳಿ ಆಶ್ಚರ್ಯ ಮೂಡಿಸಿದ ರಾಜಣ್ಣ

ಹನಿ ಟ್ರ್ಯಾಪ್ ವಿಚಾರವೇ ಬೇರೆ ಮಗನ ದೂರಿನ ವಿಚಾರವೇ ಬೇರೆ ಎಂದು ರಾಜಣ್ಣ ಹೇಳುತ್ತಾರೆ. ಹನಿ ಟ್ರ್ಯಾಪ್ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿರುವುದನ್ನು ರಾಜಣ್ಣ ಸ್ವಾಗತಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಮಂತ್ರಿ ಜಿ ಪರಮೇಶ್ವರ್ ಪ್ರಕರಣವನ್ನು ಚರ್ಚಿಸಿ ಸಿಐಡಿ ತನಿಖೆಗೆ ಒಪ್ಪಿಸಿದ್ದಾರೆ, ಅವರ ತೀರ್ಮಾನವನ್ನು ತಾನು ಸ್ವಾಗತಿಸುತ್ತೇನೆ ಎಂದು ರಾಜಣ್ಣ ಹೇಳಿದರು.

ಸಚಿವ ರಾಜಣ್ಣ ಹನಿಟ್ರ್ಯಾಪ್​ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ಸದ್ದಿಲ್ಲದೇ ತನಿಖೆ ಶುರು!

KN rajanna Honeytrap Case: ಹಿರಿಯ ಮಂತ್ರಿ ಕೆಎನ್​​​ ರಾಜಣ್ಣ ಮತ್ತವರ ಪುತ್ರ MLC ರಾಜೇಂದ್ರ ಅವರಿಗೆ ಹನಿಟ್ರ್ಯಾಪ್‌ ಯತ್ನ ಆರೋಪ ಪ್ರಕರಣ ರಾಜ್ಯವಲ್ಲದೇ ದೇಶದ ರಾಜಕಾರಣದಲ್ಲೂ ಸದ್ದು ಮಾಡುತ್ತಿದೆ. ತಮ್ಮ ಮೇಲೆ ಹನಿಟ್ರ್ಯಾಪ್‌ ಯತ್ನ ನಡೆದಿದೆ. ಈ ಕುರಿತು ತನಿಖೆ ಮಾಡಿ ಎಂದು ಸಚಿವ ರಾಜಣ್ಣ, ಗೃಹ ಸಚಿವ ಪರಮೇಶ್ವರ್‌ಗೆ ಮನವಿ ಸಲ್ಲಿಸಿದ್ದರು. ಪರಮೇಶ್ವರ್‌, ಆ ಮನವಿಯನ್ನ ಡಿಜಿ, ಐಜಿಪಿ ಅಲೋಕ್ ಮೋಹನ್‌ಗೆ ರವಾಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಸದ್ದಿಲ್ಲದೇ ಈ ಹನಿಟ್ರ್ಯಾಪ್ ಪ್ರಕರಣ ತನಿಖೆ ಶುರುವಾಗಿದೆ.

ದೆಹಲಿಯಲ್ಲಿ ಮಸಲತ್ತು: ದೇವೇಗೌಡ, ಕುಮಾರಸ್ವಾಮಿ ಬೆನ್ನಲ್ಲೇ ಇನ್ನಿಬ್ಬರು ನಾಯಕರ ಭೇಟಿಗೆ ಮುಂದಾದ ಸತೀಶ್‌

ಸಚಿವ ರಾಜಣ್ಣಗೆ ಹನಿಟ್ರ್ಯಾಪ್‌ ಯತ್ನ ವಿಚಾರದಲ್ಲಿ ಗರಂ ಆಗಿರುವ ಸಚಿವ ಸತೀಶ್‌ ಜಾರಕಿಹೊಳಿ ದೆಹಲಿ ನಾಯಕರಿಗೆ ದೂರು ನೀಡಲು ಹೋಗಿದ್ದಾರೆ. ಆದರೆ, ಇದೇ ಹೊತ್ತಲ್ಲಿ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಜೊತೆಗಿನ ಭೇಟಿ ಭಾರಿ ಊಹಾಪೋಹಗಳಿಗೆ ಕಾರಣವಾಗಿದೆ. ಇದರ ಬೆನ್ನಲ್ಲೇ, ಇನ್ನಿಬ್ಬರು ಉನ್ನತ ನಾಯಕರ ಭೇಟಿಗೆ ಸತೀಶ್ ಮುಂದಾಗಿದ್ದಾರೆ ಎನ್ನಲಾಗಿದೆ.

ಹನಿ ಟ್ರ್ಯಾಪ್ ಪ್ರಕರಣ ದೆಹಲಿಗೆ ಶಿಫ್ಟ್ ಆಗುವ ಲಕ್ಷಣಗಳು ಪ್ರಖರ, ದೆಹಲಿಗೆ ಭೇಟಿ ನೀಡಲಿರೋ ಸಿಎಂ

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗಿಂತ ಸುಮಾರು ಒಂದು ವಾರದಷ್ಟು ಮೊದಲೇ ದೆಹಲಿ ಹೋಗಲಿದ್ದಾರೆ. ಎಐಸಿಸಿಯು ಎಲ್ಲ ಪಿಸಿಸಿ ಮತ್ತು ಡಿಸಿಸಿ ಅಧ್ಯಕ್ಷರ ಸಭೆ ಕರೆದಿದ್ದು ಅದರಲ್ಲಿ ಭಾಗಿಯಾಗಲು ನಾಳೆ ನಡೆಯುವ ಸಂಪುಟ ಸಭೆಯ ನಂತರ ಶಿವಕುಮಾರ್ ದೆಹಲಿಗೆ ಹೋಗುತ್ತಾರೆ. ಹನಿ ಟ್ರ್ಯಾಪ್ ಕೇಸಿಗೆ ಸಂಬಂಧಿಸಿದಂತೆ ಡಿಸಿಎಂ ಹೈಕಮಾಂಡ್ ಜೊತೆ ಚರ್ಚಿಸುವುದು ನಿಶ್ಚಿತ!

ರಾಜಕಾರಣಿಗಳು, ನ್ಯಾಯಾಧೀಶರ ಮೇಲೆ ಹನಿಟ್ರ್ಯಾಪ್ ಆರೋಪ: PIL ವಜಾಗೊಳಿಸಿದ ಸುಪ್ರೀಂ

ರಾಜಕಾರಣಿಗಳು, ನ್ಯಾಯಾಧೀಶರ ಮೇಲೆ ಹನಿಟ್ರ್ಯಾಪ್ ಆರೋಪ ಕರ್ನಾಟಕ ಸೇರಿದಂತೆ ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಈ ಸಂಬಂಧಿಸಿದಂತೆ ವಿನಯ್ ಕುಮಾರ್ ಸಿಂಗ್​​ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್​​ ಬುಧವಾರ ವಜಾಗೊಳಿಸಿ ಆದೇಶ ಹೊರಡಿಸಿದೆ. ನೀವು ಜಾರ್ಖಂಡ್​​ನವರು ನಿಮಗೇನು ಸಂಬಂಧ ಎಂದು ಪ್ರಶ್ನೆ ಮಾಡಿದೆ.

ಹನಿಟ್ರ್ಯಾಪ್​​ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ಕೊನೆಗೂ ಗೃಹ ಸಚಿವರಿಗೆ ದೂರು ನೀಡಿದ ಕೆಎನ್ ರಾಜಣ್ಣ

ಹನಿಟ್ರ್ಯಾಪ್​ ಬಗ್ಗೆ ಕೆಲವು ಸುಳಿವನ್ನ ಬಿಟ್ಟುಕೊಟ್ಟ ಸಚಿವ ಕೆಎನ್​​ ರಾಜಣ್ಣ ಇಂದು(ಮಾರ್ಚ್ 25) ದೂರು ನೀಡಲೇಬೇಕೆಂದು ತೀರ್ಮಾನ ಮಾಡಿದ್ದರು. ಪರಮೇಶ್ವರ್ ಎಲ್ಲೆ ಇದ್ದರೂ ಹುಡುಕಿಕೊಂಡು ಹೋಗಿ ದೂರು ಕೊಡುತ್ತೇನೆಂದು ಹೇಳಿದಂತೆಯೇ ತುಮಕೂರಿನಿಂದ ಬೆಂಗಳೂರಿಗೆ ಆಗಮಿಸಿದ ರಾಜಣ್ಣ ನೆಲಮಂಗಳದ ಟಿ.ಬೇಗೂರು ಕಾಲೇಜ್​ನಲ್ಲಿರುವ ಪರಮೇಶ್ವರ್​ರನ್ನು ಭೇಟಿ ಮಾಡಿದರು. ಆದ್ರೆ, ಅಲ್ಲಿ ಬದಲಿಗೆ ಬೆಂಗಳೂರಿನ ಅವರ ಸದಾಶಿವ ನಗರದ ನಿವಾಸಕ್ಕೆ ಬಂದು ಹನಿಟ್ರ್ಯಾಪ್ ಬಗ್ಗೆ ದೂರು ನೀಡಿದ್ದಾರೆ.

ಮಧುಬಲೆ ಕೇಸಿಗೆ ಬಿಗ್ ಟ್ವಿಸ್ಟ್​​: ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ?

ಬ್ಯೂ ಜೀನ್ಸ್ ಹುಡುಗಿ.. ಬೇರೆ ಬೇರೆ ಹುಡುಗಿಯರು.. ಹೈಕೋರ್ಟ್​ ಲಾಯರ್ ಎಂದು ಪರಿಚಯ.. ಹೌದು ಹನಿಟ್ರ್ಯಾಪ್​ ಪ್ರಕರಣಕ್ಕೆ ಮತ್ತೊಂದು ರಣರೋಚಕ ಟ್ವಿಸ್ಟ್ ಸಿಕ್ಕಿದೆ. ರಾಜಣ್ಣ ಅವರು ತಮ್ಮದು ತಪ್ಪಿದೆ ಎಂದಿದ್ದಾರೆ. ಯಾಕಂದ್ರೆ ಹನಿಟ್ರ್ಯಾಪ್​ ಮಾಡಲು ಬಂದಿದ್ದಾಗ ಸರ್ಕಾರಿ ನಿವಾಸಗಳಲ್ಲಿ ಸಿಸಿಟಿವಿಗಳೇ ಇಲ್ಲ. ಹೀಗಾಗಿ ಸದ್ಯ ಅದನ್ನು ಸಾಬೀತುಪಡಿಸಲು ದಾಖಲೆಗಳಿಲ್ಲದೇ ಪರದಾಡುವಂತಾಗಿದೆ. ಈ ಬಗ್ಗೆ ಸ್ವತಃ ರಾಜಣ್ಣ ಅವರೇ ಮಾತನಾಡಿದ್ದಾರೆ ಕೇಳಿ.