Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧುಬಲೆ ಕೇಸಿಗೆ ಬಿಗ್ ಟ್ವಿಸ್ಟ್​​: ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ?

ಮಧುಬಲೆ ಕೇಸಿಗೆ ಬಿಗ್ ಟ್ವಿಸ್ಟ್​​: ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ?

ರಮೇಶ್ ಬಿ. ಜವಳಗೇರಾ
|

Updated on: Mar 25, 2025 | 4:18 PM

ಬ್ಯೂ ಜೀನ್ಸ್ ಹುಡುಗಿ.. ಬೇರೆ ಬೇರೆ ಹುಡುಗಿಯರು.. ಹೈಕೋರ್ಟ್​ ಲಾಯರ್ ಎಂದು ಪರಿಚಯ.. ಹೌದು ಹನಿಟ್ರ್ಯಾಪ್​ ಪ್ರಕರಣಕ್ಕೆ ಮತ್ತೊಂದು ರಣರೋಚಕ ಟ್ವಿಸ್ಟ್ ಸಿಕ್ಕಿದೆ. ರಾಜಣ್ಣ ಅವರು ತಮ್ಮದು ತಪ್ಪಿದೆ ಎಂದಿದ್ದಾರೆ. ಯಾಕಂದ್ರೆ ಹನಿಟ್ರ್ಯಾಪ್​ ಮಾಡಲು ಬಂದಿದ್ದಾಗ ಸರ್ಕಾರಿ ನಿವಾಸಗಳಲ್ಲಿ ಸಿಸಿಟಿವಿಗಳೇ ಇಲ್ಲ. ಹೀಗಾಗಿ ಸದ್ಯ ಅದನ್ನು ಸಾಬೀತುಪಡಿಸಲು ದಾಖಲೆಗಳಿಲ್ಲದೇ ಪರದಾಡುವಂತಾಗಿದೆ. ಈ ಬಗ್ಗೆ ಸ್ವತಃ ರಾಜಣ್ಣ ಅವರೇ ಮಾತನಾಡಿದ್ದಾರೆ ಕೇಳಿ.

ಬೆಂಗಳೂರು, (ಮಾರ್ಚ್​ 25): ಬ್ಯೂ ಜೀನ್ಸ್ ಹುಡುಗಿ.. ಬೇರೆ ಬೇರೆ ಹುಡುಗಿಯರು.. ಹೈಕೋರ್ಟ್​ ಲಾಯರ್ ಎಂದು ಪರಿಚಯ.. ಹೌದು ಹನಿಟ್ರ್ಯಾಪ್​ ಪ್ರಕರಣಕ್ಕೆ ಮತ್ತೊಂದು ರಣರೋಚಕ ಟ್ವಿಸ್ಟ್ ಸಿಕ್ಕಿದೆ. ಸ್ವತಃ ಸಚಿವ ಕೆ.ಎನ್.ರಾಜಣ್ಣರೇ, ಹನಿಟ್ರ್ಯಾಪ್​ ಬಲೆಗೆ ಬೀಳಿಸೋಕೆ ಬಂದ ಟೀಂನ ಚಹರೆಯನ್ನೇ ಬಿಚ್ಚಿಟ್ಟಿದ್ದಾರೆ. 2 ಭಾರೀ ಹನಿಟ್ರ್ಯಾಪ್ ಖೆಡ್ಡಾ ತೋಡೋಕೆ ಯತ್ನಿಸಿರೋ ಸ್ಫೋಟಕ ಮಾಹಿತಿ ರಿವೀಲ್ ಮಾಡಿದ್ದಾರೆ. ಇದರ ಮಧ್ಯೆ ಇದೀಗ ತಮ್ಮದು ತಪ್ಪಿದೆ ಎಂದಿದ್ದಾರೆ. ಯಾಕಂದ್ರೆ ಹನಿಟ್ರ್ಯಾಪ್​ ಮಾಡಲು ಬಂದಿದ್ದಾಗ ಸರ್ಕಾರಿ ನಿವಾಸಗಳಲ್ಲಿ ಸಿಸಿಟಿವಿಗಳೇ ಇಲ್ಲ ಎಂದಿದ್ದಾರೆ.  ಈ ಮೂಲಕ ಹನಿಟ್ರ್ಯಾಪ್ ಮಾಡಲು ಯುವತಿ ಬಂದಿದ್ದು ಜಯಮಹಲ್  ಸರ್ಕಾರಿ ನಿವಾಸದಲ್ಲಿ ಎನ್ನುವುದು ಬಹಿರಂಗವಾದಂತಾಗಿದೆ.  ಅದರೆ ಆ ಯುವತಿ ಚಹರೆಗಳನ್ನು ಸಾಕ್ಷ್ಯಗಳಾಗಿ ಕೊಡಲು ರಾಜಣ್ಣ ಬಳಿ ಯಾವುದೇ ದಾಖಲೆಗಳಿಲ್ಲ. ಯಾಕಂದ್ರೆ ಅವರ ಸರ್ಕಾರಿ ನಿವಾಸದಲ್ಲಿ ಯಾವುದೇ ಸಿಸಿಟಿವಿಗಳಿಲ್ಲದಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಸದ್ಯ ಅದನ್ನು ಸಾಬೀತುಪಡಿಸಲು ದಾಖಲೆಗಳಿಲ್ಲದೇ ಪರದಾಡುವಂತಾಗಿದೆ.