ರಾಜೇಂದ್ರ ರಾಜಣ್ಣ ಹನಿಟ್ರ್ಯಾಪ್, ಕೊಲೆ ಯತ್ನದ ಸಂಚುಕೋರ ಒಬ್ಬನೇ! ಬೆಂಗಳೂರಿನ ಪ್ರಬಲ ವ್ಯಕ್ತಿ
ಸಹಕಾರ ಸಚಿವ ಕೆಎನ್ ರಾಜಣ್ಣ ಹನಿಟ್ರ್ಯಾಪ್ ಯತ್ನ ಸುದ್ದಿ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಯಾದ ನಂತರ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಅವರ ಮಗ ರಾಜೇಂದ್ರ, ತಮ್ಮ ಕೊಲೆಗೆ ಯತ್ನ ನಡೆದಿತ್ತು ಎಂದು ಆರೋಪಿಸಿದ್ದರು. ಇದೀಗ ಹನಿಟ್ರ್ಯಾಪ್ ಹಾಗೂ ಕೊಲೆ ಯತ್ನದ ಸಂಚುಕೋರ ಒಬ್ಬನೇ ಎಂಬದು ತಿಳಿದುಬಂದಿದೆ.

ಬೆಂಗಳೂರು, ಮಾರ್ಚ್ 29: ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna) ಪುತ್ರ ರಾಜೇಂದ್ರ (KN Rajendra) ಅವರ ಕೊಲೆಗೆ ಯತ್ನ ನಡೆಸಿರುವ ಮತ್ತು ಹನಿಟ್ರ್ಯಾಪ್ಗೆ (Honey trap) ಸಂಚು ಹೂಡಿರುವ ಆರೋಪಿ ಒಬ್ಬನೇ ಎಂಬುದು ತಿಳಿದುಬಂದಿದೆ. ಬೆಂಗಳೂರು ಮೂಲದ ಪ್ರಭಾವಿ ವ್ಯಕ್ತಿ ಕೊಲೆಗೆ ಸಂಚು ಹೂಡಿರುವುದು ರಾಜೇಂದ್ರ ಅವರು ನೀಡಿದ ದೂರಿನ ಮೇರೆಗೆ ತುಮಕೂರು ಪೊಲೀಸರು ದಾಖಲಿಸಿರುವ ಎಫ್ಐಆರ್ನಿಂದ ತಿಳಿದುಬಂದಿದೆ. ಬೆಂಗಳೂರಿನಲ್ಲಿ ಗುರುವಾರ ಡಿಜಿ ಹಾಗೂ ಐಜಿಗೆ ಎಂಎಲ್ಸಿ ರಾಜೇಂದ್ರ ದೂರು ನೀಡಿದ್ದರು. ಬಳಿಕ ಅವರ ಸಲಹೆಯಂತೆ, ಶುಕ್ರವಾರ ತುಮಕೂರು ಎಸ್ಪಿ ಅಶೋಕ್ ವೆಂಕಟ್ಗೆ ದೂರು ನೀಡಿದ್ದರು.
ರಾಜೇಂದ್ರ ನೀಡಿದ ದೂರಿನ ಆಧಾರದಲ್ಲಿ ಐವರು ಆರೋಪಿಗಳು ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಆರೋಪಿಗಳಾದ ಸೋಮ, ಭರತ್, ಅಮಿತ್, ಗುಂಡಾ ಹಾಗೂ ಯತೀಶ್ ಇತರರ ವಿರುದ್ಧ ಬಿಎನ್ಎಸ್ 109,190,329(4)61(2) ಅಡಿ ಎಫ್ಐಆರ್ ದಾಖಲಾಗಿದೆ. ಇದರಲ್ಲಿ ಸೋಮು ಎಂಬಾತ ತುಮಕೂರಿನ ಜೈಪುರ ನಿವಾಸಿಯಾಗಿದ್ದು ರೌಡಿಶೀಟರ್ ಎನ್ನಲಾಗಿದೆ. ಇತ್ತಿಚೆಗೆ ಜೈಲಿನಿಂದ ಬಿಡುಗಡೆ ಆಗಿದ್ದನಂತೆ.
70 ಲಕ್ಷ ರೂ.ಗೆ ಡೀಲ್, 5 ಲಕ್ಷ ರೂ. ಮುಂಗಡ!
ರಾಜೇಂದ್ರ ಹತ್ಯೆಗೆ 70 ಲಕ್ಷ ರೂ.ಗೆ ಡೀಲ್ ನಡೆದಿದ್ದು, 5 ಲಕ್ಷ ರೂ. ಮುಂಗಡ ಕೂಡ ನೀಡಲಾಗಿತ್ತಂತೆ. ಈ ಬಗ್ಗೆ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕಳೆದ ನವೆಂಬರ್ ತಿಂಗಳಲ್ಲಿ ಮಗಳ ಹುಟ್ಟು ಹಬ್ಬದ ಸಂದರ್ಭದಲ್ಲಿ ಕೊಲೆ ಮಾಡಲು ಸಂಚು ರೂಪಿಸಲಾಗಿದ್ದು,ಅನಾಮಧೇಯ ಮೂಲದಿಂದ ಕೆಲವು ತಿಂಗಳುಗಳ ಹಿಂದೆ ಆಡಿಯೋ ದೊರೆತಿದ್ದು,ಅದರಲ್ಲಿ ಆಯ್ದ ಒಂದು ತುಣುಕಿನಲ್ಲಿ ಇಬ್ಬರು ವ್ಯಕ್ತಿಗಳು ಮಾತನಾಡಿದ್ದಾರೆ ಎಂದು ರಾಜೇಂದ್ರ ಉಲ್ಲೇಖಿಸಿದ್ದಾರೆ. ಸೋಮ, ಭರತ್, ಅಮಿತ್, ಗುಂಡಾ, ಯತೀಶ್ ಹಾಗೂ ಇತರರು ಹತ್ಯೆ ಮಾಡುವ ಸಂಚು ರೂಪಿಸಿದ್ದರ ಬಗ್ಗೆ ಮಾಹಿತಿ ದೊರೆತಿದೆ. ಈ ಆಡಿಯೋ ತುಣಿಕಿನಲ್ಲಿ ಬೆಂಗಳೂರು ಮೂಲದ ಪ್ರಬಲ ವ್ಯಕ್ ಪಿತೂರಿಯನ್ನು ನಡೆಸಿ ಸುಪಾರಿ ಅಥವಾ ಒಪ್ಪಂದವನ್ನು 70 ಲಕ್ಷ ರೂ.ಗಳಿಗೆ ಮಾಡಿಕೊಂಡು ಅದರಲ್ಲಿ ಮುಂಗಡವಾಗಿ 5 ಲಕ್ಷ ರೂ. ನೀಡಿರುವುದಾಗಿ ತಿಳಿದುಬಂದಿದೆ. ಕಳೆದ ನವೆಂಬರ್ ತಿಂಗಳಲ್ಲಿ ಮಗಳ ಬರ್ತಡೆ ಸಂದರ್ಭದಲ್ಲಿ ಕಾರ್ಮಿಕರ ವೇಷದಲ್ಲಿ ಬಂದು ಕೃತ್ಯವೆಸಗಲು ಪ್ರಯತ್ನ ಮಾಡಿದ್ದಾರೆ. ಅಲ್ಲದೇ ಮುಂದೊಂದು ದಿನ ಹತ್ಯೆ ಮಾಡಲು ಅವರ ಕಾರಿಗೆ ಜಿಪಿಎಸ್ ಅಳವಡಿಸಲು ಸಂಚು ರೂಪಿಸಿದ್ದಾರೆಂದು ಉಲ್ಲೇಖಿಸಿದ್ದಾರೆ.
ಬೆಂಗಳೂರಿನ ಕಲಾಸಿಪಾಳ್ಯ ಮತ್ತು ತುಮಕೂರಿನ ಮಧುಗಿರಿ ಕಡೆಗಳಲ್ಲಿ ರಾಜೇಂದ್ರರ ಚಲನವಲನಗಳನ್ನು ತಿಳಿದುಕೊಳ್ಳಲು ಹಿಂಬಾಲಕರನ್ನ ನೇಮಿಸಿಕೊಂಡಿದ್ದರ ಬಗ್ಗೆ ತಿಳಿದಿದೆ ಎಂದಿದ್ದಾರೆ. ಇದಲ್ಲದೇ ಸಚಿವ ಕೆಎನ್ ರಾಜಣ್ಣರವರು ಮುಖ್ಯಮಂತ್ರಿಗಳ ಆಪ್ತ ಬೆಂಬಲಿಗರಾಗಿರುವುದರಿಂದ ರಾಜಣ್ಣ ಹಾಗೂ ರಾಜೇಂದ್ರ ರ ಮೇಲೆ ಬಲವಾದ ರಾಜಕೀಯ ದ್ವೇಷ ಹೊಂದಿದ್ದು ಬೆದರಿಕೆ ಕ್ರಿಮಿನಲ್ ಒಳಸಂಚು ಮತ್ತು ಆಮಿಷಗಳ ಮಾರ್ಗದಿಂದ ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಮಗಳ ಜನ್ಮದಿನವೇ MLC ರಾಜೇಂದ್ರ ಹತ್ಯೆಗೆ ಸ್ಕೆಚ್: ಎಫ್ಐಆರ್ ದಾಖಲು, ಪ್ರಭಾವಿ ರಾಜಕಾರಣಿಗಳ ಕೈವಾಡ ಶಂಕೆ
ಇದಲ್ಲದೆ ಕೆಲವು ಉನ್ನತ ರಾಜಕಾರಣಿಗಳು ಪಿರ್ಯಾದಿಯ ಮತ್ತು ಅವರ ತಂದೆಯಾದ, ಸಚಿವ ಕೆಎನ್ ರಾಜಣ್ಣ ಅವರು ಮಾನ್ಯ ಮುಖ್ಯಮಂತ್ರಿಗಳ ಬೆಂಬಲಿಗರಾಗಿರುವುದರಿಂದ ಅವರ ಮೇಲೆ ಬಲವಾದ ರಾಜಕೀಯ ದ್ವೇಷನನ್ನು ಹೊಂದಿದ್ದಾರೆ. ಬೆದರಿಕೆ, ಕ್ರಿಮಿನಲ್ ಒಳಸಂಚು ಮತ್ತು ಅಮಿಷಗಳ ಮಾರ್ಗದಿಂದ ರಾಜಕೀಯವಾಗಿ ಮುಗಿಸಲು ಈ ಸಂಚು ಹೂಡಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:35 am, Sat, 29 March 25