ಹೊಸ ಪಕ್ಷ ಕಟ್ಟಲ್ಲ, ವಾಪಸ್ಸು ಕರೆಸಿಕೊಳ್ಳಿ ಅಂತ ಬೇಡಲ್ಲ, ಹೋರಾಟ ಮಾಡಿ ಬಿಜೆಪಿಯನ್ನು ರಿಪೇರಿ ಮಾಡ್ತೀನಿ: ಯತ್ನಾಳ್
ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಸಂಸತ್ತಿನಲ್ಲಿ ವಿಶ್ವಾಸ ಮತ ಸೋತಾಗ ಅಧೀರರಾಗಿರಲಿಲ್ಲ, ಕುಗ್ಗಿರಲಿಲ್ಲ. ನ ದೈನಂ ನ ಪಲಾಯನಂ ಎನ್ನುತ್ತಾ ತಮ್ಮ ಹೋರಾಟ ಮುಂದುವರಿಸುತ್ತೇನೆ ಎಂದು ಹೇಳಿದ್ದರು. ತಾನು ಬಿಜೆಪಿ ಹೈಕಮಾಂಡ್ ಮುಂದೆ ಹೋಗಿ, ಕೈ ಜೋಡಿಸಿ ಪಕ್ಷಕ್ಕೆ ವಾಪಸ್ಸು ಕರ್ಕೊಳ್ಳಿ ಅಂತ ದೀನನಾಗಿ ಕೇಳಲ್ಲ, ಹೋರಾಟ ಮಾಡಿ ಮತ್ತೇ ಪಕ್ಷಕ್ಕೆ ವಾಪಸ್ಸು ಹೋಗ್ತೀನಿ ಅಂತ ಯತ್ನಾಳ್ ಹೇಳಿದರು.
ಬೆಂಗಳೂರು, ಮಾರ್ಚ್ 29: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಧ್ಯಮಗಳ ಜೊತೆ ಮಾತಾಡಿ ತಮ್ಮ ಇಂಗಿತ ಹೇಳಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ನಗರದ ಶನಿಮಹಾತ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಅವರು, ತಾನ್ಯಾವತ್ತೂ ಬಿಜೆಪಿಯನ್ನು ತೊರೆಯುವುದಿಲ್ಲ, ರಾಜ್ಯದಾದ್ಯಂತ ಸುತ್ತಿ ಬಿಜೆಪಿಯನ್ನು ರಿಪೇರಿ ಮಾಡುತ್ತೇನೆ, ಸನಾತನ ಹಿಂದೂಧರ್ಮದಿಂದ (Santana Hindu religion) ಹಳಿ ತಪ್ಪಿರುವ ಪಕ್ಷವನ್ನು ಪುನಃ ಟ್ರ್ಯಾಕ್ ಮೇಲೆ ತರುವ ಕೆಲಸ ಮಾಡುತ್ತೇನೆಯೇ ಹೊರತು ಯಾವತ್ತೂ ಹೊಸ ಪಕ್ಷ ಕಟ್ಟುವ ಕೆಲಸಕ್ಕೆ ಕೈ ಹಾಕಲ್ಲ ಎಂದು ಯತ್ನಾಳ್ ಹೇಳಿದರು.
ಇದನ್ನೂ ಓದಿ: ಉಚ್ಚಾಟನೆ ಬಳಿಕ ಯತ್ನಾಳ್ ಮತ್ತೆ ಆ್ಯಕ್ಟೀವ್: ರಹಸ್ಯ ಸಭೆಯಲ್ಲಿ ಏನೆಲ್ಲಾ ಚರ್ಚೆ ಆಯ್ತು?
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos