ಕೊಡಗಿನ ಪೊನ್ನಂಪೇಟ್ ಬಳಿ ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ, ಆರೋಪಿಯ ಶೋಧದಲ್ಲಿ ಪೊಲೀಸ್
ಹತ್ಯೆಯಾದವರ ಮನೆಯಲ್ಲಿ 10 ಮೂಟೆ ಕಾಫಿಪುಡಿ ಇದೆಯಂತೆ, ಅದರ ಮಾರಾಟಕ್ಕೆ ಸಂಬಂಧಿಸಿದಂತೆ ಕೊಲೆಗಳು ನಡೆದಿರಬಹುದೆಂದು ಪೊಲೀಸರು ಹೇಳುತ್ತಾರೆ. ನಾಗಿ ಮೂರನೇ ಮದುವೆಯಾದರೂ ತನ್ನ ಎರಡನೇ ಗಂಡನನ್ನು ಆಗಾಗ ಭೇಟಿಯಾಗುತ್ತಿದ್ದಳು, ಅದೇ ಕಾರಣಕ್ಕೆ ಆಕೆ ಮತ್ತು ಗಿರೀಶ್ ನಡುವೆ ಪದೇಪದೆ ಜಗಳ ಆಗುತಿತ್ತು ಎಂದು ಗ್ರಾಮಸ್ಥರು ಹೇಳುತ್ತಾರೆ.
ಮಡಿಕೇರಿ, ಮಾರ್ಚ್ 29: ಕೊಡಗು ಜಿಲ್ಲೆಯ ಪೊನ್ನಂಪೇಟ್ ತಾಲ್ಲೂಕಿನ ಕೋಳತೋಡು ಗ್ರಾಮದ ಕಾಫಿತೋಟದ ಲೈನ್ ಮನೆಯಲ್ಲಿ ನಿನ್ನೆ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪೊಲೀಸ್ ಅಧಿಕಾರಿಯೊಬ್ಬರು (police official) ಹೇಳುವ ಪ್ರಕಾರ ಮನೆಯಲ್ಲಿದ್ದ ಎಲ್ಲ ನಾಲ್ವರು ಕೊಲೆಯಾಗಿರುವ ಕಾರಣ ಹತ್ಯೆಯ ಹಿಂದಿನ ಉದ್ದೇಶ ಮತ್ತು ಕೊಲೆಗಾರನ ಬಗ್ಗೆ ಖಚಿತವಾದ ಮಾಹಿತಿ ಇಲ್ಲ. ಹತ್ಯೆಯಾದವರನ್ನು ಕರಿಯ, ಗೌರಿ, ನಾಗಿ ಮತ್ತು ನಾಗಿಯ 7 ವರ್ಷದ ಮಗು ಕಾವೇರಿ ಎಂದು ಗುರುತಿಸಲಾಗಿದೆ. ನಾಗಿಯ ಮೂರನೇ ಗಂಡ ಗಿರೀಶ್ ಕೊಲೆಗಳನ್ನು ಮಾಡಿರುವ ಶಂಕೆಯಿದ್ದು ಅವನನ್ನು ಟ್ರೇಸ್ ಮಾಡಲು ಪೊಲೀಸರ ಒಂದು ತಂಡ ಕೇರಳ ಹೋಗಿದೆ ಎಂದು ಅಧಿಕಾರಿ ಹೇಳುತ್ತಾರೆ.
ಇದನ್ನೂ ಓದಿ: ರೈಲ್ವೆ ನಿಲ್ದಾಣದಲ್ಲಿ ಬಾಲಕಿ ಮತ್ತವಳ ತಂದೆಯ ಹತ್ಯೆಗೈದು, ತಾನೂ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ