ರೈಲ್ವೆ ನಿಲ್ದಾಣದಲ್ಲಿ ಬಾಲಕಿ ಮತ್ತವಳ ತಂದೆಯ ಹತ್ಯೆಗೈದು, ತಾನೂ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ
ಬಿಹಾರದ ಅರಾ ರೈಲು ನಿಲ್ದಾಣದಲ್ಲಿ ಬಾಲಕಿ ಮತ್ತವಳ ತಂದೆಯನ್ನು ಹತ್ಯೆಗೈದ ವ್ಯಕ್ತಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 3 ಮತ್ತು 4ನೇ ಪ್ಲಾಟ್‌ಫಾರ್ಮ್‌ಗಳನ್ನು ಸಂಪರ್ಕಿಸುವ ಪಾದಚಾರಿ ಮಾರ್ಗದಲ್ಲಿ ಈ ಘಟನೆ ಸಂಭವಿಸಿದೆ. ದಾಳಿಕೋರನನ್ನು ಅಮನ್ ಕುಮಾರ್ ಎಂದು ಗುರುತಿಸಲಾಗಿದೆ. ಅರಾ ರೈಲ್ವೆ ನಿಲ್ದಾಣದ 3 ಮತ್ತು 4 ನೇ ಪ್ಲಾಟ್‌ಫಾರ್ಮ್‌ಗಳ ನಡುವಿನ ಮೇಲ್ಸೇತುವೆಯಲ್ಲಿ, ಗುಂಡೇಟಿನಿಂದ ಮೂವರು ಸಾವನ್ನಪ್ಪಿದ್ದಾರೆ.

ಬಿಹಾರ, ಮಾರ್ಚ್ 26: ಬಿಹಾರದ ಅರಾ ರೈಲ್ವೆ ನಿಲ್ದಾಣದಲ್ಲಿ ಬಾಲಕಿ ಮತ್ತವಳ ತಂದೆಯನ್ನು ಹತ್ಯೆಗೈದ ವ್ಯಕ್ತಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 3 ಮತ್ತು 4ನೇ ಪ್ಲಾಟ್‌ಫಾರ್ಮ್‌ಗಳನ್ನು ಸಂಪರ್ಕಿಸುವ ಪಾದಚಾರಿ ಮಾರ್ಗದಲ್ಲಿ ಈ ಘಟನೆ ಸಂಭವಿಸಿದೆ. ದಾಳಿಕೋರನನ್ನು ಅಮನ್ ಕುಮಾರ್ ಎಂದು ಗುರುತಿಸಲಾಗಿದೆ.
ಅರಾ ರೈಲ್ವೆ ನಿಲ್ದಾಣದ 3 ಮತ್ತು 4 ನೇ ಪ್ಲಾಟ್‌ಫಾರ್ಮ್‌ಗಳ ನಡುವಿನ ಮೇಲ್ಸೇತುವೆಯಲ್ಲಿ, ಗುಂಡೇಟಿನಿಂದ ಮೂವರು ಸಾವನ್ನಪ್ಪಿದ್ದಾರೆ. ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, 23-24 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ 16-17 ವರ್ಷ ವಯಸ್ಸಿನ ಬಾಲಕಿ ಮತ್ತು ಆಕೆಯ ತಂದೆಗೆ ಗುಂಡು ಹಾರಿಸಿದ್ದಾನೆ. ನಂತರ ಅವನು ಸ್ವತಃ ಗುಂಡು ಹಾರಿಸಿಕೊಂಡಿದ್ದಾನೆ. ಸೂಕ್ತ ತನಿಖೆ ನಡೆಯಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪರಿಚಯ್ ಕುಮಾರ್ ಹೇಳಿದ್ದಾರೆ.
ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿಯ ಹಿಂದಿನ ನಿಖರವಾದ ಉದ್ದೇಶ ಇನ್ನೂ ತಿಳಿದುಬಂದಿಲ್ಲವಾದರೂ, ಪ್ರೇಮ ಪ್ರಕರಣ ಇರಬಹುದೆಂಬ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
#WATCH | Arrah, Bihar: RPF Senior Commandant Prakash Panda says, “… Three people have died. The accused, Aman Kumar, a 24-year-old man, a resident of Bhojpur shot dead Jiya Kumari and her father Anil Sinha. He later shot himself. We are investigating… We will make… https://t.co/xDfhWnyN5j pic.twitter.com/vPWQgxXYzr
— ANI (@ANI) March 26, 2025
ಪೊಲೀಸ್ ತನಿಖೆ ಆರಂಭವಾಗಿದ್ದು, ವಿಧಿವಿಜ್ಞಾನ ತಜ್ಞರು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಆ ಹುಡುಗಿ ದೆಹಲಿಗೆ ರೈಲು ಹತ್ತಲು ನಿಲ್ದಾಣಕ್ಕೆ ಬಂದಿದ್ದಳು. ಭೋಜ್‌ಪುರದ ನಿವಾಸಿ 24 ವರ್ಷದ ಆರೋಪಿ ಅಮನ್ ಕುಮಾರ್ ಜಿಯಾ ಕುಮಾರಿ ಮತ್ತು ಅವರ ತಂದೆ ಅನಿಲ್ ಸಿನ್ಹಾ ಅವರನ್ನು ಗುಂಡಿಕ್ಕಿ ಕೊಂದಿದ್ದಾನೆ. ನಂತರ ಅವನು ಸ್ವತಃ ಗುಂಡು ಹಾರಿಸಿಕೊಂಡಿದ್ದಾನೆ.
ಮತ್ತಷ್ಟು ಓದಿ: ಮೀರತ್ ಕೊಲೆ: ಮಗಳಿಗೆ ಕಾನೂನು ನೆರವು ನೀಡುವುದಿಲ್ಲ, ಅವಳೊಂದಿಗಿನ ಎಲ್ಲಾ ಸಂಬಂಧಗಳು ಕಟ್: ಮುಸ್ಕಾನ್ ತಾಯಿ
ನಾವು ತನಿಖೆ ನಡೆಸುತ್ತಿದ್ದೇವೆ. ರೈಲ್ವೆ ನಿಲ್ದಾಣದಲ್ಲಿ ಸುಮಾರು 40 ಕ್ಯಾಮೆರಾಗಳಿದ್ದರೂ, ಪಾದಚಾರಿ ಸೇತುವೆಯ ಮೇಲೆ ಕೆಲವನ್ನು ಅಳವಡಿಸುತ್ತೇವೆ. ಕೊಲೆಗೆ ಬಳಸಬಹುದಾದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರ್ಪಿಎಫ್ ಹಿರಿಯ ಕಮಾಂಡೆಂಟ್ ಪ್ರಕಾಶ್ ಪಾಂಡಾ ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:38 am, Wed, 26 March 25