Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿತ್ಯಾನಂದನ ಕೈಲಾಸಕ್ಕೆ ಗಂಡಾಂತರ ತಂದೊಡ್ಡಿದ ಬೊಲಿವಿಯಾ

Nithyananda: ಕೈಲಾಸ ದೇಶವನ್ನು ರಚಿಸುವ ಮೂಲಕ ಇಡೀ ಜಗತ್ತನ್ನು ಬೆಚ್ಚಿಬೀಳಿಸಿದ ಸ್ವಯಂ ಘೋಷಿತ ಧಾರ್ಮಿಕ ನಾಯಕ ನಿತ್ಯಾನಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನಿತ್ಯಾನಂದ ಈಗ ಕೈಲಾಸದ ಗಡಿಗಳನ್ನು ವಿಸ್ತರಿಸಲು ಬಯಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಅವರು ದಕ್ಷಿಣ ಅಮೆರಿಕಾದಲ್ಲಿರುವ ಬೊಲಿವಿಯಾ ಮೇಲೆ ಕಣ್ಣು ಹಾಕಿದ್ದಾರೆ. ನಿತ್ಯಾನಂದ ತನ್ನ ಶಿಷ್ಯರೊಂದಿಗೆ ಅಲ್ಲಿ 4.8 ಲಕ್ಷ ಹೆಕ್ಟೇರ್ ಭೂಮಿಯನ್ನು ಆಕ್ರಮಿಸಿಕೊಂಡಿದ್ದಾರೆ. ಈ ಮಾಹಿತಿ ಬಂದ ತಕ್ಷಣ, ಭಾರತದಿಂದ ಬೊಲಿವಿಯಾದವರೆಗಿನ ಸರ್ಕಾರಗಳು ಕಾರ್ಯಪ್ರವೃತ್ತವಾಗಿವೆ.

ನಿತ್ಯಾನಂದನ ಕೈಲಾಸಕ್ಕೆ ಗಂಡಾಂತರ ತಂದೊಡ್ಡಿದ ಬೊಲಿವಿಯಾ
Nityananda
Follow us
ಸುಷ್ಮಾ ಚಕ್ರೆ
|

Updated on:Mar 25, 2025 | 10:02 PM

ನವದೆಹಲಿ, ಮಾರ್ಚ್ 25: ಅತ್ಯಾಚಾರ ಆರೋಪದ ನಂತರ ಕರ್ನಾಟಕದಿಂದ ಪರಾರಿಯಾಗಿದ್ದ ನಿತ್ಯಾನಂದ “ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ” ಅಥವಾ “ಯುಎಸ್​ಕೆ” ಎಂಬ ಸಾರ್ವಭೌಮ ರಾಷ್ಟ್ರವನ್ನು ಸ್ಥಾಪಿಸಿದ್ದರು. ಆದರೆ, ಆ ಜಾಗ ಎಲ್ಲಿದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಹೀಗಿದ್ದರೂ ಅವರ ಭಕ್ತರ ಸಂಖ್ಯೆಯೇನೂ ಕಡಿಮೆಯಾಗಿರಲಿಲ್ಲ. ಈ ಕಾಲ್ಪನಿಕ ದೇಶವು ಈಕ್ವೆಡಾರ್‌ನ ದ್ವೀಪದಲ್ಲಿ ಸ್ಥಾಪನೆಯಾಗಿದೆ ಎಂದು ಊಹಸಲಾಗಿತ್ತು. ಆದರೆ, ಆ ದೇಶದ ಯಾವುದೇ ಫೋಟೋಗಳಾಗಲಿ, ವಿಡಿಯೋಗಳಾಗಲಿ ಸಿಕ್ಕಿರಲಿಲ್ಲ. ಇದೀಗ ಇದೇ ನಿತ್ಯಾನಂದ ಜಾಗತಿಕ ಭೂಹಗರಣದ ಆರೋಪಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ಖಂಡದಲ್ಲಿರುವ ಬೊಲಿವಿಯಾ ದೇಶದ 4.8 ಲಕ್ಷ ಹೆಕ್ಟೇರ್ ಭೂಮಿಯನ್ನು ಆಕ್ರಮಿಸಿಕೊಂಡಿರುವ ಆರೋಪವನ್ನು ನಿತ್ಯಾನಂದ ಎದುರಿಸುತ್ತಿದ್ದಾರೆ.

2019ರಲ್ಲಿ ಭಾರತದಿಂದ ಪಲಾಯನ ಮಾಡಿ “ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ” ಎಂಬ ಸಾರ್ವಭೌಮ ರಾಷ್ಟ್ರವನ್ನು ಸ್ಥಾಪಿಸಿದ್ದೇನೆಂದು ಹೇಳಿಕೊಂಡಿರುವ ಸ್ವಯಂ ಘೋಷಿತ ದೇವಮಾನವ ಮತ್ತು ದೇಶಭ್ರಷ್ಟ ನಿತ್ಯಾನಂದ ಇಡೀ ಜಗತ್ತನ್ನು ಬೆಚ್ಚಿಬೀಳಿಸುವ ಜಾಗತಿಕ ಭೂ ಹಗರಣದ ಭಾಗವಾಗಿದ್ದಾರೆ. ಕೈಲಾಸ ದೇಶವನ್ನು ರಚಿಸುವ ಮೂಲಕ ಇಡೀ ಜಗತ್ತನ್ನು ಬೆಚ್ಚಿಬೀಳಿಸಿದ ಸ್ವಯಂ ಘೋಷಿತ ಧಾರ್ಮಿಕ ನಾಯಕ ನಿತ್ಯಾನಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನಿತ್ಯಾನಂದ ಈಗ ಕೈಲಾಸದ ಗಡಿಗಳನ್ನು ವಿಸ್ತರಿಸಲು ಬಯಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಅವರು ದಕ್ಷಿಣ ಅಮೆರಿಕಾದಲ್ಲಿರುವ ಬೊಲಿವಿಯಾ ಮೇಲೆ ಕಣ್ಣು ನೆಟ್ಟಿದ್ದಾರೆ. ನಿತ್ಯಾನಂದ ತನ್ನ ಶಿಷ್ಯರೊಂದಿಗೆ ಅಲ್ಲಿ 4.8 ಲಕ್ಷ ಹೆಕ್ಟೇರ್ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಮಾಹಿತಿ ಬಂದ ತಕ್ಷಣ, ಭಾರತದಿಂದ ಬೊಲಿವಿಯಾಕ್ಕೆ ಸರ್ಕಾರಗಳು ಕ್ರಮ ಕೈಗೊಂಡಿವೆ.

ಇದನ್ನೂ ಓದಿ: ನಿತ್ಯಾನಂದನಿಗೆ ನೀಡಿದ್ದ ಬ್ಲೂ ನೋಟೀಸ್ ಪ್ರಜ್ವಲ್ ವಿರುದ್ಧ ಬಳಕೆ ಸಾಧ್ಯತೆ; ಏಳು ಇಂಟರ್ಪೋಲ್ ನೋಟೀಸ್ ಬಗ್ಗೆ ತಿಳಿಯಿರಿ

ಇದನ್ನೂ ಓದಿ
Image
ರಾಜ್ಯಸಭೆಯಲ್ಲಿ ಅಸಂಸದೀಯ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚನೆ
Image
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌
Image
ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ
Image
ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು

ಸದ್ಯದ ಮಾಹಿತಿಯ ಪ್ರಕಾರ, ನಿತ್ಯಾನಂದ ಮತ್ತು ಅವರ ಶಿಷ್ಯರು ಮೊದಲು ಬೊಲಿವಿಯಾದಲ್ಲಿ ಬುಡಕಟ್ಟು ಜನಾಂಗದ ಭೂಮಿಯನ್ನು ಅಲ್ಲಿನ ಜನರಿಗೆ ವಂಚನೆ ಮಾಡಿ ಖರೀದಿಸಿದ್ದಾರೆ. ಆ ಭೂಮಿಯನ್ನು ಖರೀದಿಸಿದ ನಂತರ, ನಿತ್ಯಾನಂದ ಅದನ್ನು ಕೈಲಾಸದ ವಿಸ್ತರಣೆ ಎಂದು ಘೋಷಿಸಲು ಪ್ರಯತ್ನಿಸಿದರು. ಆದರೆ ಅದಕ್ಕೂ ಮೊದಲು ಭೂಮಿಯನ್ನು ಖರೀದಿಸಿದ ಸುದ್ದಿ ಮಾಧ್ಯಮಗಳಿಗೆ ಸೋರಿಕೆಯಾಯಿತು.

4.8 ಲಕ್ಷ ಹೆಕ್ಟೇರ್ ಭೂಮಿ ವಂಚನೆ:

ನಿತ್ಯಾನಂದ ಮತ್ತು ಅವರ ಶಿಷ್ಯರು ಒಟ್ಟಾಗಿ ಬೊಲಿವಿಯಾದಲ್ಲಿ 4 ಲಕ್ಷದ 80 ಸಾವಿರ ಎಕರೆ ಸರ್ಕಾರಿ ಭೂಮಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಭೂಮಿಯನ್ನು 1000 ವರ್ಷಗಳ ಕಾಲ ಗುತ್ತಿಗೆಗೆ ಪಡಯಲಾಗಿದೆ. ಈ ಭೂಮಿಯ ಗುತ್ತಿಗೆ ಮೊತ್ತವನ್ನು ವರ್ಷಕ್ಕೆ 8.96 ಲಕ್ಷ ರೂ., ಮಾಸಿಕ 74,667 ರೂ. ಮತ್ತು ದೈನಂದಿನ 2,455 ರೂ. ಎಂದು ಪ್ರಸ್ತಾಪಿಸಲಾಗಿತ್ತು.

ಇದನ್ನೂ ಓದಿ: ನಿತ್ಯಾನಂದನ ಸೇವೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಈ ಸುಂದರಿ ಯಾರು?

ಬೊಲಿವಿಯಾದ ವಿದೇಶಾಂಗ ಸಚಿವಾಲಯ ಈ ಬಗ್ಗೆ ಹೇಳಿಕೆ ನೀಡಿದ್ದು, ಬೊಲಿವಿಯಾ “ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ” ಎಂದು ಕರೆಯಲ್ಪಡುವ ಆಪಾದಿತ ರಾಷ್ಟ್ರದೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಹೊಂದಿಲ್ಲ. “ಏಕೆಂದರೆ ಅವರು ಅಂತಾರಾಷ್ಟ್ರೀಯ ಸಮುದಾಯದಲ್ಲಿ ಬೇರೆ ಯಾವುದೇ ದೇಶದಿಂದ ರಾಜ್ಯವಾಗಿ ಗುರುತಿಸಲ್ಪಟ್ಟಿಲ್ಲ” ಎಂದು ಹೇಳಿದೆ.

ವರದಿಯ ಪ್ರಕಾರ, ಕೈಲಾಸದ ಪ್ರತಿನಿಧಿಗಳು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹಲವಾರು ತಿಂಗಳುಗಳ ಕಾಲ ಬೊಲಿವಿಯಾದಲ್ಲಿ ಇದ್ದರು. ಭೂಮಿಯನ್ನು ವಶಪಡಿಸಿಕೊಳ್ಳಲು ಸ್ಥಳೀಯ ನಾಯಕರ ಸಹಾಯವನ್ನು ಪಡೆದಿದ್ದರು. ಒಪ್ಪಂದವನ್ನು ಅಂತಿಮಗೊಳಿಸಿದ ನಂತರ ನಿತ್ಯಾನಂದ ಶಿಷ್ಯರು ಜನರಿಂದ ಒಪ್ಪಂದಕ್ಕೂ ಸಹಿ ಹಾಕಿಸಿಕೊಂಡಿತು. ಆದರೆ, ಈ ಸುದ್ದಿಯನ್ನು ತಕ್ಷಣವೇ ಸ್ಥಳೀಯ ಮಾಧ್ಯಮಗಳಿಗೆ ಸೋರಿಕೆ ಮಾಡಲಾಯಿತು. ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ನಂತರ, ನಿತ್ಯಾನಂದ ಮತ್ತು ಅವರ ಶಿಷ್ಯರು ಸ್ಥಳೀಯ ಪತ್ರಕರ್ತರಿಗೆ ಬೆದರಿಕೆ ಹಾಕಿದರು ಎಂದು ಹೇಳಲಾಗುತ್ತಿದೆ. ಆದರೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾದಾಗ, ಅದು ನಿತ್ಯಾನಂದನ ಈ ಸಂಪೂರ್ಣ ಒಪ್ಪಂದವನ್ನು ರದ್ದುಗೊಳಿಸಿತು.

ಯಾರು ಈ ನಿತ್ಯಾನಂದ?:

2019ರಿಂದ ನಿತ್ಯಾನಂದ ಭಾರತದಿಂದ ಪರಾರಿಯಾಗಿದ್ದು, ಅವರ ವಿರುದ್ಧ ಹಲವು ಗಂಭೀರ ಆರೋಪಗಳಿವೆ. ಅವರು ಕೈಲಾಸ ಎಂಬ ನಕಲಿ ರಾಷ್ಟ್ರವನ್ನು ಸ್ಥಾಪಿಸಿದ್ದಾರೆ. ಅದರಲ್ಲಿ ಅವರು ತಮ್ಮದೇ ಆದ ಕರೆನ್ಸಿ ಮತ್ತು ಸಂವಿಧಾನವನ್ನು ಹೊಂದಿದ್ದಾರೆಂದು ಹೇಳಿಕೊಳ್ಳುತ್ತಾರೆ. 2010ರಲ್ಲಿ ನಿತ್ಯಾನಂದನ ಅಶ್ಲೀಲ ಸಿಡಿ ಹೊರಬಂದಿತು. ಇದರಿಂದಾಗಿ ಅವರ ಬಂಧನಕ್ಕೂ ಕ್ರಮ ಕೈಗೊಳ್ಳಲಾಯಿತು. 2012ರಲ್ಲಿ ನಿತ್ಯಾನಂದನ ವಿರುದ್ಧ ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. 2019ರಲ್ಲಿ ಇಬ್ಬರು ಹುಡುಗಿಯರನ್ನು ಅಪಹರಿಸಿ ಬಂಧಿಯಾಗಿರಿಸಿದ್ದಕ್ಕಾಗಿ ನಿತ್ಯಾನಂದನ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಅವರು ಭಾರತ ದೇಶದಿಂದ ಪಲಾಯನ ಮಾಡಿರುವುದರಿಂದ ನಿತ್ಯಾನಂದನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:26 pm, Tue, 25 March 25