AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸರವಾಗಿದ್ದರೆ ಕ್ಷಮಿಸಿ; ರಾಜ್ಯಸಭೆಯಲ್ಲಿ ಅಸಂಸದೀಯ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚನೆ

ಕೇಂದ್ರ ಸರ್ಕಾರದ ಬಜೆಟ್ ಅಧಿವೇಶನದ ಎರಡನೇ ಹಂತದ ಸಂದರ್ಭದಲ್ಲಿ ಇಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗಳು ಮೇಲ್ಮನೆಯಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಹೊಸ ಶಿಕ್ಷಣ ನೀತಿ (ಎನ್‌ಇಪಿ) ಕುರಿತು ನಡೆಯುತ್ತಿರುವ ಭಾಷಾ ವಿವಾದದ ಕುರಿತು ನಾಯಕರು ಚರ್ಚೆ ನಡೆಸುತ್ತಿದ್ದಾಗ ಮಲ್ಲಿಕಾರ್ಜುನ ಖರ್ಗೆ ಮೇಲೆದ್ದು ನಿಂತು ಮಾತನಾಡಿದ್ದಾರೆ.

ಬೇಸರವಾಗಿದ್ದರೆ ಕ್ಷಮಿಸಿ; ರಾಜ್ಯಸಭೆಯಲ್ಲಿ ಅಸಂಸದೀಯ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚನೆ
Mallikarjun Kharge In Rajya Sabha Session
ಸುಷ್ಮಾ ಚಕ್ರೆ
|

Updated on: Mar 11, 2025 | 4:20 PM

Share

ನವದೆಹಲಿ, (ಮಾರ್ಚ್ 11): ರಾಜ್ಯಸಭಾ ಕಲಾಪದ ವೇಳೆ ಉಪಸಭಾಪತಿ ಹರಿವಂಶ್ ವಿರುದ್ಧವೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹರಿಹಾಯ್ದಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕ್ಷಮೆ ಕೇಳಿದ್ದಾರೆ. ಆಡಳಿತ ಪಕ್ಷದ ಸದಸ್ಯರ ವಿರೋಧದ ಬಳಿಕ ಅವರು ಕ್ಷಮೆ ಕೇಳಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಲು ಬಯಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಉಪಸಭಾಪತಿ ಹರಿವಂಶ್ ಅವಕಾಶ ನೀಡಲಿಲ್ಲ. ಇದಕ್ಕೆ ಆಕ್ರೋಶಗೊಂಡ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಏಕಾಏಕಿ ಎದ್ದು ಸದನದಲ್ಲಿ ಮಾತನಾಡಲು ಪ್ರಾರಂಭಿಸಿದ್ದರು. ಇದಕ್ಕೆ ಉಪಸಭಾಪತಿ ಹರಿವಂಶ್ ವಿರೋಧ ವ್ಯಕ್ತಪಡಿಸಿದ್ದರು. ದೇಶದಲ್ಲಿ ಸರ್ವಾಧಿಕಾರ ನಡೆದಿದೆ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ವೇಳೆ ರಾಜ್ಯಸಭಾ ಪೀಠಾಧ್ಯಕ್ಷರ ಸೀಟ್ ಕಡೆ ಬೆರಳು ಮಾಡಿ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ನಾವು ಮಾತನಾಡಲು ತಯಾರಿ ಮಾಡಿಕೊಂಡು ಬಂದಿದ್ದೇವೆ,ಆದರೆ ನೀವು ಬೇರೆ ಏನೋ ಬಯಸುತ್ತಿದ್ದೀರಿ ಎಂದು ಖರ್ಗೆ ಆಕ್ರೋಶ ಹೊರಹಾಕಿದ್ದರು. ಆದರೆ, ಖರ್ಗೆ ಮಾತಿಗೆ ಉಪಸಭಾಪತಿ ಹರಿವಂಶ್ ಹಾಗೂ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಸಾಂವಿಧಾನಿಕ ಪದ ಬಳಕೆ ಮಾಡಿದ್ದಾರೆ ಎಂದು ಆಡಳಿತ ಪಕ್ಷ ಗದ್ದಲ ಮಾಡಿದ್ದರು. ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ ಕ್ಷಮೆ ಕೇಳಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯನವರ ಬಜೆಟ್ ಮುಸಲ್ಮಾನರಿಗೆ ರಂಜಾನ್ ಕೊಡುಗೆ: ಬಿಜೆಪಿ ರಾಜ್ಯಸಭಾ ಸದಸ್ಯ ವ್ಯಂಗ್ಯ

ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗಳನ್ನು ಬಿಜೆಪಿ ಮುಖ್ಯಸ್ಥ ಮತ್ತು ಸದನದ ನಾಯಕ ಜೆ.ಪಿ. ನಡ್ಡಾ ಖಂಡಿಸಿದ್ದಾರೆ. ಖರ್ಗೆ ಅವರು “ಕ್ಷಮಿಸಲಾಗದ” ಹೇಳಿಕೆ ನೀಡಿದ್ದಾರೆ. ಅವರು ಕ್ಷಮೆ ಯಾಚಿಸಬೇಕು ಮತ್ತು ಆ ಅಸಾಂವಿಧಾನಿಕ ಪದವನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

“ದೇಶದಲ್ಲಿ ಪ್ರಾದೇಶಿಕ ವಿಭಜನೆ ಸೃಷ್ಟಿಸಿದ್ದಕ್ಕಾಗಿ ಬಿಜೆಪಿಯನ್ನು ಟೀಕಿಸಲು ಉದ್ದೇಶಿಸಿದ್ದೇನೆಯೇ ವಿನಃ ಉಪ ಸಭಾಪತಿಯನ್ನು ಉದ್ದೇಶಿಸಿ ನಾನು ಆ ಮಾತನ್ನು ಹೇಳಲಿಲ್ಲ” ಎಂದು ಹೇಳುವ ಮೂಲಕ ಮಲ್ಲಿಕಾರ್ಜುನ ಖರ್ಗೆ ತಕ್ಷಣ ಕ್ಷಮೆಯಾಚಿಸಿದರು. ರಾಜ್ಯಸಭೆಯು ಶಿಕ್ಷಣ ಸಚಿವಾಲಯದ ಕಾರ್ಯವೈಖರಿಯ ಕುರಿತು ಚರ್ಚೆಯನ್ನು ಪ್ರಾರಂಭಿಸಿದಾಗ ಮತ್ತು ವಿರೋಧ ಪಕ್ಷದ ನಾಯಕರು ಎನ್‌ಇಪಿ ಕುರಿತು ತಮಿಳುನಾಡು ಸರ್ಕಾರದ ಕುರಿತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸೋಮವಾರ ನೀಡಿದ ಹೇಳಿಕೆಗಳನ್ನು ಖಂಡಿಸಿದಾಗ ಈ ಘಟನೆ ನಡೆಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ