PM Modi in Mauritius: ಮಖಾನಾ, ಮಹಾಕುಂಭದ ಗಂಗಾಜಲ, ಗಣೇಶನ ವಿಗ್ರಹ; ಮಾರಿಷಸ್ ಅಧ್ಯಕ್ಷರಿಗೆ ಪ್ರಧಾನಿ ಮೋದಿಯ ಉಡುಗೊರೆ
ಇಂದು (ಮಂಗಳವಾರ) ಎರಡು ದಿನಗಳ ಭೇಟಿಗಾಗಿ ಮಾರಿಷಸ್‌ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಪೋರ್ಟ್ ಲೂಯಿಸ್‌ನಲ್ಲಿ ಮಾರಿಷಸ್ ಅಧ್ಯಕ್ಷ ಧರಂಬೀರ್ ಗೋಖೂಲ್ ಮತ್ತು ಪ್ರಥಮ ಮಹಿಳೆ ವೃಂದಾ ಗೋಖೂಲ್ ಅವರನ್ನು ಭೇಟಿಯಾದರು. ಪ್ರಧಾನಿ ಮೋದಿ ಮಾರಿಷಸ್ ಅಧ್ಯಕ್ಷರಿಗೆ ಪ್ರಯಾಗ್‌ರಾಜ್‌ನ ಮಹಾಕುಂಭ ನಡೆದ ತ್ರಿವೇಣಿ ಸಂಗಮದಿಂದ ಪವಿತ್ರ ನೀರು, ಬಿಹಾರದ ಸೂಪರ್‌ಫುಡ್ ಮಖಾನಾ ಮತ್ತು ಗಣೇಶನ ವಿಗ್ರಹವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಪೋರ್ಟ್ ಲೂಯಿಸ್, (ಮಾರ್ಚ್ 11): ಭಾರತ ಮತ್ತು ಮಾರಿಷಸ್ ನಡುವಿನ ಐತಿಹಾಸಿಕ ಮತ್ತು ನಾಗರಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi Mauritius Visit) ಇಂದು ಪೋರ್ಟ್ ಲೂಯಿಸ್‌ನಲ್ಲಿ ಮಾರಿಷಸ್ ಅಧ್ಯಕ್ಷ ಧರಮ್ ಗೋಖೂಲ್ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಫೆಬ್ರವರಿ 26ರಂದು ಮುಕ್ತಾಯಗೊಂಡ ಮಹಾ ಕುಂಭ ಮೇಳದಿಂದ ಪವಿತ್ರ ಗಂಗಾ ನೀರನ್ನು ಉಡುಗೊರೆಯಾಗಿ ನೀಡಿದರು. ಹಾಗೇ, ಗಣೇಶನ ವಿಗ್ರಹ, ಮಖಾನಾವನ್ನು ಕೂಡ ನೀಡಿದ್ದಾರೆ. 2024ರ ಡಿಸೆಂಬರ್ 2ರಂದು ಕೊನೆಗೊಂಡ ಪೃಥ್ವಿರಾಜ್ ಸಿಂಗ್ ರೂಪನ್ ಅವರ ಅಧಿಕಾರಾವಧಿಯ ನಂತರ ಗೋಖೂಲ್ ಅವರು ಡಿಸೆಂಬರ್‌ನಲ್ಲಿ ಮಾರಿಷಸ್‌ನ ಹೊಸ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು.
ಇಂದು ಸಂಜೆ ಮಾರಿಷಸ್ ಪ್ರಧಾನಿ ರಾಮ್‌ಗೂಲಮ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸುವ ಮೊದಲು, ಪ್ರಧಾನಿ ಮೋದಿ ಮಾರಿಷಸ್‌ನಲ್ಲಿರುವ ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಲಿದ್ದಾರೆ. ಇಂದು ಸಂಜೆ ಪ್ರಧಾನಿ ರಾಮ್‌ಗೂಲಮ್ ಅವರು ಪ್ರಧಾನಿ ಮೋದಿ ಅವರ ಗೌರವಾರ್ಥವಾಗಿ ಔತಣಕೂಟವನ್ನು ಆಯೋಜಿಸಲಿದ್ದಾರೆ.
ಇದನ್ನೂ ಓದಿ: ಮಾರಿಷಸ್ ತಲುಪಿದ ಪ್ರಧಾನಿ ಮೋದಿ: ಪ್ರಮುಖ ಒಪ್ಪಂದಗಳಿಗೆ ಸಹಿ ನಿರೀಕ್ಷೆ
ತಮ್ಮ ಎರಡು ದಿನಗಳ ರಾಜ್ಯ ಭೇಟಿಯ ಎರಡನೇ ಮತ್ತು ಕೊನೆಯ ದಿನವಾದ ಬುಧವಾರ ಪ್ರಧಾನಿ ಮೋದಿ ಮಾರಿಷಸ್‌ನ 57ನೇ ರಾಷ್ಟ್ರೀಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.ವಿವಿಧ ಕಾರ್ಯಕ್ರಮಗಳ ಹೊರತಾಗಿ, ಪ್ರಧಾನಿ ಮೋದಿ ಮಾರಿಷಸ್‌ನಲ್ಲಿ ಹಲವಾರು ರಾಜಕೀಯ ಪಕ್ಷಗಳ ನಾಯಕರನ್ನು ಭೇಟಿ ಮಾಡಲಿದ್ದಾರೆ.
PM Modi gifted Makhana to Mauritius President. He also presented Holy Sangam water from Mahakumbh.
He gifted a Banarasi Saree in a Sadeli box to the wife of Mauritius. The Sadeli box from Gujarat, featuring intricate inlay work, designed to store precious sarees, jewelry, or… pic.twitter.com/fdtALmozJS
— Abhinandan Mishra (@mishra_abhi) March 11, 2025
ಇಂದು ಮುಂಜಾನೆ ಪೋರ್ಟ್ ಲೂಯಿಸ್‌ಗೆ ಬಂದಿಳಿದ ನಂತರ ಪ್ರಧಾನಿ ಮೋದಿ ಅವರು “ಮಾರಿಷಸ್‌ಗೆ ಬಂದಿಳಿದಿದ್ದೇನೆ. ವಿಮಾನ ನಿಲ್ದಾಣದಲ್ಲಿ ನನ್ನನ್ನು ಸ್ವಾಗತಿಸಿದ ನನ್ನ ಸ್ನೇಹಿತ ಪ್ರಧಾನಿ ಡಾ. ನವೀನ್‌ಚಂದ್ರ ರಾಮ್‌ಗೂಲಂ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಈ ಭೇಟಿ ವಿವಿಧ ವಲಯಗಳಲ್ಲಿ ಸಹಯೋಗಕ್ಕಾಗಿ ಹೊಸ ಮಾರ್ಗಗಳನ್ನು ಅನ್ವೇಷಿಸಲು ಒಂದು ಅದ್ಭುತ ಅವಕಾಶವಾಗಿದೆ” ಎಂದು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಮಾರಿಷಸ್‌ನಲ್ಲಿ ಭೋಜ್ಪುರಿ ಹಾಡಿನ ಸ್ವಾಗತಕ್ಕೆ ಪ್ರಧಾನಿ ಮೋದಿ ಫಿದಾ!
ಸಂಸದರು, ಶಾಸಕರು, ರಾಜತಾಂತ್ರಿಕ ದಳದ ಸದಸ್ಯರು ಮತ್ತು ಧಾರ್ಮಿಕ ಮುಖಂಡರು ಸೇರಿದಂತೆ 200 ಗಣ್ಯರು ಪ್ರಧಾನ ಮಂತ್ರಿಯವರಿಗೆ ಸ್ವಾಗತ ಕೋರಿದರು. ಪೋರ್ಟ್ ಲೂಯಿಸ್‌ನ ಒಬೆರಾಯ್ ಹೋಟೆಲ್‌ನ ಹೊರಗೆ ಜಮಾಯಿಸಿದ ಭಾರತೀಯ ಅನಿವಾಸಿಗಳು ಪ್ರಧಾನಿ ಮೋದಿಯವರನ್ನು ‘ಧೋಲ್’ ಮತ್ತು ಹೂಮಾಲೆಗಳೊಂದಿಗೆ ಸ್ವಾಗತಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:01 pm, Tue, 11 March 25