ಕುಡಿದ ಅಮಲಿನಲ್ಲಿ ಬಸ್ ತಡೆದು ನಿಲ್ಲಿಸಿ ನಡು ರಸ್ತೆಯಲ್ಲಿ ಹೈಡ್ರಾಮಾ ಮಾಡಿದ ಮಹಿಳೆ; ವಿಡಿಯೋ ವೈರಲ್
ಕಂಠಪೂರ್ತಿ ಕುಡಿದು ಸಾರ್ವಜನಿಕ ಸ್ಥಳಗಳಲ್ಲಿ ಕುಡುಕರು ಮಾಡುವ ಕೆಲವೊಂದಿಷ್ಟು ಅವಾಂತರಗಳನ್ನು ನೋಡಿರುತ್ತೀರಿ ಅಲ್ವಾ. ಅದೇ ರೀತಿ ಇಲ್ಲೊಬ್ಬಳು ಮಹಿಳೆ ಪುರುಷರಿಗಿಂತ ನಾನೇನು ಕಮ್ಮಿಯಿಲ್ಲ ಎನ್ನುತ್ತಾ ಕಂಠ ಪೂರ್ತಿ ಕುಡಿದು ಬಂದು ಬಸ್ ತಡೆದು ನಿಲ್ಲಿಸಿ ನಡು ರಸ್ತೆಯಲ್ಲಿ ದೊಡ್ಡ ರಂಪಾಟವನ್ನೇ ಮಾಡಿದ್ದಾಳೆ. ಈ ಕುರಿತ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗುತ್ತಿದ್ದು, ಇದುವಾ ಮಹಿಳಾ ಸಬಲೀಕರಣ ಅಂದ್ರೆ ಎಂದು ನೆಟ್ಟಿಗರು ಪಾನಮತ್ತ ಮಹಿಳೆಯ ವರ್ತನೆಯನ್ನು ಕಂಡು ಕಿಡಿ ಕಾರಿದ್ದಾರೆ.

ದೆಹಲಿ, ಮಾ. 10: ಎಣ್ಣೆ ಏಟಲ್ಲಿ ಕುಡುಕರು (drunkards) ಮಾಡುವ ರಂಪಾಟ, ಅವಾಂತರಗಳು ಅಷ್ಟಿಷ್ಟಲ್ಲ. ಒಂದಾ ಬೇರೆಯವರ ವಸ್ತುಗಳಿಗೆ ಹಾನಿ ಮಾಡಿಯೋ ಅಥವಾ ಅಥವಾ ಕಂಡಕಂಡವರಿಗೆ ಬೈದೊ ಇಲ್ಲವೇ ಅವರೊಂದಿಗೆ ಜಗಳ ಕಾಯ್ದು ಕಿರಿಕ್ ಮಾಡುತ್ತಿರುತ್ತಾರೆ. ಕುಡುಕರ ಅವಾಂತರಗಳಿಗೆ ಸಂಬಂಧಿಸಿದ ಇಂತಹ ಸಾಕಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಆಗೊಮ್ಮೆ ಈಗೊಮ್ಮೆ ಕಾಣ ಸಿಗುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ದೃಶ್ಯ ವೈರಲ್ ಆಗಿದ್ದು, ಮಹಿಳೆಯೊಬ್ಬಳು ಪುರುಷರಿಗಿಂತ ನಾನೇನು ಕಮ್ಮಿಯಿಲ್ಲ ಎನ್ನುತ್ತಾ ಕಂಠ ಪೂರ್ತಿ ಕುಡಿದು ಬಂದು ಬಸ್ ತಡೆದು ನಿಲ್ಲಿಸಿ ನಡು ರಸ್ತೆಯಲ್ಲಿ ದೊಡ್ಡ ರಂಪಾಟ ಮಾಡಿದ್ದಾಳೆ. ಈಕೆಯ ಹುಚ್ಚಾಟವನ್ನು ಕಂಡು ಇದುವಾ ಮಹಿಳಾ ಸಬಲೀಕರಣ ಅಂದ್ರೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.
ದೆಹಲಿಯ ಮೋಹನ್ ಗಾರ್ಡನ್ ಎಂಬಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಪಾನಮತ್ತ ಮಹಿಳೆಯೊಬ್ಬಳು ಬಸ್ಸನ್ನು ತಡೆದು ನಿಲ್ಲಿಸಿ ನಡು ರಸ್ತೆಯಲ್ಲಿ ಹೈಡ್ರಾಮಾ ಮಾಡಿದ್ದಾಳೆ. ಆಕೆ ಕುಡಿದ ಮತ್ತಿನಲ್ಲಿ ನಡುರಸ್ತೆಗಿಳಿದು ಬಸ್ಸನ್ನು ತಡೆದು ನಿಲ್ಲಿಸಿದ್ದು, ಆಕೆ ಮುಂದೆ ಬರುತ್ತಿರುವ ವೇಳೆ ಚಾಲಕ ಸಡನ್ ಆಗಿ ಬಸ್ ನಿಲ್ಲಿಸುವ ಮೂಲಕ ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದಾರೆ. ಹೀಗೆ ಬಸ್ ತಡೆದದ್ದು ಮಾತ್ರವಲ್ಲದೆ ರಸ್ತೆಯಲ್ಲಿ ಮಲಗುವ ಮೂಲಕ ದೊಡ್ಡ ರಂಪಾಟವನ್ನು ಮಾಡಿ ಸಂಚಾರಕ್ಕೂ ಕೂಡಾ ಅಡ್ಡಿ ಉಂಟು ಮಾಡಿದ್ದಾಳೆ. ನಂತರ ಪೊಲೀಸರು ಬಂದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
Lavelybakshi ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಪಾನಮತ್ತ ಮಹಿಳೆ ನಡುರಸ್ತೆಯಲ್ಲಿ ಬಸ್ಸನ್ನು ತಡೆದು ನಿಲ್ಲಿಸುವ ಮೂಲಕ ಸಂಚಾರಕ್ಕೆ ಅಡ್ಡಿಪಡಿಸಿದಂತಹ ದೃಶ್ಯವನ್ನು ಕಾಣಬಹುದು. ಇನ್ನೊಂದು ವಿಡಿಯೋದಲ್ಲಿ ಆಕೆ ರಸ್ತೆಯಲ್ಲಿಯೇ ಮಲಗಿ ವಾಹನ ಸವಾರರಿಗೆ ತೊಂದರೆ ಉಂಟು ಮಾಡಿದ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಅಬ್ಬಬ್ಬಾ ಈ ಮಕ್ಳಿಗೆ ಭಯವೇ ಇಲ್ವಾ… ಸತ್ತ ಹೆಬ್ಬಾವನ್ನು ಹಿಡಿದು ಸ್ಕಿಪ್ಪಿಂಗ್ ಆಡಿದ ಪೋರರು
ಮಾರ್ಚ್ 08 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದೇ ಇರ್ಬೇಕು ಮಹಿಳಾ ಸಬಲೀಕರಣ ಅಂದ್ರೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದೆಂತಹ ನಾಟಕʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಸಾರ್ವಜನಿಕ ಸ್ಥಳದಲ್ಲಿ ಪಾನಮತ್ತ ಮಹಿಳೆಯ ಹುಚ್ಚಾಟವನ್ನು ಕಂಡು ಶಾಕ್ ಆಗಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ