ಮದುವೆಯ ಮೆರವಣಿಗೆಯಲ್ಲಿ ಪ್ರಾಣಿ ಹಿಂಸೆ, ಕುದುರೆಗೆ ಬಲವಂತವಾಗಿ ಸಿಗರೇಟ್ ಸೇದಿಸಿದ ಯುವಕರು
ಮದುವೆ ಮೆರವಣಿಗೆ ಸಂದರ್ಭದಲ್ಲಿ ಕೆಲ ಯುವಕರು ಕುದುರೆಗೆ ಕಿರುಕುಳ ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ಮದುವೆಯ ಮೆರವಣಿಗೆಯಲ್ಲಿ ಕೆಲ ಯುವಕರು ಕುದುರೆ ಮೇಲೆ ಪುಷ್ಅಪ್ಸ್ಗಳನ್ನು ಮಾಡಿದ್ದಷ್ಟೇ ಅಲ್ಲದೆ ಬಲವಂತವಾಗಿ ಸಿಗರೇಟ್ ಸೇದಿಸಿದ್ದಾರೆ. ಕುದುರೆಯನ್ನು ನೆಲದ ಮೇಲೆ ಮಲಗಿಸಿ ಬಲವಂತವಾಗಿ ಧೂಮಪಾನ ಮಾಡುವಂತೆ ಮಾಡಿರುವುದನ್ನು ಕಾಣಬಹುದು.

ಇಟ್ಸ್ ಜೀನ್ವಾಲ್ ಶಾಬ್ ಎಂಬ ಖಾತೆಯಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಒಬ್ಬ ವ್ಯಕ್ತಿ ತನ್ನ ಬೂಟುಗಳೊಂದಿಗೆ ಕುದುರೆಯ ಮೇಲೆ ಹತ್ತಿ ಅದರ ದೇಹದ ಮೇಲೆ ಪುಷ್-ಅಪ್‌ಗಳನ್ನು ಮಾಡುತ್ತಿರುವುದನ್ನು ಕಾಣಬಹುದು. ಮಲಗಿದ್ದ ಕುದುರೆ ಅಸಹಾಯಕವಾಗಿ ಮದುವೆಯ ಅತಿಥಿಗಳ ಕ್ರೂರ ಕೃತ್ಯಗಳಿಗೆ ಬಲಿಯಾಯಿತು.
ಕುದುರೆಯ ಬಾಯಿಗೆ ಸಿಗರೇಟ್ ಬಿಗಿಯಾಗಿ ಹಿಡಿದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕುದುರೆಯನ್ನು ನೆಲದ ಮೇಲೆ ಮಲಗಿಸಿ ಬಲವಂತವಾಗಿ ಧೂಮಪಾನ ಮಾಡಿಸಲಾಯಿತು. ಮದುವೆ ಪ್ರದರ್ಶನದಲ್ಲಿ ಭಾಗವಹಿಸಿದ್ದ ಯಾವುದೇ ಅತಿಥಿಗಳು ದುಷ್ಕರ್ಮಿ ಯುವಕರ ಕೃತ್ಯಗಳನ್ನು ಪ್ರಶ್ನಿಸಲಿಲ್ಲ. ಅವರೆಲ್ಲರೂ ನೃತ್ಯ ಮಾಡುವುದನ್ನು ಮತ್ತು ಪ್ರಾಣಿಯನ್ನು ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ಆನಂದಿಸಿದ್ದರು.
View this post on Instagram
ಈ ವಿಡಿಯೋ ಆನ್‌ಲೈನ್‌ನಲ್ಲಿ ಪೋಸ್ಟ್ ಆಗುತ್ತಿದ್ದಂತೆ, ನೆಟ್ಟಿಗರು ಈ ಕೃತ್ಯವನ್ನು ಖಂಡಿಸಿ, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಕ್ಲಿಪ್ ಅನ್ನು ಹಲವಾರು ಕಾರ್ಯಕರ್ತರು ಮತ್ತು ಪ್ರಾಣಿ ಪ್ರಿಯರು ಮರು ಹಂಚಿಕೊಳ್ಳುತ್ತಿದ್ದಾರೆ, ಕುದುರೆಯ ದೇಹದ ಮೇಲೆ ಹೆಜ್ಜೆ ಹಾಕಿ ಪುಷ್-ಅಪ್‌ಗಳನ್ನು ಮಾಡಿ ಸಿಗರೇಟ್ ಸೇದಿಸುವುದನ್ನು ಪ್ರಶ್ನಿಸಿದರು. ಪ್ರಾಣಿ ಪ್ರಿಯರು ಕುದುರೆಗೆ ನ್ಯಾಯ ಮತ್ತು ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಧ್ವನಿ ಎತ್ತುತ್ತಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ