ಬೆಂಗಳೂರಿನಲ್ಲಿ ಪಿಜಿ ಓನರ್ ಆಗೋದೇ ಈ ಮಹಿಳೆಯ ಡ್ರೀಮ್ ಜಾಬ್ ಅಂತೆ, ಕಾರಣ ಕೇಳಿದ್ರೆ ಶಾಕ್ ಆಗ್ತೀರಾ
ಈಗಿನ ಕಾಲದಲ್ಲಿ ಸೋಶಿಯಲ್ ಮೀಡಿಯಾಗೆ ಅಡಿಕ್ಟ್ ಆದವರೇ ಹೆಚ್ಚು. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಕೆಲವರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ್ರೆ, ಇನ್ನು ಕೆಲವರು ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳುತ್ತಾರೆ. ಇದೀಗ ಮಹಿಳೆಯೊಬ್ಬಳು ಬೆಂಗಳೂರಿನಲ್ಲಿ ಪಿಜಿ ಓನರ್ ಆಗೋದು ಕನಸಿನ ಕೆಲಸವೆಂದು ತನ್ನ ಡ್ರೀಮ್ ಜಾಬ್ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಮಾಯಾನಗರಿ ಬೆಂಗಳೂರಿ (Bengaluru)ನಂತಹ ದೊಡ್ಡ ದೊಡ್ಡ ನಗರಗಳಿಗೆ ಉದ್ಯೋಗ ಅರಸುತ್ತ ಬರುವ ಜನರಿಗೆ, ಕಲಿಕೆಗಾಗಿ ಬರುವ ಅದೆಷ್ಟೋ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ಸೂಕ್ತವಾದ ವ್ಯವಸ್ಥೆಯೆಂದರೆ ಅದುವೇ ಪಿಜಿ. ಹೀಗಾಗಿ ದೇಶದಾದ್ಯಂತ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಈ ಪಿಜಿಯೇ ಆಸರೆಯಾಗಿದೆ. ಆದರೆ ಪೇಯಿಂಗ್ ಗೆಸ್ಟ್ ಸೌಲಭ್ಯಗಳನ್ನು ನೀಡುವ ಮೂಲಕ ಅದೆಷ್ಟೋ ಜನರು ಇದನ್ನೇ ಬ್ಯುಸಿನೆಸ್ ಮಾಡಿಕೊಂಡಿದ್ದಾರೆ. ವಸತಿ, ಊಟ ಸೌಲಭ್ಯ ನೀಡುವ ಮೂಲಕ ತಿಂಗಳಿಗೆ ಲಕ್ಷ ಲಕ್ಷ ಹಣ ಸಂಪಾದನೆ ಮಾಡುತ್ತಿದ್ದಾರೆ. ಇದೀಗ ಮಹಿಳೆಯೊಬ್ಬರು ಪೋಸ್ಟ್ ಹಾಕಿದ್ದು ಪಿಜಿ ಓನರ್ ಆಗುವುದೇ ನನ್ನ ಡ್ರೀಮ್ ಜಾಬ್ ಎಂದಿದ್ದಾರೆ. ಈ ಮೂಲಕ ನಗರದಲ್ಲಿನ ಪಿಜಿ ವ್ಯವಹಾರ ಹಗರಣಗಳನ್ನು ಬಹಿರಂಗ ಪಡಿಸಿದ್ದಾರೆ.
ಮೊನಾಲಿಕಾ ಪಟ್ನಾಯಕ್ ಹೆಸರಿನ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಬೆಂಗಳೂರಿನಲ್ಲಿ ಸ್ವತಃ ಪಿಜಿ ಓನರ್ ಆಗುವ ಬಗ್ಗೆ ಹೇಳಿಕೊಂಡಿದ್ದಾರೆ. ಹೌದು, ನನ್ನ ಕನಸಿನ ಕೆಲಸವೆಂದರೆ ಬೆಂಗಳೂರಿನಲ್ಲಿ ಪಿಜಿ ಮಾಲೀಕರಾಗುವುದು. ಏನೂ ಮಾಡದೆ, ಪ್ರತಿ ತಿಂಗಳ ಕೊನೆಯಲ್ಲಿ ದುಬಾರಿ ಬಾಡಿಗೆ ಪಡೆಯುವುದು ಹಾಗೂ ಭದ್ರತಾ ಠೇವಣಿಯನ್ನು ಹಿಂತಿರುಗಿಸದಿರುವುದು ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ವೊಂದು ವೈರಲ್ ಆಗುತ್ತಿದ್ದಂತೆ ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ನೆಟ್ಟಿಗರು ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ‘ಏಜ್ ಇಸ್ ಜಸ್ಟ್ ಎ ನಂಬರ್ʼ : ಈಜುಕೊಳದಲ್ಲಿ ಪಲ್ಟಿ ಹೊಡೆದ 84 ರ ಹರೆಯದ ಅಜ್ಜಿ
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
my dream job is to become a pg owner in banglore, do nothing, get a whooping rent at the end of every month and not return the security deposit
— Monalika Patnaik (@MonalikaPatnaik) March 1, 2025
ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಈ ಪೋಸ್ಟ್ ಗೆ ಬಳಕೆದಾರರೊಬ್ಬರು, ‘ಪಿಜಿ ಓನರ್ ಕೆಲಸ ಎಷ್ಟು ಆರಾಮದಾಯಕ ‘ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, ‘ಪಿಜಿ ಮಾಲೀಕರು ಬಾಸ್ ಗಳಂತೆ ವರ್ತಿಸುತ್ತಾರೆ. ನಮ್ಮ ಜೊತೆ ಬಂದ ಹುಡುಗಿಯರನ್ನು ಗದರಿಸ್ತಾರೆ, ನಮ್ಮನ್ನು ಮುಜುಗರಕ್ಕೀಡು ಮಾಡ್ತಾರೆ’ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ, ‘ಅನೇಕ ಪಿಜಿಗಳು ಸರಿಯಾಗಿ ಆಹಾರ ನೀಡೋದಿಲ್ಲ, ಕ್ಲೀನ್ ಇಲ್ಲ, ಹೆಚ್ಚಿನ ಹಣ ವಸೂಲಿ ಮಾಡುತ್ತವೆ ‘ ಎಂದಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








