Viral: ಪೊಲೀಸರು ಹಿಂಗೂ ಸಲಹೆ ಕೊಡ್ತಾರಾ, ಲೈಫ್ನ್ನು ಬ್ಯಾಚುರಲ್ ಇದ್ದಾಗಲೇ ಎಂಜಾಯ್ ಮಾಡಿ ಎಂದ ಪೊಲೀಸ್
ಸಂಚಾರಿ ನಿಯಮಗಳನ್ನು ಬ್ರೇಕ್ ಮಾಡಬಾರದು ಎನ್ನುವುದು ತಿಳಿದಿದ್ದರೂ ಬಿಸಿ ರಕ್ತದ ಯುವಕರು ಎಲ್ಲವನ್ನು ಗಾಳಿಗೆ ತೂರುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪೊಲೀಸರು ಎಕ್ಸ್ಟ್ರಾ ಆಕ್ಸ್ ಲೈಟ್ ಅಳವಡಿಸಿದ ಬೈಕನ್ನು ರಸ್ತೆ ಮಧ್ಯೆ ತಡೆದು ನಿಲ್ಲಿಸಿದ್ದಾರೆ. ಕೊನೆಗೆ ಬೈಕ್ ರೈಡರ್ ಇದು ಮುಂದೆ ಬರುವ ಸವಾರರಿಗೆ ತೊಂದರೆಯಾಗದಂತೆ ತನ್ನ ಸುರಕ್ಷತೆಗಾಗಿ ಅಳವಡಿಸಿದ್ದೇನೆ ಎಂದು ತಿಳಿಸಿದ್ದಾನೆ. ಇದನ್ನು ಅರಿತ ಪೊಲೀಸರು ಬೈಕ್ ಸವಾರನ ಬಳಿ ತಮಾಷೆಯಾಗಿ ಮಾತನಾಡಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ಬೈಕ್ ರೈಡರ್ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.

ಸಂಚಾರಿ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಹೀಗಿದ್ದರೂ ಕೆಲ ಯುವಕರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದನ್ನು ನೋಡುತ್ತಿರುತ್ತೇವೆ. ರಸ್ತೆ ಮಧ್ಯೆ ಅಪಾಯಕಾರಿ ಬೈಕ್ ಸ್ಟಂಟ್, ಹೆಲ್ಮೆಟ್ ಧರಿಸದೆ ವಾಹನ ಚಾಲನೆ, ಓವರ್ ಸ್ಪೀಡ್ ನಲ್ಲಿ ವಾಹನ ಓಡಿಸುವುದು ಹೀಗೆ ನಿಯಮ ಉಲ್ಲಂಘನೆ ಮಾಡುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಎಕ್ಸ್ಟ್ರಾ ಆಕ್ಸ್ ಲೈಟ್ ಅಳವಡಿಸಿದ ಬೈಕನ್ನು ತಡೆ ಹಿಡಿದ ಪೊಲೀಸರು ಬೈಕ್ ರೈಡರ್ ಬಳಿ ನಾನಾ ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ. ರಾತ್ರಿ ಹೊತ್ತು ಬೈಕ್ ಓಡಿಸುವಾಗ ತಮಗೆ ಎದುರಾಗುವ ಸವಾಲುಗಳನ್ನು ವಿವರಿಸಿದ ಬಳಿಕ ಹೋಗಲು ಬಿಟ್ಟಿದ್ದಾರೆ. ಈ ವಿಡಿಯೋ ಶೇರ್ ಮಾಡಿಕೊಂಡಿರುವ ಬೈಕ್ ರೈಡರ್ ಸವಾರರ ಸವಾಲುಗಳನ್ನು ಅರ್ಥ ಮಾಡಿಕೊಂಡ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.
Programmed heart ಹೆಸರಿನ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದ್ದು, ‘ಬೆಂಗಳೂರಿನಿಂದ ಕುಂದಾಪುರಕ್ಕೆ ಬೈಕ್ ರೈಡ್ ಮಾಡುವಾಗ, ನನ್ನ ಬೈಕ್‌ನಲ್ಲಿ ಎಕ್ಸ್ಟ್ರಾ ಆಕ್ಸ್ ಲೈಟ್ ಅಳವಡಿಸಿಕೊಂಡದ್ದಕ್ಕೆ ಪೊಲೀಸರು ನನ್ನನ್ನು ತಡೆದರು. ಈ ರೀತಿಯ ದೀಪಗಳ ಅಳವಡಿಕೆಯನ್ನು ಕಾನೂನಿನಲ್ಲಿ ನಿಷೇಧಿಸಲಾಗಿದೆ. ಇದು ಮುಂಬರುವ ವಾಹನಗಳಿಗೆ ತೊಂದರೆಯಾಗದಂತೆ ರಾತ್ರಿ ರೈಡ್ ಮಾಡುವಾಗ ರಸ್ತೆ ಹಾಗೂ ದಾರಿ ಕಾಣಲು ಸುರಕ್ಷತೆಗಾಗಿ ಅಳವಡಿಸಿದ್ದೇನೆ ಎಂದು ನಾನು ವಿವರಿಸಿದೆ. ನನ್ನ ಕಳವಳಗಳನ್ನು ಆಲಿಸಿ, ಸವಾರರ ಸವಾಲುಗಳನ್ನು ಅರ್ಥಮಾಡಿಕೊಂಡು ನನ್ನನ್ನು ಹೋಗಲು ಬಿಟ್ಟರು. ಪೊಲೀಸರ ಬೆಂಬಲಕ್ಕಾಗಿ ಪೊಲೀಸರಿಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಈ ವಿಡಿಯೋದಲ್ಲಿ ಬೈಕ್ ರೈಡರನ್ನು ನಿಲ್ಲಿಸಿ ಪೊಲೀಸರ ನಾನಾ ರೀತಿಯ ಪ್ರಶ್ನೆಗಳನ್ನು ಕೇಳುವುದನ್ನು ಕಾಣಬಹುದು. ಆದರೆ ಬೈಕ್ ರೈಡರ್ ಎಲ್ಲವನ್ನು ವಿವರಿಸಿ ಬಳಿಕ ತುಂಬಾ ಆತ್ಮೀಯರೆನ್ನುವಂತೆ ಮದುವೆ ಆಗಿದ್ಯಾ ಎಂದು ಪ್ರಶ್ನೆ ಕೇಳಿದ್ದಾರೆ. ಬೈಕ್ ರೈಡರ್ ಇಲ್ಲ ಎನ್ನುತ್ತಿದ್ದಂತೆ ಅದಕ್ಕೆ ಹೀಗೆ ಎಂದಿದ್ದಾರೆ. ಕೊನೆಗೆ ಬ್ಯಾಚುಲರ್ ಇದ್ದಾಗಲೇ ಲೈಫ್ ಎಂಜಾಯ್ ಮಾಡಿ ಬಿಡಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ತಮಿಳುನಾಡಿನ ಮಧುರೈನಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಜೆಸಿಬಿ ಹತ್ತಿಸಿದ ಚಾಲಕ
ಕೊನೆಗೆ ಬೆಂಗಳೂರಿನಿಂದ ಬರುವಾಗಲಿಂದ ವಿಡಿಯೋ ಮಾಡಿದ್ದೀರಾ, ಎಡಿಟ್ ಯಾವಾಗ ಮಾಡ್ತೀರಾ ಎಂದು ಪೊಲೀಸ್ ಕೇಳುತ್ತಿದ್ದಂತೆ, ನಾಳೆ ಅಥವಾ ಯಾವಾಗ ಫ್ರೀ ಟೈಮ್ ಸಿಗುತ್ತೆ ಅವಾಗ ಎಂದು ಬೈಕ್ ರೈಡರ್ ಉತ್ತರಿಸಿದ್ದಾರೆ. ಈ ವಿಡಿಯೋ ಅಧಿಕ ವೀಕ್ಷಣೆ ಕಂಡಿದ್ದು ನೆಟ್ಟಿಗರು ನಾನಾ ರೀತಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಈ ವಿಡಿಯೋ ನೋಡಿದ ಬಳಕೆದಾರರೊಬ್ಬರು, ‘ಪೊಲೀಸ್ ಡೈಲಾಗ್ ಮಾತ್ರ ಬೆಂಕಿ, ಫುಲ್ ರೋಸ್ಟ್’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ಪೊಲೀಸರು ಮದ್ವೆ ಆಗಿ ತುಂಬಾ ನೊಂದಿದ್ದಾರೆ ಅನಿಸುತ್ತೆ’ ಎಂದಿದ್ದಾರೆ. ಇನ್ನೊಬ್ಬರು, ‘ಪೊಲೀಸರಿಗೆ ಗೌರವ ಕೊಡಿ’ ಎಂದಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
986059, 986035, 986008, 985974