Viral: ಚರಂಡಿಯಲ್ಲಿ ಸಿಲುಕಿದ್ದ ಹಸುವನ್ನು ರಕ್ಷಿಸಿದ ಹೃದಯವಂತ; ಮಾನವೀಯತೆ ಇಂದಿಗೂ ಜೀವಂತವಾಗಿದೆ ನೋಡಿ
ಈ ಆಧುನಿಕ ಯುಗದಲ್ಲಿ ಜನರಲ್ಲಿ ದಯೆ, ಮಾನವೀಯ ಮೌಲ್ಯಗಳು ಸತ್ತು ಹೋಗಿವೆ ಎಂದು ಹಲವರು ಹೇಳುತ್ತಿರುತ್ತಾರೆ. ಆದ್ರೆ ಇಲ್ಲೊಂದು ಮಾನವೀಯತೆ ಇಂದಿಗೂ ಜೀವಂತವಾಗಿದೆ ಎಂಬುದಕ್ಕೆ ನಿದರ್ಶನದಂತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಹೃದಯವಂತ ವ್ಯಕ್ತಿಯೊಬ್ಬ ಗಲೀಜು ಎಂದು ಕೂಡಾ ಭಾವಿಸದೆ ಕೊಳಚೆ ನೀರಿಗಿಳಿದು ಚರಂಡಿಯಲ್ಲಿ ಸಿಲುಕಿದ್ದ ಹಸುವನ್ನು ರಕ್ಷಿಸಿದ್ದಾನೆ. ಈತನ ಈ ಮಹತ್ ಕಾರ್ಯವನ್ನು ನೆಟ್ಟಿಗರು ಕೊಂಡಾಡಿದ್ದಾರೆ.

ಈಗಿನ ಕಾಲದಲ್ಲಿ ರಸ್ತೆ ಬದಿ ಒಂದು ಸಣ್ಣ ಕಸ ಕಂಡ್ರೂ ಛೀ.. ಛೀ… ಇದನ್ಯಾಕೆ ನಾನು ಎತ್ತಿ ಕಸದ ಬುಟ್ಟಿಗೆ ಹಾಕಬೇಕು ಎಂದು ಮೂಗು ಮುರಿಯುವವರೆ ಹೆಚ್ಚು. ಇಂತಹ ಜನಗಳ ಮಧ್ಯೆ ಇಲ್ಲೊಬ್ಬ ವ್ಯಕ್ತಿ ಕೊಳಚೆ ನೀರಿನಿಂದ ತುಂಬಿದ್ದ ಚರಂಡಿಗಿಳಿದು ಹಸುವನ್ನು ರಕ್ಷಣೆ ಮಾಡಿದ್ದಾನೆ. ಹೌದು ಚರಂಡಿಗೆ ಬಿದ್ದ ಹಸುವೊಂದು, ಮೇಲೆ ಬರಲಾಗದೆ ಪರದಾಡುತ್ತಿತ್ತು. ಈ ದೃಶ್ಯವನ್ನು ಕಂಡು ಈತ ಗಲೀಜು ಇದೆ ಎಂದು ತಲೆ ಕೆಡಿಸಿಕೊಳ್ಳದೆ ಚರಂಡಿಗಿಳಿದು ಗೋವನ್ನು ರಕ್ಷಿಸಿದ್ದಾನೆ. ಈ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಮಾನವೀಯತೆ ಇಂದಿಗೂ ಜೀವಂತವಾಗಿದೆ ಎಂದು ಈ ವ್ಯಕ್ತಿಯ ಮಹತ್ ಕಾರ್ಯವನ್ನು ನೆಟ್ಟಿಗರು ಕೊಂಡಾಡಿದ್ದಾರೆ.
ಚರಂಡಿಯಲ್ಲಿ ಸಿಲುಕಿದ್ದ ಹಸುವನ್ನು ರಕ್ಷಿಸುವ ಮೂಲಕ ಹೃದಯವಂತ ವ್ಯಕ್ತಿಯೊಬ್ಬ ಮಾನವೀಯತೆ ಇಂದಿಗೂ ಜೀವಂತವಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾನೆ. veera__singam ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಶೇರ್ ಮಾಡಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಚರಂಡಿಯಲ್ಲಿ ಸಿಲುಕಿದ್ದ ಹಸುವೊಂದು ಅಲ್ಲಿಂದ ಮೇಲೆ ಬರಲಾಗದೆ ಪರದಾಡುತ್ತಿರುವ ದೃಶ್ಯವನ್ನು ಕಾಣಬಹುದು. ಆ ತಕ್ಷಣ ಚರಂಡಿಗೆ ಇಳಿದ ವ್ಯಕ್ತಿಯೊಬ್ಬ ಬಹಳ ಪ್ರಯತ್ನಪಟ್ಟು ಹಸುವನ್ನು ಮೇಲಕ್ಕೆತ್ತಲು ಪ್ರಯತ್ನಿಸುತ್ತಾನೆ. ಕೊನೆಗೆ ಹಗ್ಗದ ಸಹಾಯದಿಂದ ಆತ ಹಸುವನ್ನು ರಕ್ಷಿಸಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 25.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ವ್ಯಕ್ತಿಯೇ ಸಮಾಜದ ನಿಜವಾದ ಹೀರೋʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಿಜವಾಗಿಯೂ ಮಾನವೀಯತೆ ಜೀವಂತವಾಗಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ದೃಶ್ಯವನ್ನು ಕಂಡು ಕಣ್ಣು ತುಂಬಿ ಬಂತುʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ