Viral: ಸಾವಿನೊಂದಿಗೆ ಸರಸ; ವಿದ್ಯುತ್ ಕಂಬದ ಮೇಲೇರಿ ಸ್ಟಂಟ್ ಮಾಡಿದ ವ್ಯಕ್ತಿ
ಏನೇನೋ ಸಾಹಸ ಮಾಡಲು ಹೋಗಿ ಕೆಲವೊಬ್ಬರು ತಮ್ಮ ಜೀವಕ್ಕೆ ಕಂಟಕ ತಂದುಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಕೂಡಾ ಸಾವಿನೊಂದಿಗೆ ಸರಸವಾಡಿದ್ದಾನೆ. ಹೌದು ಆತ ವ್ಯಾಯಾಮ ಮಾಡುವ ಸಲುವಾಗಿ ವಿದ್ಯುತ್ ಕಂಬವನ್ನೇರಿದ್ದು, ನಂತರ ವಿದ್ಯುತ್ ತಂತಿಯನ್ನು ಹಿಡಿದು ಪುಲ್ ಅಪ್ ವ್ಯಾಯಾಮ ಮಾಡಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈತನ ಈ ಹುಚ್ಚು ಸಾಹಸವನ್ನು ಕಂಡು ನೋಡುಗರು ಬೆಚ್ಚಿ ಬಿದ್ದಿದ್ದಾರೆ.

ಹುಚ್ಚು ಸಾಹಸಗಳನ್ನು ಮಾಡುವ ಸಲುವಾಗಿ ಸಾವಿನೊಂದಿಗೆ ಸರಸವಾಡುವವರು ಹಲವರಿದ್ದಾರೆ. ಹೀಗೆ ಪ್ರಾಣವನ್ನು ಲೆಕ್ಕಿಸದೆ ಚಲಿಸುತ್ತಿರುವ ವಾಹನಗಳಲ್ಲಿ ಡೇಂಜರಸ್ ಸ್ಟಂಟ್ ಮಾಡುವವರ, ಪ್ರಾಣವನ್ನೇ ಪಣಕ್ಕಿಟ್ಟು ಡೇಂಜರಸ್ ಸ್ಥಳಗಳಲ್ಲಿ ರೀಲ್ಸ್ ಮಾಡಿದವರ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಿರುತ್ತೀರಿ ಅಲ್ವಾ. ಅಂತಹದ್ದೇ ದೃಶ್ಯವೊಂದು ಇದೀಗ ವೈರಲ್ ಆಗಿದ್ದು, ವ್ಯಕ್ತಿಯೊಬ್ಬ ಪುಲ್ ಅಪ್ ವ್ಯಾಯಾಮ ಮಾಡುವ ಸಲುವಾಗಿ ವಿದ್ಯುತ್ ಕಂಬವನ್ನೇರಿದ್ದಾನೆ. ಹೌದು ಕರೆಂಟ್ ಕಂಬವನ್ನೇರಿ, ನಂತರ ವಿದ್ಯುತ್ ತಂತಿಯನ್ನು ಹಿಡಿದು ಯಾವುದೇ ಭಯವಿಲ್ಲದೆ ಭಂಡ ಧೈರ್ಯದಿಂದ ಪುಲ್ ಅಪ್ ವ್ಯಾಯಾಮ ಮಾಡಿದ್ದಾನೆ. ಈತನ ಈ ಹುಚ್ಚು ಸಾಹಸವನ್ನು ಕಂಡು ನೋಡುಗರು ಬೆಚ್ಚಿ ಬಿದ್ದಿದ್ದಾರೆ.
ಅಪಾಯಕಾರಿ ಅನ್ನೋ ಕಾರಣಕ್ಕೆ ಹೆಚ್ಚಿನವರು ವಿದ್ಯುತ್ ಕಂಬದ ಪಕ್ಕದಲ್ಲೂ ನಿಲ್ಲುವ ಸಾಹಸವನ್ನು ಮಾಡುವುದಿಲ್ಲ. ಅಂತದ್ರಲ್ಲಿ ಇಲ್ಲೊಬ್ಬ ವ್ಯಕ್ತಿ ವಿದ್ಯುತ್ ಕಂಬವನ್ನು ಏರಿದ್ದು ಮಾತ್ರವಲ್ಲದೆ, ವಿದ್ಯುತ್ ತಂತಿಯನ್ನು ಕೈಯಲ್ಲಿ ಹಿಡಿದು ಪುಲ್ ಅಪ್ ವ್ಯಾಯಾಮ ಮಾಡಿದ್ದಾನೆ.
ಈ ಕುರಿತ ವಿಡಿಯೋವನ್ನು fitnesshaven_official ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ವಿದ್ಯುತ್ ಕಂಬವನ್ನೇರಿ ಡೇಂಜರಸ್ ಕಸರತ್ತು ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ವಿದ್ಯುತ್ ಕಂಬದಲ್ಲಿ ಮಲಗಿ ತಂತಿಯನ್ನು ಹಿಡಿದು ಅಪಾಯಕಾರಿ ಪುಲ್ ಅಪ್ ವ್ಯಾಯಾಮ ಮಾಡಿದ್ದಾನೆ.
View this post on Instagram
ಇದನ್ನೂ ಓದಿ: ವರ್ಷಕ್ಕೆ ಕೊಡೋದು 3.8 ಲಕ್ಷ ರೂ ಸಂಬಳವಾದ್ರೂ ದಿನಕ್ಕೆ 12 ಗಂಟೆ ಕೆಲಸ ಮಾಡ್ಲೇಬೇಕಂತೆ, ಇದು ಬಾಸ್ ಆದೇಶ
ಫೆಬ್ರವರಿ 7 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಸಾವಿನೊಂದಿಗೆ ತರಬೇತಿʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದೆಂಥಾ ಅಪಾಯಕಾರಿ ತಾಲೀಮುʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼದೇವ್ರೆ ಇದ್ಯಾವ ತರಹದ ವರ್ಕೌಟ್ʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




