AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀವನದಲ್ಲಿ ಮೊದಲ ಬಾರಿಗೆ ಫೋಟೋ ತೆಗೆಸಿಕೊಂಡ ವೃದ್ಧ ದಂಪತಿ, ಇವರ ಖುಷಿಗೆ ಪಾರವೇ ಇಲ್ಲ ನೋಡಿ

ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಕೆಲವೊಂದು ಹೃದಯಸ್ಪರ್ಶಿ ದೃಶ್ಯಗಳು ಮನಸ್ಸಿಗೆ ತುಂಬಾನೇ ಹತ್ತಿರವಾಗುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಹವ್ಯಾಸಿ ಛಾಯಾಗ್ರಾಹಕರೊಬ್ಬರು ವೃದ್ಧ ದಂಪತಿಗಳ ಫೋಟೋ ಕ್ಲಿಕಿಸಿದ್ದು ಅವರ ಜೊತೆಗೆ ನಡೆಸಿದ ಸಂಭಾಷಣೆಯೂ ಹೃದಯ ಮುಟ್ಟಿದೆ. ಈ ಫೋಟೋ ದಂಪತಿಗಳು ಕ್ಲಿಕಿಸಿಕೊಂಡ ಮೊದಲ ಫೋಟೋ ಎನ್ನುವುದೇ ಅಚ್ಚರಿಗೆ ಕಾರಣವಾಗಿದ್ದು, ಈ ವಿಡಿಯೋಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿವೆ.

ಸಾಯಿನಂದಾ
| Edited By: |

Updated on: Mar 01, 2025 | 4:30 PM

Share

ಹವ್ಯಾಸಿ ಛಾಯಾಗ್ರಾಹಕರು ಕೆಲವು ಅತ್ಯುದ್ಭುತ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾರೆ. ಕ್ಯಾಮೆರಾಗೆ ಹಿಡಿದು ಊರೂರು ಸುತ್ತುತ್ತಾ ಅವಿಸ್ಮರಣೀಯ ಫೋಟೋಗಳನ್ನು ಕ್ಲಿಕಿಸುತ್ತಾರೆ. ಈ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಗದ್ದೆ ಕೆಲಸ ಮುಗಿಸಿ ಕೊಳಕುಬಟ್ಟೆಯಲ್ಲಿ ತಮ್ಮ ಮನೆಯ ಕಡೆ ಸಾಗುತ್ತಿದ್ದ ವೃದ್ಧ ಬಡ ದಂಪತಿಯ ಜೊತೆಗೆ ಮಾತಿಗಿಳಿದು ಅವರ ಫೋಟೋಗಳನ್ನು ಸೆರೆಹಿಡಿದಿದ್ದು, ಆದರೆ ದಂಪತಿಗಳು ತೆಗೆಸಿಕೊಂಡ ಮೊದಲ ಫೋಟೋವಂತೆ. ಫೋಟೋಗ್ರಾಫರ್ ದಂಪತಿಗಳ ಜೊತೆಗೆ ಮಾತಿಗಿಳಿದ ವೇಳೆ ಈ ವಿಷಯ ತಿಳಿದಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಕ್ಯಾಮೆರಾ ಹಿಡಿದು ರಸ್ತೆಯಲ್ಲಿ ತೆರಳುವ ವೇಳೆ ಕೊಳಕಾದ ಬಟ್ಟೆ ಧರಿಸಿದ್ದ, ಗದ್ದೆ ಕೆಲಸ ಮುಗಿಸಿ ಮನೆ ಕಡೆಗೆ ಹೊರಟ ವೃದ್ಧ ದಂಪತಿಗಳು ಕಣ್ಣಿಗೆ ಫೋಟೋ ಗ್ರಾಫರ್ ಕಣ್ಣಿಗೆ ಬಿದ್ದಿದ್ದಾರೆ. ಕೊಳಕಾದ ಹಳೆಯ ಬಟ್ಟೆಗಳನ್ನು ಧರಿಸಿದ್ದ ವೃದ್ಧ ಸೈಕಲ್ ತುಳಿಯುತ್ತಿದ್ದರೆ, ಆತನ ಪತ್ನಿ ಕಾರ್ಟ್‌ನಲ್ಲಿ ಹಾಕಿದ್ದ ದೊಡ್ಡ ಚೀಲವನ್ನು ಹಿಡಿದುಕೊಂಡು ಕುಳಿತಿದ್ದರು. ಈ ವೇಳೆಯಲ್ಲಿ ‘ಫೋಟೋ ತೆಗೆಸಿಕೊಳ್ಳುತ್ತೀರಾ ?’ಎಂದು ಛಾಯಾಗ್ರಾಹಕ ಕೇಳಿದ್ದು, ಖುಷಿಯಿಂದ ಸಮ್ಮತಿಸಿದ್ದಾರೆ.

ಈ ವೇಳೆ ಛಾಯಾಗ್ರಾಹಕನು ಕಾರ್ಟ್ ಅನ್ನು ಬದಿಯಲ್ಲಿ ನಿಲ್ಲಿಸಿ, ಹಸಿರು ಹುಲ್ಲಿನ ಮೈದಾನದ ಬಳಿಯ ಮರದ ಬಳಿ ನಿಲ್ಲಲು ಸೂಚಿಸಿದ್ದು, ವೃದ್ಧ ಬಿಳಿ ಕೂದಲನ್ನು ಸರಿಪಡಿಸಿದ್ದಾರೆ. ಆದರೆ ಈ ಮಹಿಳೆ ಮಾತ್ರ ತನ್ನ ಬಟ್ಟೆಗಳನ್ನು ನೋಡಿ ಹಿಂಜರಿದಿದ್ದು, ‘ನಮ್ಮ ಬಟ್ಟೆಗಳು ಕೊಳಕಾಗಿವೆ’ ಎಂದು ಅವರು ಹೇಳಿದ್ದಾರೆ. ಆದರೆ ಛಾಯಾಗ್ರಾಹಕನು ವೃದ್ಧನ ತೋಳನ್ನು ತೆಗೆದುಕೊಂಡು ಆತನ ಹೆಂಡತಿಯ ಸುತ್ತಲೂ ಇರಿಸಿ ಪೋಸ್ ನೀಡಲು ಹೇಳಿದ್ದಾರೆ. ಛಾಯಾಗ್ರಾಹಕ ವಿವಿಧ ಭಂಗಿಗಳಲ್ಲಿ ಫೋಟೋ ಕ್ಲಿಕಿಸಿದ್ದಾರೆ. ಈ ವೇಳೆಯಲ್ಲಿ ಫೋಟೋಗ್ರಾಫರ್ ಮಾತಿಗಿಳಿದ ವೇಳೆಯಲ್ಲಿ, ಈ ವೃದ್ಧ ದಂಪತಿಗಳು ಪ್ರತಿದಿನ ಮೂರು ಗಂಟೆಗಳ ಕಾಲ ಪ್ರಯಾಣಿಸುತ್ತಾರೆ ಮತ್ತು ಸಂಜೆ ಅದೇ ದಾರಿಯಲ್ಲಿ ಹಿಂತಿರುಗುತ್ತಾರೆ ಎಂದು ತಿಳಿದಿದೆ. ಕೆಲವೇ ಕೆಲವು ಕ್ಷಣದಲ್ಲಿ ಈ ಫೋಟೋ ಕಾಫಿ ಸಿದ್ದವಾಗಿದ್ದು, ಈ ದಂಪತಿಗಳಿಗೆ ಒಂದು ಕಪ್ ಐಸ್ ಕ್ರೀಮ್ ನೀಡಿದ್ದಾರೆ.

ಇದನ್ನೂ ಓದಿ
Image
ಕುಂಭಮೇಳ ಮುಗಿಸಿ ಡೋಮಿನೋಸ್‌ಗೆ ಪಿಜ್ಜಾ ತಿನ್ನಲು ಬಂದ ಸಾಧುಗಳು
Image
ಕೋಪಕ್ಕೆ ವರ್ಷಕ್ಕೆ 8 ಕೋಟಿ ರೂ. ಸಂಬಳದ ಉದ್ಯೋಗ ತ್ಯಜಿಸಿದ ವ್ಯಕ್ತಿ
Image
ಮೂತ್ರ ವಿಸರ್ಜಿಸಲು ರೈಲನ್ನೇ ನಿಲ್ಲಿಸಿದ ಲೋಕೋ ಪೈಲಟ್
Image
ಇಂಥ ಮಕ್ಕಳೂ ಇರ್ತಾರಾ… ಹೊಡೆದು ಬಡಿದು ತಾಯಿಯನ್ನೇ ಹಿಂಸಿಸಿದ ಮಗಳು

ಆಗ ತಾನೇ ಕ್ಲಿಕಿಸಿಕೊಂಡ ಫೋಟೋ ಕಾಫಿ ಕೈಗೆ ನೀಡಿದ ಫೋಟೋಗ್ರಾಫರ್, ಕೊನೆಯ ಬಾರಿ ಫೋಟೋ ತೆಗೆಸಿಕೊಂಡಿದ್ದು ಯಾವಾಗ ಕೇಳಿದ್ದು, ಇದಕ್ಕೆ ಮಹಿಳೆ ‘ಯಾವತ್ತೂ ತೆಗೆಸಿಕೊಂಡಿಲ್ಲ’ ಎಂದಿದ್ದಾರೆ. ಈ ಫೋಟೋ ನೋಡಿ ನಗುತ್ತಾ ಮಹಿಳೆಯೂ ತನ್ನ ಗಂಡನ ಬಳಿ, ‘ನಾವು ಇಲ್ಲದ ನಂತರ ಒಂದು ದಿನ, ನಮ್ಮ ಮಕ್ಕಳು ಈ ಚಿತ್ರವನ್ನು ನೋಡುತ್ತಾರೆ ಮತ್ತು ಇವರು ನಮ್ಮ ತಂದೆ – ತಾಯಿ ಎಂದು ಹೇಳುತ್ತಾರೆ’ ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಕೊನೆಗೆ ಈ ದಂಪತಿ ಫೋಟೋಗ್ರಾಫರ್ ಗೆ ಕೈ ಮುಗಿದು ಧನ್ಯವಾದ ತಿಳಿಸಿ ಫೋಟೋವನ್ನು ಚೀಲದಲ್ಲಿಟ್ಟುಕೊಂಡು ತಮ್ಮ ಮನೆ ಕಡೆ ಪ್ರಯಾಣ ಬೆಳೆಸಿದ್ದಾರೆ. ಈ ವಿಡಿಯೋವನ್ನು akki bhakki ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಮೂವತ್ತೆಂಟು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.

ಇದನ್ನೂ ಓದಿ: ವರ್ಷಕ್ಕೆ ಕೊಡೋದು 3.8 ಲಕ್ಷ ರೂ ಸಂಬಳವಾದ್ರೂ ದಿನಕ್ಕೆ 12 ಗಂಟೆ ಕೆಲಸ ಮಾಡ್ಲೇಬೇಕಂತೆ, ಇದು ಬಾಸ್ ಆದೇಶ

ಬಳಕೆದಾರರೊಬ್ಬರು, ‘ಈ ವಿಡಿಯೋ ನಿಜಕ್ಕೂ ಅದ್ಭುತವಾಗಿದೆ. ಬೇರೆಯವರನ್ನು ಖುಷಿ ಪಡಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು’ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ಈ ಪ್ರಪಂಚದಲ್ಲಿ ನಿಮ್ಮಂತ ವ್ಯಕ್ತಿಗಳು ಇರುವುದು ನಿಜಕ್ಕೂ ಅದೃಷ್ಟ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, ‘ನಿಜಕ್ಕೂ ಅದ್ಭುತವಾದ ಕೆಲಸ, ಬೇರೆಯವರ ಮುಖದಲ್ಲಿ ನಗು ಮೂಡಿಸಿದ್ದೀರಾ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ