Viral: ಕುಂಭಮೇಳ ಮುಗಿಸಿ ಡೋಮಿನೋಸ್‌ಗೆ ಪಿಜ್ಜಾ ತಿನ್ನಲು ಬಂದ ಸಾಧುಗಳು; ವಿಡಿಯೋ ಮಾಡಿ ಹರಿಬಿಟ್ಟು ಯುವತಿ
ಈ ಕೆಲವರು ಇನ್ನೊಬ್ಬರ ಪ್ರೈವೆಸಿಗೆ ತೊಂದರೆ ಆಗುತ್ತದೆ ಎಂಬ ಕನಿಷ್ಟ ಪ್ರಜ್ಞೆಯೂ ಇಲ್ಲದೆ ಎಲ್ಲೆಂದರಲ್ಲಿ ವಿಡಿಯೋ ಶೂಟ್ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಾರೆ. ಅದೇ ರೀತಿ ಇಲ್ಲೊಬ್ಬಳು ಯುವತಿ ಸಾಧುಗಳ ವಿಡಿಯೋ ಮಾಡಿ ಟೀಕೆಗೆ ಗುರಿಯಾಗಿದ್ದಾಳೆ. ಹೌದು ಮಹಾಕುಂಭ ಮೇಳ ಮುಗಿದ ಬಳಿಕ ಒಂದಷ್ಟು ಸಾಧುಗಳು ಡೋಮಿನೋಸ್‌ಗೆ ಪಿಜ್ಜಾ ತಿನ್ನಲು ಬಂದಿದ್ದಾರೆ. ಈ ದೃಶ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಕ್ಕೆ ಅವರನ್ನು ನೆಮ್ಮದಿಯಿಂದ ತಿನ್ನಲು ಬಿಡಿ ಯುವತಿಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳ ಮಹಾಶಿವರಾತ್ರಿಯಂದು ಮುಕ್ತಾಯಗೊಂಡಿದೆ. ಐಐಟಿ ಬಾಬಾ, ಮುಳ್ಳಿನ ಮೇಲೆ ಮಲಗಿದ ಬಾಬಾ ಸೇರಿದಂತೆ ಕುಂಭಮೇಳದಲ್ಲಿ ಭಾಗವಹಿಸಿದ್ದ ಒಂದಷ್ಟು ಸಾಧುಸಂತರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಕುಂಭಮೇಳ ಮುಗಿದ ಬಳಿಕವೂ ಇಲ್ಲೊಂದು ಸಾಧುಗಳ ವಿಡಿಯೋ ವೈರಲ್ ಆಗಿದೆ. ಮಹಾಕುಂಭ ಮೇಳ ಮುಗಿದ ಬಳಿಕ ಒಂದಷ್ಟು ಸಾಧುಗಳು ಡೋಮಿನೋಸ್‌ಗೆ ಪಿಜ್ಜಾ ತಿನ್ನಲು ಬಂದಿದ್ದು, ಈ ದೃಶ್ಯವನ್ನು ಯುವತಿಯೊಬ್ಬಳು ವಿಡಿಯೋ ಮಾಡಿ ಹರಿಬಿಟ್ಟಿದ್ದಾಳೆ. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಅವರನ್ನು ನೆಮ್ಮದಿಯಿಂದ ತಿನ್ನಲು ಬಿಡಿ ಯುವತಿಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿರುವ ಡೋಮಿನೋಸ್ ಔಟ್‌ಲೇಟ್‌ಗೆ ಮೂವರು ಸಾಧುಗಳು ಪಿಜ್ಜಾ ತಿನ್ನಲು ಬಂದಿದ್ದ ಸಂದರ್ಭದಲ್ಲಿ ಯುವತಿಯೊಬ್ಬಳು ಅದನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಈ ಕುರಿತ ವಿಡಿಯೋವನ್ನು prayagrajxpress ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, “ಪಿಜ್ಜಾ ತಿನ್ನಲು ಬಂದ ಸಾಧುಗಳುʼ ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನಾಲ್ಕು ಜನ ಸಾಧುಗಳು ಪ್ರಯಾಗ್‌ರಾಜ್‌ನಲ್ಲಿರುವ ಡೊಮಿನೋಸ್ ಔಟ್‌ಲೆಟ್‌ನಲ್ಲಿ ಎಲ್‌ಇಡಿ ಮೆನುವನ್ನು ನೋಡುತ್ತಾ ಏನು ಆರ್ಡರ್ ಮಾಡೋದು ಎಂದು ಯೋಚಿಸುತ್ತಾ ನಿಂತಿರುವ ದೃಶ್ಯವನ್ನು ಕಾಣಬಹುದು. ಆ ಸಂದರ್ಭದಲ್ಲಿ ವಿಡಿಯೋ ಮಾಡುತ್ತಾ ಬಂದ ಯುವತಿಯೊಬ್ಬಳು ನೋಡಿ ಸಾಧುಗಳು ಪಿಜ್ಜಾ ತಿನ್ನಲು ಬಂದಿದ್ದಾರೆ, ನೀವು 250 ಪಿಜ್ಜಾ ತಿನ್ನಿ ಬಾಬಾ ಎಂದು ತಮಾಷೆ ಮಾಡುತ್ತಾ ಹೇಳಿದ್ದಾಳೆ.
ಇದನ್ನೂ ಓದಿ: ಪಿತೃತ್ವ ರಜೆ ಕೊಡೋದು ಬಿಟ್ಟು ವರ್ಗಾವಣೆ ಮಾಡಲು ಮುಂದಾದ ಬಾಸ್; ಕೋಪಕ್ಕೆ 8 ಕೋಟಿ ರೂ. ಸಂಬಳದ ಉದ್ಯೋಗ ತ್ಯಜಿಸಿದ ವಕೀಲ
ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಮ್ಮ ಕಂಟೆಂಟ್‌ಗಳಿಗೋಸ್ಕರ ಅವರಿಗ್ಯಾಕೆ ತೊಂದರೆ ಕೊಡ್ತೀರಾʼ ಎಂದು ಗರಂ ಆಗಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅವರು ಪಿಜ್ಜಾ ತಿಂದ್ರೆ ನಿಮಗೇನು ಸಮಸ್ಯೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಹೀಗೆ ವಿಡಿಯೋ ಮಾಡೋ ಬದಲು ಸಾಧುಗಳಿಗೆ ಆ ಯುವತಿ ಊಟ ತೆಗೆದುಕೊಡಬಹುದಿತ್ತಲ್ಲವೇʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








