AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಟ್ರೈನ್ ನಿಲ್ಲಿಸಿ ರೈಲ್ವೆ ಹಳಿಯ ಮೇಲೆಯೇ ಮೂತ್ರ ವಿಸರ್ಜಿಸಿದ ಲೋಕೋ ಪೈಲಟ್‌; ವಿಡಿಯೋ ವೈರಲ್‌

ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಘಟನೆಯ ಸುದ್ದಿಗಳು, ಆಡಿಯೋ, ವಿಡಿಯೋಗಳು ಬಹು ಬೇಗನೇ ವೈರಲ್‌ ಆಗುತ್ತವೆ. ಕೆಲವೊಂದು ಬಾರಿ ಹಳೆಯ ವಿಡಿಯೋಗಳು ಮತ್ತೊಮ್ಮೆ ವೈರಲ್‌ ಆಗುವುದು ಕೂಡ ಇದೆ. ಇದೀಗ ಅದರಂತೆಯೇ ಲೋಕೋ ಪೈಲಟ್‌ ಒಬ್ಬರು ಅರ್ಧಕ್ಕೆ ರೈಲು ನಿಲ್ಲಿಸಿ, ನಂತರ ರೈಲಿನಿಂದ ಕೆಳಗಿಳಿದು ರೈಲ್ವೆ ಹಳಿಯ ಮೇಲೆ ಮೂತ್ರ ವಿಸರ್ಜಿಸಿದಂತಹ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್‌ ಆಗಿದೆ.

Viral: ಟ್ರೈನ್ ನಿಲ್ಲಿಸಿ ರೈಲ್ವೆ ಹಳಿಯ ಮೇಲೆಯೇ ಮೂತ್ರ ವಿಸರ್ಜಿಸಿದ ಲೋಕೋ ಪೈಲಟ್‌; ವಿಡಿಯೋ ವೈರಲ್‌
ವೈರಲ್​ ವಿಡಿಯೊ
ಮಾಲಾಶ್ರೀ ಅಂಚನ್​
| Edited By: |

Updated on: Feb 28, 2025 | 2:47 PM

Share

ಸಾಮಾನ್ಯವಾಗಿ ತಾಂತ್ರಿಕ ದೋಷ ಸೇರಿದಂತೆ ಇನ್ನಿತರೆ ತುರ್ತು ಸಂದರ್ಭಗಳಲ್ಲಿ ಮಾತ್ರ ಚಲಿಸುತ್ತಿರುವ ರೈಲನ್ನು ಮಧ್ಯದಲ್ಲಿ ನಿಲ್ಲಿಸಲಾಗುತ್ತದೆ. ಕೆಲವೊಂದು ಬಾರಿ ಜನರ ಹುಚ್ಚಾಟಗಳ ಕಾರಣಗಳಿಂದಲೂ ರೈಲು ನಿಂತಿರುವ ಉದಾಹರಣೆ ಕೂಡಾ ಇದೆ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಮೂತ್ರ ವಿಸರ್ಜಿಸುವ ಸಲುವಾಗಿ ಲೋಕೋ ಪೈಲಟ್‌ ಒಬ್ಬರು ರೈಲು ನಿಲ್ಲಿಸಿದ್ದಾರೆ. ಹೌದು ಲೋಕೋ ಪೈಲಟ್‌ ಅರ್ಧಕ್ಕೆ ರೈಲು ನಿಲ್ಲಿಸಿ, ನಂತರ ರೈಲಿನಿಂದ ಕೆಳಗಿಳಿದು ರೈಲ್ವೆ ಹಳಿಯ ಮೇಲೆಯೇ ಮೂತ್ರ ವಿಸರ್ಜಿಸಿದ್ದು, 5 ವರ್ಷಗಳ ಹಿಂದಿನ ಘಟನೆಯ ಈ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್‌ ಆಗಿದೆ.

ಈ ವಿಚಿತ್ರ ಘಟನೆ 2019 ರಲ್ಲಿ ಮುಂಬೈನಲ್ಲಿ ನಡೆದಿದ್ದು, ಲೋಕೋ ಪೈಲಟ್‌ ಮೂತ್ರ ವಿಸರ್ಜಿಸಲು ಅರ್ಧಕ್ಕೆ ರೈಲು ನಿಲ್ಲಿಸಿದ್ದರು. ಇದೀಗ ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿದೆ. ಮಾಹಿತಿಯ ಪ್ರಕಾರ, ಲೋಕಲ್‌ ಟ್ರೈನ್ ಉಲ್ಹಾಸ್‌ನಗರದಿಂದ ಮುಂಬೈಗೆ ಹೋಗುತ್ತಿತ್ತು, ಈ ಸಮಯದಲ್ಲಿ ತಾಂತ್ರಿಕ ದೋಷ ಅಥವಾ ತುರ್ತು ಕಾರಣಗಳಿಗಾಗಿ ಅಲ್ಲ, ಬದಲಾಗಿ ಮೂತ್ರ ವಿಸರ್ಜಿಸಲು ಲೋಕೋ ಪೈಲಟ್ ರೈಲು ನಿಲ್ದಾಣವನ್ನು ತಲುಪುವ ಮೊದಲೇ ರೈಲನ್ನು ನಿಲ್ಲಿಸಿದರು. ಮತ್ತು ಹಳಿಯ ಮೇಲೆಯೇ ಮೂತ್ರ ವಿಸರ್ಜಿಸಿ ವಾಪಸ್‌ ಹೋಗಿದ್ದರು. ಈ ಸುದ್ದಿ ಆಗ ಬಾರೀ ಸದ್ದು ಮಾಡಿತ್ತು.

ವೈರಲ್​​​ ವಿಡೀಯ ಇಲ್ಲಿದೆ

Viral: ಜುಟ್ಟು ಹಿಡಿದು ಎಳೆದು, ಕಚ್ಚಿ ಹೆತ್ತ ತಾಯಿಗೆ ಚಿತ್ರಹಿಂಸೆ ನೀಡಿದ ಪಾಪಿ ಮಗಳು; ಆಘಾತಕಾರಿ ದೃಶ್ಯ ವೈರಲ್‌

ಈ ಕುರಿತ ವಿಡಿಯೋವನ್ನು Mumbaikhabar9 ಹೆಸರಿನ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಲೋಕೋ ಪೈಲಟ್‌ ಒಬ್ಬರು ರೈಲು ನಿಲ್ಲಿಸಿ ಹಳಿಯ ಮೇಲೆಯೇ ಮೂತ್ರ ವಿಸರ್ಜಿಸುತ್ತಿರುವ ದೃಶ್ಯವನ್ನು ಕಾಣಬಹುದು. ಸ್ಟೇಷನ್‌ ತಲುಪುವ ಮೊದಲೇ ರೈಲು ನಿಲ್ಲಿಸಿ ಮೂತ್ರ ವಿಸರ್ಜಿಸಿ, ನಂತರ ರೈಲನ್ನು ಚಲಾಯಿಸಿಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಜುಟ್ಟು ಹಿಡಿದು ಎಳೆದು, ಕಚ್ಚಿ ಹೆತ್ತ ತಾಯಿಗೆ ಚಿತ್ರಹಿಂಸೆ ನೀಡಿದ ಪಾಪಿ ಮಗಳು; ಆಘಾತಕಾರಿ ದೃಶ್ಯ ವೈರಲ್‌

ಫೆಬ್ರವರಿ 27 ರಂದು ಹಂಚಿಕೊಳ್ಳಲಾದ ಈ ವಿಡಿಯೋ 7 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನನಗೇನು ಇದರಲ್ಲಿ ಲೋಕೋ ಪೈಲಟ್‌ ತಪ್ಪು ಕಾಣುತ್ತಿಲ್ಲʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಪ್ರಕೃತಿಯ ಕರೆಯಷ್ಟೆ, ಇದರಲ್ಲಿ ಅಪರಾಧವೇನು ಇಲ್ಲ ಬಿಡಿʼ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ