AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಷಕ್ಕೆ ಕೊಡೋದು 3.8 ಲಕ್ಷ ರೂ ಸಂಬಳವಾದ್ರೂ ದಿನಕ್ಕೆ 12 ಗಂಟೆ ಕೆಲಸ ಮಾಡ್ಲೇಬೇಕಂತೆ, ಇದು ಬಾಸ್ ಆದೇಶ

ಸೋಷಿಯಲ್‌ ಮೀಡಿಯಾದ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ರೆಡ್ಡಿಡ್‌ನಲ್ಲಿ ಬಳಕೆದಾರರು ಹಂಚಿಕೊಳ್ಳುವ ಕೆಲವೊಂದು ಸ್ಟೋರಿಗಳು ಸಿಕ್ಕಾಪಟ್ಟೆ ವೈರಲ್‌ ಆಗುತ್ತವೆ. ಇದೀಗ ರೆಡ್ಡಿಟ್ ಬಳಕೆದಾರರೊಬ್ಬರು ತಮ್ಮ ಮ್ಯಾನೇಜರ್ ಜೊತೆಗಿನ ಮಾತುಕತೆಯ ಸ್ಕ್ರೀನ್‌ಶಾಟ್ ವೊಂದನ್ನು ಹಂಚಿಕೊಂಡಿದ್ದಾರೆ. ಆದರೆ ಇದರಲ್ಲಿ ಉದ್ಯೋಗಿಯೂ ವರ್ಷಕ್ಕೆ 3.8 ಲಕ್ಷ ರೂ ಸಂಬಳ ಪಡೆದರೂ, ಬಾಸ್‌ ಮಾತ್ರ ದಿನಕ್ಕೆ 12 ಗಂಟೆ ಕೆಲಸ ಮಾಡಿ ಎಂದು ಒತ್ತಾಯಿಸಿರುವುದನ್ನು ಕಾಣಬಹುದು. ಈ ಪೋಸ್ಟ್ ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

ವರ್ಷಕ್ಕೆ ಕೊಡೋದು 3.8 ಲಕ್ಷ ರೂ ಸಂಬಳವಾದ್ರೂ ದಿನಕ್ಕೆ 12 ಗಂಟೆ ಕೆಲಸ ಮಾಡ್ಲೇಬೇಕಂತೆ, ಇದು ಬಾಸ್ ಆದೇಶ
ವೈರಲ್​ ಪೋಸ್ಟ್​
ಸಾಯಿನಂದಾ
| Edited By: |

Updated on: Mar 01, 2025 | 11:36 AM

Share

ಕೆಲಸದ ಸ್ಥಳಗಳಲ್ಲಿ ಕಂಪೆನಿಗಳು ಕೆಲವೊಂದು ಕಟ್ಟುನಿಟ್ಟಾದ ಕ್ರಮಗಳು ಹಾಗೂ ನಿಯಮಗಳನ್ನು ಉದ್ಯೋಗಿಗಳ ಮೇಲೆ ವಿಧಿಸುತ್ತದೆ. ಕೆಲಸಕ್ಕೆ ಸಮಯಕ್ಕೆ ಸರಿಯಾಗಿ ಬರಬೇಕು, ಇಂತಿಷ್ಟು ಸಂಬಳಕ್ಕೆ ಇಂತಿಷ್ಟು ಗಂಟೆಗಳ ಕಾಲ ಕೆಲಸ ಮಾಡಬೇಕು. ಕೆಲವೊಮ್ಮೆ ಉದ್ಯೋಗಿಗಳು ಈ ಬಾಸ್ ಗಳು ಹೇರುವ ನಿಯಮಗಳಿಗೆ ವಿರೋಧ ವ್ಯಕ್ತಪಡಿಸುತ್ತಾರೆ. ಇದೀಗ ವೈರಲ್ ಆಗಿರುವ ಪೋಸ್ಟ್ ನಲ್ಲಿ ವರ್ಷಕ್ಕೆ 3.8 ಲಕ್ಷ ರೂ ಸಂಬಳ ಪಡೆದರೂ, ಬಾಸ್‌ ಮಾತ್ರ ದಿನಕ್ಕೆ 12 ಗಂಟೆ ಕೆಲಸ ಮಾಡಿ ಎಂದು ಉದ್ಯೋಗಿಗೆ ಒತ್ತಾಯಿಸಿದ್ದಾರೆ.

ಹೌದು, ರೆಡ್ಡಿಟ್ ಬಳಕೆದಾರರೊಬ್ಬರು ತಮ್ಮ ಮ್ಯಾನೇಜರ್ ಜೊತೆಗೆ ನಡೆಸಿದ ಮಾತುಕತೆಯ ಸ್ಕ್ರೀನ್‌ಶಾಟ್ ಶೇರ್ ಮಾಡಿಕೊಂಡಿದ್ದು ಇದರಲ್ಲಿ ಕಡಿಮೆ ಸಂಬಳವಾದರೂ ಕೆಲಸದ ಸಮಯ ಹೆಚ್ಚಳ ಮಾಡಿರುವುದನ್ನು ಕಾಣಬಹುದು. ತಮ್ಮ ಬಾಸ್‌ ಕಳುಹಿಸಿದ ಸಂದೇಶದ ಸ್ಕ್ರೀನ್‌ ಶಾಟ್‌ ಜೊತೆಗೆ ‘ನಾನು ವರ್ಷಕ್ಕೆ 3.8 ಲಕ್ಷ ಮೂಲ ವೇತನ ಪಡೆಯುತ್ತಿದ್ದು, ನನ್ನ ಬಾಸ್‌ ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡುವಂತೆ ಹೇಳಿದ್ದಾರೆ. ನಾನು ಇದನ್ನು ನಿರಾಕರಿಸಿದಾಗ ಇಂದು ಮ್ಯಾನೇಜರ್ ಇದನ್ನು ಟೆಲಿಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, ನನಗೆ ಮುಂದೆ ಏನು ಮಾಡಬೇಕು ಎಂಬುದರ ಕುರಿತು ಯಾರಾದರೂ ಸಲಹೆ ನೀಡಿ ಪ್ಲೀಸ್‌ ಎಂದು ಬರೆದುಕೊಂಡಿದ್ದಾರೆ.

ಈ ಸ್ಕ್ರೀನ್ ಶಾಟ್ ನಲ್ಲಿ ಬಾಸ್, ನನಗೆ 25ರವರೆಗೆ ಹಗಲು ರಾತ್ರಿ ಕೆಲಸ ಮಾಡುವವರು ಬೇಕು. ಆದ್ದರಿಂದ ಯಾರು ಕೂಡಾ ಅಲ್ಲಿಯವರೆಗೆ ಕಚೇರಿಯನ್ನು ತಪ್ಪಿಸಿಕೊಳ್ಳಬಾರದು. ಯಾರಿಗಾದರೂ ಸಮಸ್ಯೆ ಇದ್ದರೆ ನನಗೆ ಕರೆ ಮಾಡಿ ತಿಳಿಸಿ. ನಾನು ಎಲ್ಲಾ ಸಮಸ್ಯೆಗಳನ್ನೂ ಆಲಿಸಿ ಪರಿಹರಿಸುತ್ತೇನೆ. ಆದರೆ ಕೆಲಸದಲ್ಲಿ ಯಾವುದೇ ಲೋಪವಿದ್ದರೂ ನಾನು ಸಹಿಸುವುದಿಲ್ಲ. ಕೆಲಸದಲ್ಲಿ ಯಾವುದೇ ಅಂತರ ಇರಬಾರದು, ಯಾರಿಗಾದರೂ ಹೆಚ್ಚು ಒತ್ತಡ ಆಗುತ್ತಿದ್ದರೆ. ನೀವು ಬಾತ್ರಾ ಸರ್ ಅವರೊಂದಿಗೆ ಮಾತನಾಡಬಹುದು. ಮತ್ತು ಅವರ ಬಳಿ ತಂಡ ಬದಲಾವಣೆಗೆ ವಿನಂತಿಸಬಹುದು ಎಂದಿದ್ದಾರೆ.

ಇದನ್ನೂ ಓದಿ
Image
ಕುಂಭಮೇಳ ಮುಗಿಸಿ ಡೋಮಿನೋಸ್‌ಗೆ ಪಿಜ್ಜಾ ತಿನ್ನಲು ಬಂದ ಸಾಧುಗಳು
Image
ಮರಿಮೊಮ್ಮಗಳ ಜೊತೆ ಮಕ್ಕಳಂತೆ ಆಟವಾಡಿದ ಮುತ್ತಾತ
Image
UPPSC ಪರೀಕ್ಷೆಯಲ್ಲಿ 6 ನೇ ರ‍್ಯಾಂಕ್‌ ಗಳಿಸಿ ಡಿಎಸ್ಪಿ ಆದ ಸುಂದರಿ ಇವ್ರೇ ನ
Image
Viral:ಮೀನಲ್ಲಾ ಅಣ್ಣಾ ಅದು ಮೊಸಳೆ, ಬದುಕಿದೆಯಾ ಬಡ ಜೀವವೇ!

ಇದನ್ನೂ ಓದಿ: ಇಂಟರ್​ವ್ಯೂ ಮುಗೀತು, ಕೆಲಸವೂ ಸಿಕ್ತು, ಸಂಬಳವೂ ಓಕೆ ಆದರೂ ಮಹಿಳೆ ಆಫರ್​ ತಿರಸ್ಕರಿಸಿದ್ದೇಕೆ?

ಈ ಪೋಸ್ಟ್ ಶೇರ್ ಮಾಡಿಕೊಳ್ಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ನಾನಾ ರೀತಿಯ ಕಾಮೆಂಟ್ ಗಳು ವ್ಯಕ್ತವಾಗಿವೆ. ಬಳಕೆದಾರರೊಬ್ಬರು, ‘ಈ ಮ್ಯಾನೇಜರ್ ವರ್ತನೆ ಅಸಹನೀಯವಾಗಿದೆ’ ಎಂದಿದ್ದಾರೆ. ಮತ್ತೊಬ್ಬರು, ‘ಈ ಬಾಸ್‌ನ ಮಾತುಗಳನ್ನು ಲೆಕ್ಕಿಸಬೇಡಿ. ನಿಮ್ಮ ಸಮಯಕ್ಕೆ ಲಾಗ್‌ಔಟ್‌ ಆಗಿ’ ಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ಕಡಿಮೆ ಸಂಬಳಕ್ಕೆ ಹೆಚ್ಚು ಸಮಯ ದುಡಿಯುವುದಕ್ಕಿಂತ ಕೆಲಸ ತೊರೆಯುವುದೇ ಉತ್ತಮ’ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ‘ನಿಮಗೆ ಹಣಕಾಸಿನ ಜವಾಬ್ದಾರಿಗಳಿಲ್ಲದಿದ್ದರೆ, ಈಗಲೇ ಈ ಉದ್ಯೋಗ ಬಿಟ್ಟುಬಿಡಿ. ಇಲ್ಲದಿದ್ದರೆ, ಒಳ್ಳೆಯ ಉದ್ಯೋಗವನ್ನು ಹುಡುಕಿ’ ಎಂದು ಸಲಹೆ ನೀಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ