Viral: ಇಂಟರ್ವ್ಯೂ ಮುಗೀತು, ಕೆಲಸವೂ ಸಿಕ್ತು, ಸಂಬಳವೂ ಓಕೆ ಆದರೂ ಮಹಿಳೆ ಆಫರ್ ತಿರಸ್ಕರಿಸಿದ್ದೇಕೆ?
ಇತ್ತೀಚಿನ ದಿನಗಳಲ್ಲಿ ಯಾವ ಕ್ಷೇತ್ರದಲ್ಲಿ ನೋಡಿದರೂ ಎಲ್ಲಾ ಹುದ್ದೆಗಳಿಗೆ ಸ್ಪರ್ಧೆ, ಪೈಪೋಟಿ ಇದ್ದೇ ಇರುತ್ತದೆ, ಒಂದು ಹುದ್ದೆಗೆ ಸಾವಿರಾರು ಜನ ಆಕಾಂಕ್ಷಿಗಳಿರುತ್ತಾರೆ. ಅದರಲ್ಲಿ ಒಬ್ಬರಿಗೋ ಇಬ್ಬರಿಗೋ ಕೆಲಸ ಸಿಗಬಹುದು, ಆದರೆ ಮಹಿಳೆಯೊಬ್ಬರು ಇಂಟರ್ವ್ಯೂಗೆ ತೆರಳಿದ್ದಾಗ ಮೊದಲ ಸುತ್ತಿನಲ್ಲೇ ಆಯ್ಕೆಯಾಗಿ ಕೆಲಸವೂ ಸಿಕ್ಕಿತ್ತು, ಒಳ್ಳೆಯ ಸಂಬಳವನ್ನೂ ಆಫರ್ ಮಾಡಿದ್ದರು, ಆದರೂ ಆಫರ್ ಲೆಟರ್ ರಿಜೆಕ್ಟ್ ಮಾಡಿ ಸುದ್ದಿಯಲ್ಲಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಯಾವ ಕ್ಷೇತ್ರದಲ್ಲಿ ನೋಡಿದರೂ ಎಲ್ಲಾ ಹುದ್ದೆಗಳಿಗೆ ಪೈಪೋಟಿ ಇದ್ದೇ ಇರುತ್ತದೆ, ಒಂದು ಹುದ್ದೆಗೆ ಸಾವಿರಾರು ಜನ ಆಕಾಂಕ್ಷಿಗಳಿರುತ್ತಾರೆ. ಅದರಲ್ಲಿ ಒಬ್ಬರಿಗೋ ಇಬ್ಬರಿಗೋ ಕೆಲಸ ಸಿಗಬಹುದು, ಆದರೆ ಮಹಿಳೆಯೊಬ್ಬರು ಇಂಟರ್ವ್ಯೂಗೆ ತೆರಳಿದ್ದಾಗ ಮೊದಲ ಸುತ್ತಿನಲ್ಲೇ ಆಯ್ಕೆಯಾಗಿ ಕೆಲಸವೂ ಸಿಕ್ಕಿತ್ತು, ಒಳ್ಳೆಯ ಸಂಬಳವನ್ನೂ ಆಫರ್ ಮಾಡಿದ್ದರು, ಆದರೂ ಆಫರ್ ರಿಜೆಕ್ಟ್ ಮಾಡಿ ಸುದ್ದಿಯಲ್ಲಿದ್ದಾರೆ.
ಹೌದು ಸಂದರ್ಶಕರು 45 ನಿಮಿಷ ತಡವಾಗಿ ಬಂದು ಇಂಟರ್ವ್ಯೂ ಮಾಡಿದ್ದಕ್ಕೆ ಕೋಪಗೊಂಡ ಅಭ್ಯರ್ಥಿ ತನಗೆ ಈ ಕೆಲವೇ ಬೇಡವೆಂದು ಧಿಕ್ಕರಿಸಿ ಬಂದಿದ್ದಾಳೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರೆಡ್ಡಿಟ್ ಪೋಸ್ಟ್ ಸಂದರ್ಶಕರು ತಡವಾಗಿ ಬಂದ ನಂತರ ಅಭ್ಯರ್ಥಿಯು ಹೇಗೆ ಹೊರಟುಹೋದರು ಎಂಬುದನ್ನು ವಿವರಿಸುತ್ತದೆ. ಪೋಸ್ಟ್ನಲ್ಲಿ ನಿಕೋಲ್ ಎಂಬುವವರು ನನಗೆ ಕೆಲಸ ಸಿಕ್ಕಿತ್ತು ಆದರೆ ಈ ಕಾರಣದಿಂದ ನಿರಾಕರಿಸಿದೆ ಎಂದು ಬರೆದಿದ್ದಾರೆ. ಆದರೆ ಈ ವಿಚಾರವನ್ನು ಅವರ ಮುಂದೆ ಹೇಳಲು ಬೇಸರವಾಗಿತ್ತು ಎಂದಿದ್ದಾರೆ.
ಇಂಟರ್ವ್ಯೂ ನನ್ನ ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ, ನಾವಿಬ್ಬರೂ ಒಪ್ಪಿಕೊಂಡ ಸಮಯದಲ್ಲಿ ನೀವು ನನ್ನ ಇಂಟರ್ವ್ಯೂ ಮಾಡುತ್ತೀರಿ ಎಂದು ನಂಬಿದ್ದೆ, ನೀವು ತಡವಾಗಿ ಬಂದಿದ್ದಲ್ಲದೆ, ಇದನ್ನು ನಾನು ಕೇಳಿದ್ದಕ್ಕೆ ನೀವು ಏನೋ ಸಬೂಬು ಹೇಳಲು ಮುಂದಾದಿರಿ.
ಮತ್ತಷ್ಟು ಓದಿ:Viral : ಐಐಟಿ ಪ್ರವೇಶ ಪಡೆದರೆ ಮಗನಿಗೆ ಸಂಬಳದ 40% ಕೊಡುವುದಾಗಿ ಭರವಸೆ ನೀಡಿದ ತಂದೆ
ಈ ನಿಮ್ಮ ನಡವಳಿಕೆ ನನಗೆ ಸರಿ ಅನಿಸಲಿಲ್ಲ. ಅವರು ಈ ವಿಷಯವನ್ನು ಹೇಗೆ ನಿಭಾಯಿಸಿದರು ಎಂಬುದರ ಕುರಿತು ಹಲವಾರು ಬಳಕೆದಾರರು ವಿಭಿನ್ನ ದೃಷ್ಟಿಕೋನಗಳೊಂದಿಗೆ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ತನಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ತನ್ನನ್ನು ಕೂಡ ಸಂದರ್ಶಕರು 25 ನಿಮಿಷಗಳ ಕಾಲ ಕೂರಿಸಿ ತಡವಾಗಿ ಬಂದಿದ್ದರು ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




