AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ಬಾರಿ ಫೇಲ್‌ ಆದ್ರೂ ಬಿಡದ ಛಲ; 10 ನೇ ತರಗತಿಯಲ್ಲಿ ಶೇ. 44% ಅಂಕ ಗಳಿಸಿದ ಬಾಲಕ ಇಂದು ಐಎಎಸ್‌ ಅಧಿಕಾರಿ

ಕಠಿಣ ಪರಿಶ್ರಮ ಮತ್ತು ಸಾಧಿಸುವ ಗುರಿಯೊಂದಿದ್ದರೆ ಆಸಾಧ್ಯವಾದುದು ಈ ಜಗತ್ತಿನಲ್ಲಿ ಯಾವುದು ಇಲ್ಲ ಎನ್ನುತ್ತಾರೆ. ಈ ಮಾತಿನಂತೆ ಇಲ್ಲೊಬ್ರು ವ್ಯಕ್ತಿ ಸೋಲುಗಳನ್ನೇ ಮೆಟ್ಟಿಲನ್ನಾಗಿಸಿ ತನ್ನ ಕಠಿಣ ಪರಿಶ್ರಮದಿಂದಲೇ ಐಎಎಸ್‌ ಅಧಿಕಾರಿಯಾಗಿದ್ದಾರೆ. ಹೌದು 10 ನೇ ತರಗತಿಯಲ್ಲಿ ಜಸ್ಟ್‌ ಪಾಸ್‌ ಆಗಿದ್ದ ಇವರು ಬರೋಬ್ಬರಿ 10 ಪ್ರಯತ್ನಗಳ ಬಳಿಕ UPSC ಎಕ್ಸಾಂ ಪಾಸ್‌ ಮಾಡಿ IAS ಅಧಿಕಾರಿಯಾಗಿದ್ದಾರೆ. ಇವರ ಈ ಯಶಸ್ಸಿನ ಕಥೆ ನಿಜಕ್ಕೂ ಸ್ಪೂರ್ತಿದಾಯಕ.

10 ಬಾರಿ ಫೇಲ್‌ ಆದ್ರೂ ಬಿಡದ ಛಲ; 10 ನೇ ತರಗತಿಯಲ್ಲಿ ಶೇ. 44% ಅಂಕ ಗಳಿಸಿದ ಬಾಲಕ ಇಂದು ಐಎಎಸ್‌ ಅಧಿಕಾರಿ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Feb 24, 2025 | 5:28 PM

Share

ಕಠಿಣ ಪರಿಶ್ರಮ ಮತ್ತು ಸಾಧಿಸುವ ಗುರಿಯೊಂದಿದ್ದರೆ ಆಸಾಧ್ಯವಾದುದು ಈ ಜಗತ್ತಿನಲ್ಲಿ ಯಾವುದು, ಜೀವನದಲ್ಲಿ ಬರುವ ಅಡತಡೆಗಳನ್ನು ಮೆಟ್ಟಿ ನಿಲ್ಲುವ ಮೂಲಕ ಯಶಸ್ಸು ಸಾಧಿಸಬಹುದು ಎನ್ನುತ್ತಾರೆ. . ಈ ಮಾತಿನಂತೆ ಇಲ್ಲೊಬ್ರು ವ್ಯಕ್ತಿ ಸೋಲುಗಳನ್ನೇ ಮೆಟ್ಟಿಲನ್ನಾಗಿಸಿ ತನ್ನ ಕಠಿಣ ಪರಿಶ್ರಮದಿಂದಲೇ ಐಎಎಸ್‌ ಅಧಿಕಾರಿಯಾಗಿದ್ದಾರೆ. ಐಎಎಸ್‌, ಐಪಿಎಸ್‌ನಂತಹ ಮಹೋನ್ನತ ಹುದ್ದೆಯನ್ನು ಪಡೆಯಬೇಕೆಂದರೆ ಹಗಲಿರುಳು ಶ್ರಮ ವಹಿಸಿ ಓದಿ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. ಆದ್ರೆ ಈ ಪರೀಕ್ಷೆಯಲ್ಲಿ ಪಾಸ್‌ ಆಗುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕೆ ಕಠಿಣ ಪರಿಶ್ರಮ ಅತ್ಯಗತ್ಯ. ಅಂತೆಯೇ 10 ನೇ ತರಗತಿಯಲ್ಲಿ ಜಸ್ಟ್‌ ಪಾಸ್‌ ಆಗಿದ್ದ ಈ ವ್ಯಕ್ತಿ ಬರೋಬ್ಬರಿ 10 ಪ್ರಯತ್ನಗಳ ಬಳಿಕ UPSC ಎಕ್ಸಾಂ ಪಾಸ್‌ ಮಾಡಿ IAS ಅಧಿಕಾರಿಯಾಗಿದ್ದಾರೆ. ಇವರ ಈ ಯಶಸ್ಸಿನ ಕಥೆ ನಿಜಕ್ಕೂ ಸ್ಪೂರ್ತಿದಾಯಕ.

ಇದು 10 ನೇ ತರಗತಿಯಲ್ಲಿ ಕೇವಲ ಶೇ.400% ಅಂಕ ಗಳಿಸಿ, ತನ್ನ ಕಠಿಣ ಪರಿಶ್ರಮದಿಂದಲೇ ಇಂದು ಐಎಎಸ್‌ ಅಧಿಕಾರಿಯಾದ ಅವನೀಶ್‌ ಶರಣ್‌ ಅವರ ಸಕ್ಸಸ್‌ ಸ್ಟೋರಿ. ಸರ್ಕಾರಿ ಶಾಲೆಯಲ್ಲಿ ಓದಿದಂತಹ ಬಿಹಾರದ ಅವನೀಶ್‌ ಹತ್ತನೇ ತರಗತಿಯಲ್ಲಿ ಕೇವಲ 44% ಅಂಕವನ್ನು ಪಡೆದು ಜಸ್ಟ್‌ ಪಾಸ್‌ ಆಗಿದ್ದರು. ಇನ್ನೂ ದ್ವಿತೀಯ ಪಿಯುಸಿಯಲ್ಲಿ 65% ಅಂಕವನ್ನು ಗಳಿಸಿದ ಇವರಿಗೆ ನಾಗರಿಕ ಸೇವಾ ಹುದ್ದೆಗಳಿಗೆ ಸೇರುವ ಕನಸಿತ್ತು. ಸತತ 10 ಬಾರಿ ಫೇಲ್‌ ಆಗಿ ಸತತ ಪರಿಶ್ರಮದ ಬಳಿಕ ಯುಪಿಎಸ್‌ಸಿ ಎಕ್ಸಾಂ ಪಾಸ್‌ ಮಾಡುವ ಮೂಲಕ ಐಎಎಸ್‌ ಅಧಿಕಾರಿಯಾದರು.

ಇದನ್ನೂ ಓದಿ: ನಿಮ್ಗೊತ್ತಾ, ನೀವು ಆಯ್ಕೆ ಮಾಡಲ್ಪಟ್ಟವರು; ವಿರಾಟ್‌ ಕೊಹ್ಲಿ ಶತಕವನ್ನು ಸಂಭ್ರಮಿಸಿದ ಆನಂದ್‌ ಮಹೀಂದ್ರಾ

ಹಲವು ವೈಫಲ್ಯ:

ಅವನೀಶ್‌ ಅವರ ಈ ಪ್ರಯಾಣವು ಅತ್ಯಂತ ಸವಾಲಿನದ್ದಾಗಿತ್ತು. ಅವನೀಶ್ ಹಲವು ಬಾರಿ ವೈಫಲ್ಯಗಳನ್ನು ಎದುರಿಸಬೇಕಾಯಿತು. ಅವರು ಸಿಡಿಎಸ್ ಮತ್ತು ಸಿಪಿಎಫ್ ಪರೀಕ್ಷೆಗಳಲ್ಲಿಯೂ ಅನುತ್ತೀರ್ಣರಾದರು ಮತ್ತು ರಾಜ್ಯ ಲೋಕಸೇವಾ ಆಯೋಗದ ಪೂರ್ವಭಾವಿ ಪರೀಕ್ಷೆಯಲ್ಲಿ ಹತ್ತು ಬಾರಿ ಅನುತ್ತೀರ್ಣರಾದರು. ಆದರೆ ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆ, ಛಲ ಎಂದಿಗೂ ಕುಗ್ಗಲಿಲ್ಲ. ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯ ಮೊದಲ ಪ್ರಯತ್ನದಲ್ಲಿ ಅವರು ಸಂದರ್ಶನ ಸುತ್ತಿನವರೆಗೂ ತಲುಪಿ ಅಲ್ಲಿ ಅನುತ್ತೀರ್ಣರಾದರು. ನಂತರ ಅವರು ಎರಡನೇ ಪ್ರಯತ್ನದಲ್ಲಿ ಅಖಿಲ ಭಾರತ ಶ್ರೇಣಿ AIR 77 ನೇ ರ್ಯಾಂಕ್‌ ಪಡೆಯುವ ಮೂಲಕ ಐಎಎಸ್ ಅಧಿಕಾರಿಯಾದರು ಮತ್ತು ಪ್ರಸ್ತುತ ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ತನ್ನ ಪ್ರಯಾಣದಲ್ಲಿ ಹಲವು ಅಡೆತಡೆಗಳನ್ನು ಎದುರಿಸಿ ಕೊನೆಗೆ ಛಲ ಬಿಡದೆ ತನ್ನ ಗುರಿ ತಲುಪಿದ ಅವನೀಶ್‌ ಅವರ ಕಥೆ ಎಲ್ಲರಿಗೂ ಸ್ಪೂರ್ತಿ ಅಂದರೆ ತಪ್ಪಗಲಾರದು.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ