ನಿಮ್ಗೊತ್ತಾ, ನೀವು ಆಯ್ಕೆ ಮಾಡಲ್ಪಟ್ಟವರು; ವಿರಾಟ್ ಕೊಹ್ಲಿ ಶತಕವನ್ನು ಸಂಭ್ರಮಿಸಿದ ಆನಂದ್ ಮಹೀಂದ್ರಾ
ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನದಲ್ಲಿ ವಿರುದ್ಧ ಶತಕ ಸಿಡಿಸಿ ವಿರಾಟ್ ಕೊಹ್ಲಿ ಭಾರತಕ್ಕೆ ದೊಡ್ಡ ಗೆಲುವನ್ನು ತಂದು ಕೊಟ್ಟಿದ್ದಾರೆ. ಇನ್ನೂ ಕೊಹ್ಲಿ ಶತಕ ಸಿಡಿಸುತ್ತಿದ್ದಂತೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಜೊತೆಗೆ ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ. ಉದ್ಯಮಿ ಆನಂದ್ ಮಹೀಂದ್ರಾ ಕೂಡಾ ಹೈ ವೋಲ್ಟೇಜ್ ಪಂದ್ಯದಲ್ಲಿ ಶತಕ ಸಿಡಿಸಿದ ಕೊಹ್ಲಿಯನ್ನು ಶ್ಲಾಘಿಸಿದ್ದಾರೆ. ಈ ಕುರಿತ ಪೋಸ್ಟ್ ಒಂದು ಇದೀಗ ಸಖತ್ ವೈರಲ್ ಆಗುತ್ತಿದೆ.

ಭಾನುವಾರ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ 2025 ಗ್ರೂಪ್ ಎ ಪಂದ್ಯದಲ್ಲಿ ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮ್ಯಾನ್ ವಿರಾಟ್ ಕೊಹ್ಲಿ 111 ಎಸೆತಗಳಲ್ಲಿ 100 ರನ್ ಗಳಿಸುವ ಮೂಲಕ ಹಾಗೂ ಶತಕ ಸಿಡಿಸುವ ಮೂಲಕ ಪಾಕಿಸ್ತಾನದ ವಿರುದ್ಧ ಭಾರತ ತಂಡಕ್ಕೆ ಆರು ವಿಕೆಟ್‌ಗಳ ಸ್ಮರಣೀಯ ಗೆಲುವು ತಂದು ಕೊಟ್ಟರು. ಇದು ಕೊಹ್ಲಿಯ 51 ನೇ ಏಕದಿನ ಶತಕ ಮತ್ತು ಪಾಕಿಸ್ತಾನದ ವಿರುದ್ಧ 4 ನೇ ಶತಕವಾಗಿದೆ. ಇನ್ನೂ ಫ್ಯಾನ್ಸ್ ಕಿಂಗ್ ಕೊಹ್ಲಿ ಸೆಂಚುರಿಯನ್ನು ಭರ್ಜರಿಯಾಗಿ ಸಂಭ್ರಮಿಸಿದ್ದು, ಉದ್ಯಮಿ ಆನಂದ್ ಮಹೀಂದ್ರಾ ಕೂಡಾ ಹೈ ವೋಲ್ಟೇಜ್ ಪಂದ್ಯದಲ್ಲಿ ಶತಕ ಸಿಡಿಸಿದ ಕೊಹ್ಲಿಯನ್ನು ಶ್ಲಾಘಿಸಿದ್ದಾರೆ. ಈ ಕುರಿತ ಪೋಸ್ಟ್ ಒಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ವಿವ್ ಆಗಿರುವ ಉದ್ಯಮಿ ಆನಂದ್ ಮಹೀಂದ್ರಾ ಪ್ರತಿನಿತ್ಯ ಇಂಟರೆಸ್ಟಿಂಗ್ ಪೋಸ್ಟ್, ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಇವರು ಕೊಹ್ಲಿ ಶತಕವನ್ನು ಶ್ಲಾಘಿಸಿದ್ದು, ಈ ಕುರಿತ ಪೋಸ್ಟ್ ವೈರಲ್ ಆಗುತ್ತಿದೆ.
ವೈರಲ್ ಪೋಸ್ಟ್:
You know you are a ‘chosen one’ when your match-winning stroke also precisely delivers your century…
🙏🏽
👏🏽👏🏽👏🏽 pic.twitter.com/30WBiIsB2x
— anand mahindra (@anandmahindra) February 23, 2025
ಆನಂದ್ ಮಹೀಂದ್ರಾ (anandmahindra) ತಮ್ಮ ಎಕ್ಸ್ ಖಾತೆಯಲ್ಲಿ ಕೊಹ್ಲಿ ಇನ್ನಿಂಗ್ಸ್‌ನ ಚಿತ್ರವನ್ನು ಹಂಚಿಕೊಂಡು “ನಿಮ್ಗೊತ್ತಾ, ನೀವು ಆಯ್ಕೆ ಮಾಡಲ್ಪಟ್ಟವರು; ನಿಮ್ಮ ಮ್ಯಾಚ್-ವಿನ್ನಿಂಗ್ ಸ್ಟ್ರೋಕ್ ಕೂಡಾ ನಿಮಗೆ ನಿಖರವಾದ ಸೆಂಚುರಿಯನ್ನು ತಂದುಕೊಟ್ಟಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕ್ಷಮಿಸಿ ಪಾಕ್ ಅಭಿಮಾನಿಗಳೇ, 10 ನಿಮಿಷದಲ್ಲಿ ಟಿವಿ ಡೆಲಿವರಿ ಮಾಡೋಕೇ ನಮ್ಮಿಂದ ಆಗೋಲ್ಲ; ವೈರಲ್ ಆಯ್ತು ಬ್ಲಿಂಕಿಟ್ ಮೀಮ್
ಇಂದು ಮುಂಜಾನೆ ಶೇರ್ ಮಾಡಲಾದ ಈ ಪೋಸ್ಟ್ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಜಕ್ಕೂ ಕೊಹ್ಲಿ ದಂತಕಥೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼವಿರಾಟ್ ಕೊಹ್ಲಿ ದೇಶದ ಹೆಮ್ಮೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಿಜಕ್ಕೂ ಕೊಹ್ಲಿ ವಿಶೇಷ ಆಟಗಾರʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




