AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಷಮಿಸಿ ಪಾಕ್‌ ಅಭಿಮಾನಿಗಳೇ, 10 ನಿಮಿಷದಲ್ಲಿ ಟಿವಿ ಡೆಲಿವರಿ ಮಾಡೋಕೇ ನಮ್ಮಿಂದ ಆಗೋಲ್ಲ; ವೈರಲ್‌ ಆಯ್ತು ಬ್ಲಿಂಕಿಟ್‌ ಮೀಮ್‌

ದುಬೈನಲ್ಲಿ ಭಾನುವಾರ (ಫೆ. 23) ನಡೆದ ಚಾಂಪಿಯನ್ಸ್‌ ಟ್ರೋಫಿ 2025 ರ ಪಂದ್ಯದಲ್ಲಿ ಟೀಮ್‌ ಇಂಡಿಯಾ ಪಾಕ್‌ ವಿರುದ್ಧ ಭರ್ಜರಿ ಜಯ ಗಳಿಸಿದೆ. ಈ ಗೆಲುವನ್ನು ಭಾರತೀಯರು ಭರ್ಜರಿಯಾಗಿ ಸಂಭ್ರಮಿಸಿದ್ದು, ದೆಹಲಿ ಪೊಲೀಸ್‌ ಮತ್ತು ಬ್ಲಿಂಕಿಟ್‌ ಸೋಷಿಯಲ್‌ ಮೀಡಿಯಾದಲ್ಲಿ ಮೀಮ್ಸ್‌ ಹರಿಬಿಡುವ ಮೂಲಕ ಪಾಕ್‌ ಅಭಿಮಾನಿಗಳ ಕಾಲೆಳೆದಿದ್ದಾರೆ. ಹೌದು 10 ನಿಮಿಷದಲ್ಲಿ ಟಿವಿ ಡೆಲಿವರಿ ಮಾಡೋಕೆ ನಮ್ಮಿಂದ ಸಾಧ್ಯವಿಲ್ಲ ಎಂದು ಬ್ಲಿಂಕಿಟ್‌ ತಮಾಷೆ ಮಾಡಿದ್ದು, ಈ ಮೀಮ್ಸ್‌ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಕ್ಷಮಿಸಿ ಪಾಕ್‌ ಅಭಿಮಾನಿಗಳೇ, 10 ನಿಮಿಷದಲ್ಲಿ ಟಿವಿ ಡೆಲಿವರಿ ಮಾಡೋಕೇ ನಮ್ಮಿಂದ ಆಗೋಲ್ಲ; ವೈರಲ್‌ ಆಯ್ತು ಬ್ಲಿಂಕಿಟ್‌ ಮೀಮ್‌
ವೈರಲ್​ ಪೋಸ್ಟ್​​
ಮಾಲಾಶ್ರೀ ಅಂಚನ್​
| Edited By: |

Updated on: Feb 24, 2025 | 11:46 AM

Share

ವಿಶೇಷವಾಗಿ ಭಾರತ ಮತ್ತು ಪಾಕ್‌ ತಂಡದ ಕ್ರಿಕೆಟ್‌ ಪಂದ್ಯದ ವೇಳೆ ಪಾಕಿಸ್ತಾನ ತಂಡ ಸೋತರೆ ಪ್ರತಿ ಬಾರಿಯೂ ಪಾಕ್‌ ಅಭಿಮಾನಿಗಳು ನಮ್ಮ ತಂಡ ಭಾರತದ ವಿರುದ್ಧ ಹೀನಾಯವಾಗಿ ಸೋಲುಂಡಿತು ಎಂದು ನಿರಾಸೆಯಿಂದ ಟಿವಿಯನ್ನು ಒಡೆದು ಹಾಕುತ್ತಾರೆ. ಪಾಕ್‌ ಅಭಿಮಾನಿಗಳು ಟಿವಿ ಒಡೆದು ಹಾಕಿ ಕೋಪ ತೀರಿಸಿಕೊಳ್ಳುವ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ಈ ಬಾರಿ ನಡೆದ ಚಾಂಪಿಯನ್ಸ್‌ ಟ್ರೋಫಿ 2025 ರ ಪಂದ್ಯದಲ್ಲಿ ಟೀಮ್‌ ಇಂಡಿಯಾ ಪಾಕ್‌ ವಿರುದ್ಧ ಭರ್ಜರಿ ಜಯ ಗಳಿಸಿದ್ದು, ವಿಶೇಷವಾಗಿ ದೆಹಲಿ ಪೊಲೀಸ್‌ ಮತ್ತು ಬ್ಲಿಂಕಿಟ್‌ ಸೋಷಿಯಲ್‌ ಮೀಡಿಯಾದಲ್ಲಿ ಟಿವಿ ಮೀಮ್ಸ್‌ ಹರಿಬಿಡುವ ಮೂಲಕ ಪಾಕ್‌ ಅಭಿಮಾನಿಗಳ ಕಾಲೆಳೆದಿದ್ದಾರೆ. ಹೌದು 10 ನಿಮಿಷದಲ್ಲಿ ಟಿವಿ ಡೆಲಿವರಿ ಮಾಡೋಕೆ ನಮ್ಮಿಂದ ಸಾಧ್ಯವಿಲ್ಲ ಎಂದು ಬ್ಲಿಂಕಿಟ್‌ ತಮಾಷೆ ಮಾಡಿದ್ದು, ಈ ಮೀಮ್ಸ್‌ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಆನ್‌ಲೈನ್‌ ಡೆಲಿವರಿ ಅಪ್ಲಿಕೇಷನ್‌ಗಳಲ್ಲಿ ಒಂದಾದ ಬ್ಲಿಂಕಿಟ್‌ (Blinkit) “ಪಾಕ್‌ ಅಭಿಮಾನಿಗಳೇ ಕ್ಷಮಿಸಿ; ನಾವು ನಿಮಗೆ 10 ನಿಮಿಷಗಳಲ್ಲಿ ಟಿವಿಯನ್ನು ಡೆಲಿವರಿ ಮಾಡಲು ಸಾಧ್ಯವಿಲ್ಲ” ಎಂಬ ವೀಮ್ಸ್‌ ಒಂದನ್ನು ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡುವ ಮೂಲಕ ಪಾಕ್‌ ಅಭಿಮಾನಿಗಳ ಕಾಲೆಳೆದು, ಭಾರತದ ಗೆಲುವನ್ನು ಸಂಭ್ರಮಿಸಿದೆ. ಬ್ಲಿಂಕಿಟ್‌ನ ಈ ಫನ್ನಿ ಮೀಮ್ಸ್‌ ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ವೈರಲ್​ ಪೋಸ್ಟ್​ ಇಲ್ಲಿದೆ ನೋಡಿ:,

ಇನ್ನೂ ದೆಹಲಿ ಪೊಲೀಸ್‌ ಕೂಡಾ ನಮ್ದು ಒಂದು ಇರ್ಲಿ ಎನ್ನುತ್ತಾ ಪಾಕ್‌ ಅಭಿಮಾನಿಗಳ ಕಾಲೆಳೆದಿದ್ದಾರೆ. ಹೌದು “ಪಕ್ಕದ ದೇಶದಿಂದ ಕೆಲವು ವಿಚಿತ್ರವಾದ ಶಬ್ದಗಳು ಕೇಳಿ ಬರುತ್ತಿವೆ. ಅದು ಕೇವಲ ಟಿವಿಗಳು ಮಾತ್ರ ಒಡೆದು ಹೋಗಿದ್ದು ಎಂದು ನಾವು ಭಾವಿಸುತ್ತೇವೆ” ಎಂದು ಹೇಳುವ ಮೂಲಕ ಪಾಕ್‌ ಅಭಿಮಾನಿಗಳ ಕಾಲೆಳೆದಿದ್ದಾರೆ.

ಇದನ್ನೂ ಓದಿ: ಇದು ಲೇಸ್ ಚಿಪ್ಸ್ ಆಮ್ಲೆಟ್ ಅಂತೆ, ನೀವೇನಾದ್ರೂ ಟ್ರೈ ಮಾಡ್ತೀರಾ

Delhi Police ಅಧೀಕೃತ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಲಾದ ಈ ಪೋಸ್ಟ್‌ 1 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼದೆಹಲಿ ಪೊಲೀಸರ ಹಾಸ್ಯ ಪ್ರಜ್ಞೆ ತುಂಬಾ ಚೆನ್ನಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ಈಗ ಮುಖ್ಯವೇ; ಈ ಅನುಪಯುಕ್ತ ಟ್ವೀಟ್‌ ಬದಲು ಕಾನೂನು ಹಾಗೂ ಸುವ್ಯವಸ್ಥೆಯನ್ನು ನೋಡಿಕೊಳ್ಳಿʼ ಎಂದು ಹೇಳಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್