Viral : ಐಐಟಿ ಪ್ರವೇಶ ಪಡೆದರೆ ಮಗನಿಗೆ ಸಂಬಳದ 40% ಕೊಡುವುದಾಗಿ ಭರವಸೆ ನೀಡಿದ ತಂದೆ
ಮಕ್ಕಳಿಗಾಗಿ ತಂದೆ ತಾಯಿ ಏನು ಬೇಕಾದರೂ ಮಾಡಲು ಸಿದ್ಧವಿರುತ್ತಾರೆ, ಇಲ್ಲೊಬ್ಬ ತಂದೆ ತನ್ನ ಮಗನಿಗೆ ವಿಚಿತ್ರವಾದ ಭರವಸೆಯನ್ನು ನೀಡಿದ್ದಾನೆ. ತಮ್ಮ ಮಗ ಈ ಷರತ್ತನ್ನು ಪೂರೈಸಿದರೆ, ನಿವೃತ್ತಿಯವರೆಗೆ ತನ್ನ ಸಂಬಳದ 40 ಪ್ರತಿಶತವನ್ನು ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಕೈ ಬರಹದಲ್ಲೇ ಮಾಡಿಕೊಂಡ ಒಪ್ಪಂದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಮಕ್ಕಳಿಗೆ ಒಂದೊಳ್ಳೆ ಭವಿಷ್ಯ ಕಟ್ಟಿಕೊಡಬೇಕೆನ್ನುವುದು ಪ್ರತಿಯೊಬ್ಬರ ತಂದೆ ತಾಯಿಯ ಕನಸಾಗಿರುತ್ತದೆ. ಹೀಗಾಗಿ ಉತ್ತಮ ಶಿಕ್ಷಣ ಮತ್ತು ಅತ್ಯುತ್ತಮ ಅಂಕ ಪಡೆಯಲು ಪೋಷಕರು ತಮ್ಮ ಮಕ್ಕಳ ಮೇಲೆ ವಿವಿಧ ಷರತ್ತುಗಳನ್ನು ವಿಧಿಸುವುದನ್ನು ಕಾಣಬಹುದು. ಮಕ್ಕಳು ಉತ್ತಮ ಅಂಕಗಳನ್ನು ಗಳಿಸಿದರೆ ಅವರಿಗೆ ಉಡುಗೊರೆಯನ್ನು ನೀಡುವುದಾಗಿ ಪೋಷಕರು ಭರವಸೆ ನೀಡುತ್ತಾರೆ. ಇದೀಗ ತಂದೆಯೊಬ್ಬನು, ಐಐಟಿಗೆ ಪ್ರವೇಶ ಪಡೆದರೆ ತನ್ನ ಸಂಬಳದ 40% ರಷ್ಟನ್ನು ಮಗನಿಗೆ ನೀಡುವುದಾಗಿ ಭರವಸೆ ನೀಡಿರುವ ಪೋಸ್ಟ್ ವೊಂದು ವೈರಲ್ ಆಗಿದೆ.
Upset_Design_8656 ಎಂಬ ಬಳಕೆದಾರನು, ತಂದೆಯ ಕೈ ಬರಹದ ಪತ್ರದ ಫೋಟೋವನ್ನು ರೆಡ್ಡಿಟ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಕಾಲೇಜು ಪ್ರವೇಶದ ಕುರಿತು ತಂದೆಯೊಬ್ಬರು ತಮ್ಮ ಮಗನೊಂದಿಗೆ ಮಾಡಿಕೊಂಡಿರುವ ವಿಚಿತ್ರ ಒಪ್ಪಂದದ ಕುರಿತು ನೋಡಬಹುದು. ಈ ಪೋಸ್ಟ್ ನೊಂದಿಗೆ ಮಗನು, ‘ನನ್ನ ತಂದೆ ಒಂದು ಘೋಷಣೆ ಮಾಡಿದ್ದಾರೆ’ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾನೆ.
ಈ ಪೋಸ್ಟ್ ನಲ್ಲಿ ಆತ ಐಐಟಿ, ಎನ್‌ಐಟಿ, ಐಐಐಟಿ ಅಥವಾ ಬಿಟ್ಸ್ ಪಿಲಾನಿಯಂತಹ ಉನ್ನತ ಶ್ರೇಣಿಯ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ರವೇಶ ಪಡೆದರೆ ತಂದೆಯೂ ನಿವೃತ್ತಿಯಾಗುವವರೆಗೆ ಪ್ರತಿ ತಿಂಗಳು ತಮ್ಮ ಸಂಬಳದ 40% ರಷ್ಟು ಹಣವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಒಂದು ವೇಳೆ ಸೆಕೆಂಡ್ ಅಥವಾ ಮೂರನೇ ಹಂತದ ಕಾಲೇಜಿನಲ್ಲಿ ಪ್ರವೇಶ ಪಡೆದರೆ, ತನ್ನ ನಿವೃತ್ತಿಯವರೆಗೂ ಸಂಬಳದ 100% ಹಣವನ್ನು ಮಗನು ತಂದೆಗೆ ನೀಡಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದಾರೆ.
ಮತ್ತಷ್ಟು ಓದಿ: Viral: ನಿಮ್ಮ ಬಳಿ ಈ 2 ರೂಪಾಯಿ ಹಳೆಯ ನೋಟು ಇದ್ರೆ ನೀವು ಗಳಿಸಬಹುದು ಬರೋಬ್ಬರಿ 5 ಲಕ್ಷ ರೂ.; ಹೇಗೆ ಇಲ್ಲಿದೆ ಮಾಹಿತಿ
ಈ ಪೋಸ್ಟ್ ವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಬಳಕೆದಾರರೊಬ್ಬರು, ‘ನಿಮ್ಮ ತಂದೆ ಎಲ್‌ಐಸಿ ಏಜೆಂಟಾ?.. ಎಂಥಾ ಖತರ್ನಾಕ್ ಸ್ಕೀಮ್ ತಂದಿದ್ದಾರೆ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ತಂದೆ ಮತ್ತೆ ಮಗನ ಫೀಸ್‌ಗೇ ಶೇಕಡಾ 40ರಷ್ಟು ಹಣ ಖರ್ಚಾಯಿತು ಎಂದು ನೆಪ ಹೇಳುತ್ತಾರೆ’ ಎಂದು ಕಾಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




