AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಅಗ್ನಿಶಾಮಕ ದಳದ ಸಿಬ್ಬಂದಿಗಳ ಬೆಂಕಿ ಡ್ಯಾನ್ಸ್‌; ವೈರಲ್‌ ಆಯ್ತು ವಿಡಿಯೋ

ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯ ಸಿಕ್ಕಾಪಟ್ಟೆ ವೈರಲ್‌ ಆಗುತ್ತವೆ. ಅಂತಹದ್ದೊಂದು ವಿಡಿಯೋ ಇದೀಗ ಹರಿದಾಡುತ್ತಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿಗಳ ಬೆಂಕಿ ಡ್ಯಾನ್ಸ್‌ಗೆ ನೆಟ್ಟಿಗರಂತೂ ಫುಲ್‌ ಫಿದಾ ಆಗಿದ್ದಾರೆ. ಅಗ್ನಿ ಶಾಮಕ ಸೇವಾ ವಾಹನದೊಳಗೆ ಕುಳಿತು ಮಲಯಾಳಂ ಹಾಡಿಗೆ ಉತ್ಸಾಹಭರಿತವಾಗಿ ಡ್ಯಾನ್ಸ್‌ ಮಾಡಿದ್ದಾರೆ. ಇವರ ಈ ಭರ್ಜರಿ ಡ್ಯಾನ್ಸ್‌ ಪರ್ಫಾರ್ಮೆನ್ಸ್‌ ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ.

Viral: ಅಗ್ನಿಶಾಮಕ ದಳದ ಸಿಬ್ಬಂದಿಗಳ ಬೆಂಕಿ ಡ್ಯಾನ್ಸ್‌; ವೈರಲ್‌ ಆಯ್ತು ವಿಡಿಯೋ
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Feb 22, 2025 | 1:07 PM

Share

ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಪ್ರತಿಯೊಂದು ತುರ್ತು ಸಂದರ್ಭದಲ್ಲಿಯೂ ತಮ್ಮ ಪ್ರಾಣದ ಹಂಗು ತೊರೆದು ಇತರರ ಪ್ರಾಣ ಉಳಿಸಲು ಶ್ರಮಿಸುತ್ತಾರೆ. ಎಂತಹದ್ದೇ ಕಠಿಣ ಪರಿಸ್ಥಿತಿಯಲ್ಲೂ ಸಮಯಕ್ಕೆ ಸರಿಯಾಗಿ ಬಂದು ರಕ್ಷಣಾ ಕಾರ್ಯ ಮಾಡುತ್ತಾರೆ. ಇಲ್ಲೊಂದಷ್ಟು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸೇವೆ ಮಾತ್ರವಲ್ಲ ಡ್ಯಾನ್ಸ್‌ ಮಾಡೋದಕ್ಕೂ ನಾವು ಸೈ ಎನ್ನುತ್ತಾ ಭರ್ಜರಿಯಾಗಿ ಡ್ಯಾನ್ಸ್‌ ಮಾಡಿದ್ದಾರೆ. ಅಗ್ನಿ ಶಾಮಕ ಸೇವಾ ವಾಹನದೊಳಗೆ ಕುಳಿತು ಮಲಯಾಳಂ ಹಾಡಿಗೆ ಉತ್ಸಾಹಭರಿತವಾಗಿ ಡ್ಯಾನ್ಸ್‌ ಮಾಡಿದ್ದಾರೆ. ಈ ಭರ್ಜರಿ ಡ್ಯಾನ್ಸ್‌ ಪರ್ಫಾರ್ಮೆನ್ಸ್‌ ವಿಡಿಯೋ ಸಖತ್‌ ವೈರಲ್‌ ಆಗುತ್ತಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿಗಳ ಬೆಂಕಿ ಡ್ಯಾನ್ಸ್‌ಗೆ ನೆಟ್ಟಿಗರಂತೂ ಫುಲ್‌ ಫಿದಾ ಆಗಿದ್ದಾರೆ.

ಕೇರಳದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವುದರಲ್ಲಿ ಮಾತ್ರವಲ್ಲ ಡ್ಯಾನ್ಸ್‌ ಮಾಡೋದ್ರಲ್ಲೂ ನಾವು ಪರಿಣಿತರು ಎನ್ನುತ್ತಾ ಭರ್ಜರಿಯಾಗಿ ನೃತ್ಯ ಮಾಡಿದ್ದಾರೆ. ಇಲ್ಲಿನ ಕೊಲ್ಲೆಂಗೋಡ್‌ ವಿಭಾಗದ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಮ್ಮ ಸೇವಾ ವಾಹನದೊಳಗೆ ಕುಳಿತು ಕಲ್ಯಾಣರಾಮನ್‌ ಅವರ ಕ್ಲಾಸಿಕ್‌ ಹಾಡುಗಳಲ್ಲಿ ಒಂದಾದ ಥಿಂಕಲೆ ಪೂಥಿಂಕಲೆ ಹಾಡಿಗೆ ಭರ್ಜರಿ ಡ್ಯಾನ್ಸ್‌ ಮಾಡಿದ್ದಾರೆ. ಈ ಉತ್ಸಾಹಭರಿತ ನೃತ್ಯಕ್ಕೆ ಸೆಲೆಬ್ರಿಟಿಗಳು ಕೂಡಾ ಮನಸೋತಿದ್ದಾರೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ವಿಡಿಯೋವನ್ನು thalathirinjavan007 ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದ್ದು, “ಕರ್ತವ್ಯದ ಬಳಿಕದ ವಿಶ್ರಾಂತಿಯ ಕ್ಷಣ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಯುನಿಫಾರ್ಮ್‌ ತೊಟ್ಟ ಅಗ್ನಿಶಾಮಕ ದಳದ ಸಿಬ್ಬಂದಿಗಳು ಜೊತೆಯಾಗಿ ಕುಳಿತು ಮಲಯಾಳಂ ಹಾಡಿಗೆ ಭರ್ಜರಿಯಾಗಿ ಡ್ಯಾನ್ಸ್ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ನ್ಯಾಯಾಲಯದ ಆವರಣದಲ್ಲಿಯೇ ಜಗಳವಾಡಿಕೊಂಡ ಅತ್ತೆ-ಸೊಸೆ; ವಿಡಿಯೋ ವೈರಲ್‌

ಆರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 5.1 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಬೆಂಕಿ ಡ್ಯಾನ್ಸ್‌ʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಬೆಂಕಿ ನಂದಿಸಲು ಮಾತ್ರವಲ್ಲ ಡ್ಯಾನ್ಸ್‌ ಮೂಲಕ ಬೆಂಕಿ ಹತ್ತಿಸಲು ಕೂಡಾ ಇವರು ಫೇಮಸ್‌ʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅದ್ಭುತವಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ