ಡೈಪರ್ ಮಾಲೆ ಹಿಡಿದ ಮಹಿಳೆಯ ವಿಡಿಯೋ ವೈರಲ್
ಮಹಿಳೆಯೊಬ್ಬರು ಡೈಪರ್ ಮಾಲೆಯನ್ನು ಮಾಡಿ ಅದರ ವಿಡಿಯೋ ಮಾಡಿದ್ದಾರೆ. ಈ ರೀಲ್ ಒಂದು ವಿಚಿತ್ರ ಮತ್ತು ಅನಿರೀಕ್ಷಿತ ದೃಶ್ಯವನ್ನು ಸೆರೆಹಿಡಿಯುತ್ತದೆ. ಅಲ್ಲಿ ಮಹಿಳೆಯು ಡೈಪರ್ ತುಂಬಿದ ಹಾರವನ್ನು ಕೈಯಲ್ಲಿ ಹಿಡಿದಿದ್ದಾಳೆ. ಈ ವಿಡಿಯೋದಲ್ಲಿ ಅವರು ಅದನ್ನು "ಡೈಪರ್ ಮಾಲೆ" ಎಂದು ಕರೆದಿದ್ದಾರೆ. ಯಾರಾದರೂ ಈ ಹಾರವನ್ನು ತಮ್ಮ ಕುತ್ತಿಗೆಗೆ ಹಾಕಿಕೊಳ್ಳಲು ಬಯಸುತ್ತೀರಾ? ಎಂದು ತಮಾಷೆಯಾಗಿ ವೀಕ್ಷಕರನ್ನು ಕೇಳಿದ್ದಾರೆ.

ನವದೆಹಲಿ: ನೀವು ಡೈಪರ್ ಹಾರವನ್ನು ಧರಿಸುತ್ತೀರಾ? ಇದನ್ನು ಕೇಳಿದರೆ ನಿಮಗೆ ಅಸಹ್ಯವೆನಿಸಬಹುದು. ಆದರೆ, ಒಬ್ಬ ಮಹಿಳೆ ವೈರಲ್ ಆಗುತ್ತಿರುವುದು ಇದೇ ಕಾರಣಕ್ಕೆ. ಪ್ಲಾಸ್ಟಿಕ್ ಕಸದ ಚೀಲಗಳಿಂದ ಮಾಡಿದ ಮತ್ತು ಡೈಪರ್‌ಗಳಿಂದ ತುಂಬಿದ ಹಾರವನ್ನು ಹಿಡಿದಿರುವ ಮಹಿಳೆಯ ವಿಡಿಯೋ ವೈರಲ್ ಆಗಿದ್ದು, ಇನ್‌ಸ್ಟಾಗ್ರಾಂನಲ್ಲಿ ವ್ಯಾಪಕ ಗಮನ ಸೆಳೆದಿದೆ. ಈ ರೀಲ್ ಅನ್ನು ಭಾರತೀಯ ಮೂಲದ ವಿಜ್ಞಾನಿ ಮತ್ತು ಇನ್‌ಸ್ಟಾಗ್ರಾಮರ್ ಡಾ. ಕವಿತಾ ಶರ್ಮಾ ಪೋಸ್ಟ್ ಮಾಡಿದ್ದಾರೆ.
ಕವಿತಾ ಶರ್ಮಾ ಅವರ ವಿಡಿಯೋವೊಂದು ವಿಚಿತ್ರವಾದ ಕಾರಣಗಳಿಂದ ವೈರಲ್ ಆಗಿದೆ. ಅವರು ಹೂವುಗಳಿಂದಲ್ಲ, ಡೈಪರ್‌ಗಳಿಂದ ತಯಾರಿಸಿದ ಉದ್ದನೆಯ ಹಾರವನ್ನು ಹಿಡಿದು ಕ್ಯಾಮೆರಾ ಮುಂದೆ ಪೋಸ್ ನೀಡಿದ್ದಾರೆ. ಈ ರೀಲ್ ಒಂದು ವಿಚಿತ್ರ ಮತ್ತು ಅನಿರೀಕ್ಷಿತ ದೃಶ್ಯವನ್ನು ಸೆರೆಹಿಡಿಯುತ್ತದೆ. ಅದರಲ್ಲಿ ಮಹಿಳೆ ಡೈಪರ್ ತುಂಬಿದ ಹಾರವನ್ನು ಕೈಯಲ್ಲಿ ಹಿಡಿದಿದ್ದಾಳೆ.
View this post on Instagram
ಈ ವಿಡಿಯೋದಲ್ಲಿ ಆ ಮಹಿಳೆ ಅದನ್ನು “ಡೈಪರ್ ಮಾಲಾ” ಎಂದು ಕರೆದಿದ್ದಾರೆ. ಆದರೆ ಯಾರಾದರೂ ಅದನ್ನು ತಮ್ಮ ಕುತ್ತಿಗೆಗೆ ಧರಿಸಲು ಬಯಸುತ್ತೀರಾ? ಎಂದು ಹಾಸ್ಯಮಯವಾಗಿ ವೀಕ್ಷಕರನ್ನು ಕೇಳಿದ್ದಾರೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




