Viral: ಹಕ್ಕಿಯಂತೆ ಹಾರುವ ಅಪರೂಪದ ಅಳಿಲನ್ನು ಕಂಡಿರಾ?
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ಕುತೂಹಲಕಾರಿ, ಅದ್ಭುತ ದೃಶ್ಯಗಳು ನಮ್ಮನ್ನು ಬೆರಗುಗೊಳಿಸುತ್ತವೆ. ಇದೀಗ ಅಂತಹದ್ದೇ ಅಪರೂಪದ ದೃಶ್ಯವೊಂದು ವೈರಲ್ ಆಗಿದ್ದು, ಅಳಿಲೊಂದು ಆಕಾಶದೆತ್ತರಲ್ಲಿ ಒಂದು ಮರದಿಂದ ಇನ್ನೊಂದು ಮರಕ್ಕೆ ಹಕ್ಕಿಯಂತೆ ಹಾರಿದೆ. ಈ ಅಪರೂಪದ ಹಾರುವ ಅಳಿಲನ್ನು ಕಂಡು ಹಾರುವ ಅಳಿಲು ಕೂಡಾ ಈ ಭೂಮಿ ಮೇಲೆ ಇದ್ಯಾ ಎಂದು ನೋಡುಗರು ಆಶ್ಚರ್ಯಚಕಿತರಾಗಿದ್ದಾರೆ.

ವನ್ಯ ಜೀವಿ ಪ್ರಪಂಚವೇ ಕುತೂಹಲಕಾರಿಯಾದದ್ದು. ಇದರ ಬಗ್ಗೆ ತಿಳಿದಷ್ಟೂ ಕಡಿಮೆಯೇ. ಹೀಗೆ ವನ್ಯ ಜೀವಿಗಳ ಅಚ್ಚರಿಯ ಜಗತ್ತಿಗೆ ಸಂಬಂಧಿಸಿದ ಕೆಲವೊಂದಿಷ್ಟು ಫೋಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಅಪರೂಪದ ಹಾರುವ ಅಳಿಲಿನ ವಿಡಿಯೋ ವೈರಲ್ ಆಗಿದೆ. ಅಳಿಲೊಂದು ಆಕಾಶದೆತ್ತರಲ್ಲಿ ಒಂದು ಮರದಿಂದ ಇನ್ನೊಂದು ಮರಕ್ಕೆ ಹಕ್ಕಿಯಂತೆ ಹಾರಿದೆ. ಈ ಅಪರೂಪದ ಹಾರುವ ಅಳಿಲನ್ನು ಕಂಡು ಹಾರುವ ಅಳಿಲು ಕೂಡಾ ಈ ಭೂಮಿ ಮೇಲೆ ಇದ್ಯಾ ಎಂದು ನೋಡುಗರು ಆಶ್ಚರ್ಯಚಕಿತರಾಗಿದ್ದಾರೆ.
ಈ ಭೂಮಿ ಮೇಲೆ ಹಲವಾರು ಜಾತಿಯ ಅಳಿಲುಗಳಿವೆ. ಅವುಗಳಲ್ಲಿ ಹಾರುವ ಅಳಿಲು ಕೂಡಾ ಒಂದು. ಆದ್ರೆ ಹೆಚ್ಚಿನವರಿಗೆ ಈ ಹಾರುವ ಅಳಿಲು ಅಸ್ತಿತ್ವದಲ್ಲಿದೆ ಎಂಬುದೇ ಗೊತ್ತಿಲ್ಲ. ಇದೀಗ ಈ ಅಪರೂಪದ ಅಳಿಲು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು, ಈ ದೃಶ್ಯ ಇದೀಗ ಸಖತ್ ವೈರಲ್ ಆಗುತ್ತಿದೆ. ಕನ್ಸರ್ವೇಶನ್ ಇಂಡಿಯಾ ಪ್ರಕಾರ, ಭಾರತದಲ್ಲಿ ಸುಮಾರು 17 ಜಾತಿಯ ಹಾರುವ ಅಳಿಲುಗಳು ಕಂಡುಬರುತ್ತವೆ, ಅವುಗಳಲ್ಲಿ 14 ಜಾತಿಯ ಅಳಿಲುಗಳು ಈಶಾನ್ಯ ಭಾರತದಲ್ಲಿ ಮಾತ್ರ ಕಂಡುಬರುತ್ತವೆ. ಇವುಗಳಲ್ಲಿ, ಇಂಡಿಯನ್ ಫ್ಲೈಯಿಂಗ್ ಸ್ಕ್ವೇರಲ್ ಅತ್ಯಂತ ದೊಡ್ಡ ಮತ್ತು ಸಾಮಾನ್ಯ ಜಾತಿಯ ಅಳಿಲಾಗಿದೆ.
ಈ ಕುರಿತ ವಿಡಿಯೋವನ್ನು ಭಾರತೀಯ ಅರಣ್ಯಾಧಿಕಾರಿ ಶಿವಕುಮಾರ್ ಗಂಗಲ್ (Shivakumar Gangal IFS) ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, “2 ವರ್ಷಗಳ ಹಿಂದೆ ನಾನು ಭಾರತೀಯ ಅರಣ್ಯ ಸೇವೆಗೆ ಆಯ್ಕೆಯಾದಾಗ ಹಾರುವ ಅಳಿಲು ಅಸ್ತಿತ್ವದಲ್ಲಿದೆ ಎಂದು ಹೇಳಿದಾಗ ನನಗೆ ನಗು ಬರುತ್ತಿತ್ತು. ಆದ್ರೆ ಇಂದು ನಾನು ಕಣ್ಣಾರೆ ನೋಡಿದೆ. ಇದು ಪ್ರಕೃತಿಯ ಅದ್ಭುತಗಳಲ್ಲಿ ಒಂದಾಗಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
If you had told me that this animal exists, 2 years ago when I got selected in the Indian Forest Service, I would have laughed. Here it is, one of nature’s marvels – “Flying Squirrel”. The take off, the glide, the landing, every bit of it is a spectacle to witness. pic.twitter.com/njwmpsD6KC
— Shivakumar Gangal, IFS (@shivgangal_ifs) February 15, 2025
ಕೇವಲ 12 ಸೆಕೆಂಡುಗಳ ಈ ವೀಡಿಯೊದಲ್ಲಿ ಹಾರುವ ಅಳಿಲು ಹಕ್ಕಿಯಂತೆ ಒಂದು ಮರದಿಂದ ಇನ್ನೊಂದು ಮರಕ್ಕೆ ಹಾರಿ ಹೋಗುವಂತಹ ದೃಶ್ಯವನ್ನು ಕಾಣಬಹುದು. ಇತರೆ ಅಳಿಲುಗಳು ಚಂಗನೆ ಜಿಗಿದು ಒಂದು ಮರದಿಂದ ಇನ್ನೊಂದು ಮರಕ್ಕೆ ಹಾರುತ್ತವೆ. ಆದ್ರೆ ಈ ಹಾರುವ ಅಳಿಲು ಹಕ್ಕಿಯಂತೆ ಹಾರುತ್ತಾ ಒಂದು ಮರದಿಂದ ಇನ್ನೊಂದು ಮರವನ್ನೇರಿದೆ. ಮರಗಳ ನಡುವೆ ಸಂತೋಷದಿಂದ ಹಾರುತ್ತಿರುವ ಅಳಿಲಿನ ಅಪರೂಪದ ವೀಡಿಯೊ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಮಂತ್ರಮುಗ್ಧರನ್ನಾಗಿಸಿದೆ.
ಇದನ್ನೂ ಓದಿ: ಕ್ಯಾಬ್‌ನಲ್ಲಿ ಕಾಣಿಸಿಕೊಂಡ ಹೆರಿಗೆ ನೋವು; ಮಹಿಳೆಗೆ ಹೆರಿಗೆ ಮಾಡಿಸಲು ಸಹಾಯ ಮಾಡಿದ ರ್‍ಯಾಪಿಡೋ ಚಾಲಕ
ಫೆಬ್ರವರಿ 15 ರಂದು ಹಂಚಿಕೊಳ್ಳಲಾದ ಈ ವಿಡಿಯೋ 32 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼ10 ವರ್ಷಗಳ ಹಿಂದೆ ಕರ್ನಾಟಕದ ಕಾಡುಗಳಲ್ಲಿ ಈ ಅಪರೂಪದ ಅಳಿಲನ್ನು ನೋಡಿದ್ದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನೀವು ಏಕೆ ಈ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದೀರಿ, ಅವುಗಳನ್ನು ಶಾಂತಿಯುತವಾಗಿ ಬದುಕಲು ಬಿಡಿʼ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ʼಪ್ರಾಣಿ ಪ್ರಪಂಚದಲ್ಲಿ ಇನ್ನೆಷ್ಟು ಅದ್ಭುತಗಳು ಅಡಗಿದೆಯೋʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




