Viral:ಕ್ಯಾಬ್‌ನಲ್ಲಿ ಕಾಣಿಸಿಕೊಂಡ ಹೆರಿಗೆ ನೋವು; ಮಹಿಳೆಗೆ ಹೆರಿಗೆ ಮಾಡಿಸಲು ಸಹಾಯ ಮಾಡಿದ ರ್‍ಯಾಪಿಡೋ ಚಾಲಕ
ಸೋಷಿಯಲ್ ಮೀಡಿಯಾ ಬಳಕೆದಾರರು ತಮಗಾದ ಕೆಟ್ಟ ಅನುಭವ ಆಗಿರ್ಬೋದು ಅಥವಾ ಆ ಹೃದಯಸ್ಪರ್ಶಿ ಕಥೆಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ರವು ವ್ಯಕ್ತಿ ಕ್ಯಾಬ್ ಚಾಲಕನೊಬ್ಬ ತನ್ನ ಕ್ಯಾಬ್‌ನಲ್ಲಿಯೇ ಗರ್ಭಿಣಿ ಮಹಿಳೆಗೆ ಹೆರಿಗೆ ಮಾಡಿಸಲು ಸಹಾಯ ಮಾಡಿದ ಹೃದಯಸ್ಪರ್ಶಿ ಕಥೆಯನ್ನು ಹಂಚಿಕೊಂಡಿದ್ದಾರೆ. ಕ್ಯಾಬ್ ಚಾಲಕನ ಈ ಮಾನವೀಯ ಗುಣ ನೆಟ್ಟಿಗರ ಮನ ಗೆದ್ದಿದೆ.

ಮಾನವೀಯತೆಯೇ ದೊಡ್ಡ ಧರ್ಮ ಎಂದು ಹೇಳಲಾಗುತ್ತದೆ ಆದ್ರೆ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಮಾನವೀಯತೆ ಎಂಬುದೇ ಮರೆಯಾಗುತ್ತಿದ್ದು, ಮನುಷ್ಯತ್ವಕ್ಕೆ ಬೆಲೆ ಇಲ್ಲದಂತಾಗಿದೆ. ಇಂತಹ ಸಂಗತಿಗಳ ನಡುವೆ ಇಲ್ಲೊಬ್ಬ ಕ್ಯಾಬ್ ಡ್ರೈವರ್ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಹೌದು ಗರ್ಭಿಣಿ ಮಹಿಳೆಯೊಬ್ಬರಿಗೆ ತನ್ನ ಕ್ಯಾಬ್‌ನಲ್ಲಿಯೇ ಹೆರಿಗೆ ಮಾಡಿಸುವ ಮೂಲಕ ಮಾನವೀಯತೆಯನ್ನು ಮರೆದಿದ್ದಾನೆ. ಈ ಹೃದಯಸ್ಪರ್ಶಿ ಕಥೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ರ್‍ಯಾಪಿಡೋ ಕ್ಯಾಬ್ ಚಾಲಕನ ಈ ಮಾನವೀಯ ಗುಣ ನೆಟ್ಟಿಗರ ಮನ ಗೆದ್ದಿದೆ.
ಮಧ್ಯ ರಾತ್ರಿ ಆಸ್ಪತ್ರೆಗೆ ಹೋಗುವ ಮಧ್ಯೆ ತುಂಬು ಗರ್ಭಿಣಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆ ಸಂದರ್ಭದಲ್ಲಿ ರ್‍ಯಾಪಿಡೋ ಚಾಲಕ ತನ್ನ ಕ್ಯಾಬ್‌ನಲ್ಲಿಯೇ ಮಹಿಳೆಗೆ ಹೆರಿಗೆ ಮಾಡಿಸಲು ಸಹಾಯ ಮಾಡಿದ್ದಾನೆ. ರ್‍ಯಾಪಿಡೋ ಚಾಲಕ ವಿಕಾಸ್ ಸಹಾಯದಿಂದ ಮಹಿಳೆ ಕ್ಯಾಬ್‌ನಲ್ಲಿಯೇ ಗಂಡು ಮಗುವಿಗೆ ಜನ್ಮವನ್ನು ನೀಡಿದ್ದಾರೆ. ರ್‍ಯಾಪಿಡೋ ಚಾಲಕನ ಈ ಮಾನವೀಯ ಗುಣ ಎಲ್ಲರ ಹೃದಯ ಗೆದ್ದಿದೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
Rapido Driver did this byu/rohan_mehra_ ingurgaon
ಈ ಹೃದಯಸ್ಪರ್ಶಿ ಕಥೆಯನ್ನು ರೋಹನ್ ಮೆಹ್ರಾ (rohan_mehra_) ಎಂಬವರು ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. “ನಮಸ್ಕಾರ ಸ್ನೇಹಿತರೇ, ನಿಮ್ಮೆಲ್ಲರ ಜೊತೆ ಒಂದು ಸುದ್ದಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ, ಇಂದು ನನ್ನ ಮನೆಯ ಅಡುಗೆಭಟ್ಟರ ತುಂಬು ಗರ್ಭಿಣಿ ಪತ್ನಿಯನ್ನು ಹೆರಿಗೆಗಾಗಿ ಆಸ್ಪತ್ರೆಗೆ ಸೇರಿಸಲು ರ್‍ಯಾಪಿಡೋ ಬುಕ್ ಮಾಡಿದೆ. ಆದ್ರೆ ಆಸ್ಪತ್ರೆಗೆ ಹೋಗುವ ದಾರಿ ಮಧ್ಯೆ ಆಕೆಗೆ ತೀವ್ರವಾಗಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಕೆ ಕಾರಿನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದಳು. ಹೆರಿಗೆ ಮಾಡಿಸಲು ರ್‍ಯಾಪಿಡೋ ಚಾಲಕ ಸಹಾಯ ಮಾಡಿದ್ದು, ನಂತರ ಸಮಯ ವ್ಯರ್ಥ ಮಾಡದೆ ಅವರನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಮತ್ತೆ ಆತ ಹೆಚ್ಚುವರಿಯಾಗಿ ಒಂದು ರೂಪಾಯಿ ಹಣವನ್ನು ಕೂಡಾ ಪಡೆಯಲಿಲ್ಲ. ಆತನ ಈ ಮಾನವೀಯತೆಗಾಗಿ ನಾವು ಆತನಿಗೆ ಏನಾದರೂ ಮಾಡಬೇಕೆಂದು ಬಯಸುತ್ತೇವೆ” ಎಂದು ಸುದೀರ್ಘ ಶೀರ್ಷಿಕೆಯನ್ನು ಬರೆದುಕೊಂಡು ಚಾಲಕನನ್ನು ಸಂಪರ್ಕಿಸಲು ನಮಗೆ ಸಹಾಯ ಮಾಡಿ ಎಂದು ರ್‍ಯಾಪಿಡೋ ಸವಾರಿ ವಿವರದ ಸ್ಕ್ರೀನ್‌ಶಾಟ್ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಏಯ್ ಇಲ್ಲೇನ್ ಮಾಡ್ತಿದ್ದೀರಾ; ರಸ್ತೆ ಬದಿ ರೊಮ್ಯಾನ್ಸ್ ಮಾಡ್ತಿದ್ದ ಹುಡುಗ-ಹುಡುಗಿಯ ಮೇಲೆ ನೀರೆರಚಿದ ವ್ಯಕ್ತಿ
ಒಂದು ದಿನದ ಹಿಂದೆ ಶೇರ್ ಮಾಡಲಾದ ಈ ಪೋಸ್ಟ್ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಜಕ್ಕೂ ಆ ಚಾಲಕ ಪ್ರಶಂಸೆಗೆ ಅರ್ಹನುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼ ರ್‍ಯಾಪಿಡೋ ಚಾಲಕನ ಈ ಮಾನವೀಯತೆಗೆ ನನ್ನದೊಂದು ಸಲಾಂʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಕಥೆಯನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿ, ಚಾಲಕನನ್ನು ಪತ್ತೆ ಹಚ್ಚಲು ಸುಲಭವಾಗಬಹುದುʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




