AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ನಂತರ ಎರಡನೇ ಐಟಿ ಹಬ್ ಆಗಿ ಮೈಸೂರು? ತಮ್ಮೂರಿಗೆ ಉಡುಗೊರೆ ಕೊಟ್ಟ ಸಿದ್ದು

Siddaramaiah's record budget aims to develop Mysore as another IT hub of Karnataka: ಬೆಂಗಳೂರಿನಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು, ಮೂಲಭೂತ ಸೌಕರ್ಯಗಳ ಮೇಲಿನ ಒತ್ತಡ ತಗ್ಗಿಸಲು ಸರ್ಕಾರ ಉಪಾಯ ಹುಡುಕಿದೆ. ಮೈಸೂರನ್ನು ಎರಡನೇ ಐಟಿ ಹಬ್ ಆಗಿ ಅಭಿವೃದ್ಧಿಪಡಿಸಲು ಹೊರಟಿದೆ. ಈ ಬಾರಿಯ ಬಜೆಟ್​ನಲ್ಲಿ ಇದನ್ನು ಘೋಷಿಸಲಾಗಿದೆ. ಏರೋಸ್ಪೇಸ್ ಪಾರ್ಕ್, ಸಿಲ್ಕ್ ಪಾರ್ಕ್ ಇತ್ಯಾದಿ ಇನ್ನೂ ಅನೇಕ ಕೊಡುಗೆಗಳನ್ನು ಸಿದ್ದರಾಮಯ್ಯ ತಮ್ಮ ತವರು ಜಿಲ್ಲೆಗೆ ಕೊಟ್ಟಿದ್ದಾರೆ.

ಬೆಂಗಳೂರಿನ ನಂತರ ಎರಡನೇ ಐಟಿ ಹಬ್ ಆಗಿ ಮೈಸೂರು? ತಮ್ಮೂರಿಗೆ ಉಡುಗೊರೆ ಕೊಟ್ಟ ಸಿದ್ದು
ಸಿದ್ದರಾಮಯ್ಯ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 06, 2026 | 5:25 PM

Share

ಬೆಂಗಳೂರು, ಮಾರ್ಚ್ 6: ಸಿದ್ದರಾಮಯ್ಯ ಅವರ ದಾಖಲೆಯ 2026ರ ಬಜೆಟ್​ನಲ್ಲಿ ಪ್ರಮುಖಾಂಶಗಳಲ್ಲಿ ಮೈಸೂರನ್ನು ಐಟಿ ಹಬ್ ಆಗಿ ರೂಪಿಸಲು ಯೋಜನೆಯೂ ಒಂದು. ಬೆಂಗಳೂರಿನಲ್ಲಿ ವಾಹನಗಳ ದಟ್ಟಣೆ ಕಡಿಮೆ ಮಾಡಲು ಮತ್ತು ವಿಕೇಂದ್ರೀಕೃತ ಆರ್ಥಿಕತೆಗೆ ಉತ್ತೇಜನ ನೀಡಲು ಮೈಸೂರನ್ನು ರಾಜ್ಯದ ಎರಡನೇ ಐಟಿ ಹಬ್ ಆಗಿ ರೂಪಿಸಲಾಗುವುದು ಎಂದು ಬಜೆಟ್​ನಲ್ಲಿ ಘೋಷಿಸಲಾಗಿದೆ. ಬೆಂಗಳೂರಿನಿಂದ ದಕ್ಷಿಣಕ್ಕೆ ಮೈಸೂರು 140 ಕಿಮೀ ದೂರದಲ್ಲಿದೆ. ಈಗಾಗಲೇ ಮೈಸೂರಿನಲ್ಲಿ ಸಾಕಷ್ಟು ಕೈಗಾರಿಕೆಗಳು ನೆಲಸಿವೆ. ಐಟಿ ಕಂಪನಿಗಳೂ ಬಹಳಷ್ಟಿವೆ. ಕಾಗ್ನೈಜೆಂಟ್ ಟೆಕ್ನಾಲಜೀಸ್, ಇನ್ಫೋಸಿಸ್ ಇತ್ಯಾದಿ 180-200 ಟೆಕ್ ಕಂಪನಿಗಳಿದ್ದು 30,000 ಜನರು ಕೆಲಸ ಮಾಡುತ್ತಿದ್ದಾರೆ.

ಈಗ ಮೈಸೂರಿಗೆ ಮತ್ತಷ್ಟು ಟೆಕ್ ಸ್ಪರ್ಶ ನೀಡಲು ವಿವಿಧ ಯೋಜನೆಗಳನ್ನು ಹಾಕಲಾಗಿದೆ. ಅರಮನೆನಗರಿಯಲ್ಲಿ ಎಐ ಲ್ಯಾಬ್​ಗಳು, ಸ್ಟಾರ್ಟಪ್ ಸ್ಪೇಸ್​ಗಳು ಮತ್ತಿತರೆಯನ್ನು ಘೋಷಿಸಲಾಗಿದೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ತವರು ಜಿಲ್ಲೆಗೆ ಭರ್ಜರಿ ಕಾಣಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: Karnataka Budget 2026 Highlights: ಸಿಎಂ ಸಿದ್ದರಾಮಯ್ಯ 3 ಗಂಟೆ 5 ನಿಮಿಷ ಮಂಡಿಸಿದ 2026-27ರ ಬಜೆಟ್​ ಮುಖ್ಯಾಂಶ ಇಲ್ಲಿದೆ

ಬಜೆಟ್​ನಲ್ಲಿ ಮೈಸೂರಿಗೆ ಸಿಕ್ಕ ಕೊಡುಗೆಗಳಿವು…

  • ಮೈಸೂರಿನ ತಾಂಡವಪುರದಲ್ಲಿ ಸಿಲ್ಕ್ ಪಾರ್ಕ್ ಸ್ಥಾಪನೆ ಮಾಡಲಾಗುವುದು. ರಾಜ್ಯದ ಐದು ಹೊಸ ಸಿಲ್ಕ್ ಪಾರ್ಕ್​ಗಳಲ್ಲಿ ಇದೂ ಒಂದಾಗಿರುತ್ತದೆ.
  • ಮೈಸೂರು ಮತ್ತು ಕಲಬುರಗಿಯಲ್ಲಿ ತಲಾ 16 ಕೋಟಿ ರೂ. ವೆಚ್ಚದಲ್ಲಿ ಷ್ನೈಡರ್ ಎಲೆಕ್ಟ್ರಿಕ್ (Schneider Electric) ಯೂತ್ ಇಂಪ್ಯಾಕ್ಟ್ ಕೇಂದ್ರ ಸ್ಥಾಪಿಸಲು ಉದ್ದೇಶಿಸಿದೆ.
  • ಮೈಸೂರು ಏರ್ಪೋರ್ಟ್ ಸಮೀಪ ಕೆಐಎಡಿಬಿ ವತಿಯಿಂದ ಏರೋಸ್ಪೇಸ್ ಪಾರ್ಕ್ ಅಭಿವೃದ್ಧಿ
  • ಬೆಂಗಳೂರಿನ ದಟ್ಟಣೆಯನ್ನು ಕಡಿಮೆ ಮಾಡಲು ಹಾಗೂ ವಿಕೇಂದ್ರೀಕೃತ ಆರ್ಥಿಕತೆಯನ್ನು ಪ್ರೋತ್ಸಾಹಿಸಲು ಮೈಸೂರು ನಗರವನ್ನು ರಾಜ್ಯದ ಎರಡನೇ ಐಟಿ ಸಿಟಿಯನ್ನಾಗಿ ಅಭಿವೃದ್ಧಿಪಡಿಸಲಾಗುವುದು.
  • ಮೈಸೂರು ಮೃಗಾಲಯ ಅಭಿವೃದ್ಧಿಗಾಗಿ ಪಿಪಿಪಿ ಮಾದರಿಯಲ್ಲಿ ಪ್ರಕೃತಿ ನಿರೂಪಣಾ ಕೇಂದ್ರದ ಸ್ಥಾಪನೆ
  • ಮೈಸೂರು ಫಿಲಂ ಸಿಟಿಯಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಪಿಪಿಪಿ ಮಾದರಿಯಲ್ಲಿ ಥೀಮ್ ಪಾರ್ಕ್, ಸ್ಟಾರ್ ಹೋಟೆಲ್, ರೆಸ್ಟೋರೆಂಟ್​ಗಳ ನಿರ್ಮಾಣ.
  • ಮೈಸೂರು ನಗರದಲ್ಲಿ ಇ-ಕೋರ್ಟ್ ಅನ್ನು ಪ್ರಾಯೋಗಿಕವಾಗಿ ಸ್ಥಾಪಿಸಲಾಗುವುದು.
  • ಮೈಸೂರಿನ ಬಂಬೂ ಬಜಾರ್ ಕೇಂದ್ರದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ.
  • ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ
  • ಮೈಸೂರಿನಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್ ನಡೆಸಲಾಗುವುದು.

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಇಂದು ನಾಗಪಂಚಮಿಯ ಜೊತೆಗೆ ಸೂರ್ಯ ಸಂಕ್ರಮಣದ ವಿಶೇಷ ಪರ್ವ ದಿನ!
ಇಂದು ನಾಗಪಂಚಮಿಯ ಜೊತೆಗೆ ಸೂರ್ಯ ಸಂಕ್ರಮಣದ ವಿಶೇಷ ಪರ್ವ ದಿನ!
ಚಿಕ್ಕಪ್ಪನ ಜೊತೆ ನಟನೆ, ನಟ ನಿರಂಜನ್ ಹೇಳಿದ್ದೇನು? ವಿಡಿಯೋ ನೋಡಿ
ಚಿಕ್ಕಪ್ಪನ ಜೊತೆ ನಟನೆ, ನಟ ನಿರಂಜನ್ ಹೇಳಿದ್ದೇನು? ವಿಡಿಯೋ ನೋಡಿ
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!