AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nagara Panchami 2026: ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು

Nagara Panchami 2026: ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು

ರಮೇಶ್ ಬಿ. ಜವಳಗೇರಾ
|

Updated on: Aug 16, 2026 | 7:17 PM

Share

ಹಿಂದೂ(Hindu) ಸಂಸ್ಕೃತಿಯಲ್ಲಿ ಸಾಲು ಸಾಲು ಹಬ್ಬಗಳ ಆಗಮನಕ್ಕೆ ಮಂಗಲಮಯ ಮುನ್ನುಡಿ ಬರೆಯುವ ಮೊದಲ ಪವಿತ್ರ ಪರ್ವವೇ ನಾಗರ ಪಂಚಮಿ. ಪ್ರತಿವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು(Nagara Panchami) ಆಚರಿಸಲಾಗುವ ಈ ದಿನ, ನಾಗ ದೇವತೆಯನ್ನು ಅತ್ಯಂತ ಶ್ರದ್ಧೆ, ಭಕ್ತಿ ಮತ್ತು ಕೃತಜ್ಞತೆಯಿಂದ ಪೂಜಿಸುವುದು ಅನಾದಿ ಕಾಲದಿಂದಲೂ ಬಂದ ಶ್ರೇಷ್ಠ ಸಂಪ್ರದಾಯ. ಈ ಹಬ್ಬವನ್ನು ಉತ್ತರ ಕರ್ನಾಟಕದಲ್ಲಿ ಭಾಗದಲ್ಲಿ ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಬಗೆ ಬಗೆ ಖಾದ್ಯಗಳನ್ನ ಮಾಡಿ ಕುಟುಂಬಸ್ಥರೊಂದಿಗೆ ನಾಗಪ್ಪನಿಗೆ ಹಾಲು ಎರೆದು ಸಂಭ್ರಮಿಸುತ್ತಾರೆ. ಈ ಸಂಭ್ರಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆ ಮಾಡಿದೆ. ಹೌದು...ಇಂದು (ಆಗಸ್ಟ್​ 16) ಬೆಳಿಗ್ಗೆಯಿಂದ ಅರಮನೆ ಮೈದಾನದ ಗಾಯತ್ರಿ ವಿಹಾರದ 'ವೃಕ್ಷ ಸಾಂಪ್ರದಾಯಿಕ ಕಲಾಮಂಟಪ'ದಲ್ಲಿ 'ನಮ್ಮೂರ ನಾಗರ ಪಂಚಮಿ 2026' ಅದ್ದೂರಿಯಾಗಿ ಆಚರಿಸಲಾಯ್ತು.

ಬೆಂಗಳೂರು, (ಆಗಸ್ಟ್ 16): ಹಿಂದೂ(Hindu) ಸಂಸ್ಕೃತಿಯಲ್ಲಿ ಸಾಲು ಸಾಲು ಹಬ್ಬಗಳ ಆಗಮನಕ್ಕೆ ಮಂಗಲಮಯ ಮುನ್ನುಡಿ ಬರೆಯುವ ಮೊದಲ ಪವಿತ್ರ ಪರ್ವವೇ ನಾಗರ ಪಂಚಮಿ. ಪ್ರತಿವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು(Nagara Panchami) ಆಚರಿಸಲಾಗುವ ಈ ದಿನ, ನಾಗ ದೇವತೆಯನ್ನು ಅತ್ಯಂತ ಶ್ರದ್ಧೆ, ಭಕ್ತಿ ಮತ್ತು ಕೃತಜ್ಞತೆಯಿಂದ ಪೂಜಿಸುವುದು ಅನಾದಿ ಕಾಲದಿಂದಲೂ ಬಂದ ಶ್ರೇಷ್ಠ ಸಂಪ್ರದಾಯ. ಈ ಹಬ್ಬವನ್ನು ಉತ್ತರ ಕರ್ನಾಟಕದಲ್ಲಿ ಭಾಗದಲ್ಲಿ ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಬಗೆ ಬಗೆ ಖಾದ್ಯಗಳನ್ನ ಮಾಡಿ ಕುಟುಂಬಸ್ಥರೊಂದಿಗೆ ನಾಗಪ್ಪನಿಗೆ ಹಾಲು ಎರೆದು ಸಂಭ್ರಮಿಸುತ್ತಾರೆ. ಈ ಸಂಭ್ರಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆ ಮಾಡಿದೆ. ಹೌದು…ಇಂದು (ಆಗಸ್ಟ್​ 16) ಬೆಳಿಗ್ಗೆಯಿಂದ ಅರಮನೆ ಮೈದಾನದ ಗಾಯತ್ರಿ ವಿಹಾರದ ‘ವೃಕ್ಷ ಸಾಂಪ್ರದಾಯಿಕ ಕಲಾಮಂಟಪ’ದಲ್ಲಿ ‘ನಮ್ಮೂರ ನಾಗರ ಪಂಚಮಿ 2026’ ಅದ್ದೂರಿಯಾಗಿ ಆಚರಿಸಲಾಯ್ತು. ನಟಿ ಉಮಾಶ್ರೀ ಸೇರಿದಂತೆ ಅನೇಕ ಮಹಿಳೆಯವರು ಭಾಗಿ ಆಗಿದ್ದರು. ನಗರೀಕರಣದಲ್ಲಿ ಮರೆಯಾಗುತ್ತಿರುವ ಹಳ್ಳಿ ಸಂಸ್ಕೃತಿಯನ್ನು ಮರುಸೃಷ್ಟಿಸುವುದೇ ಈ ಕಾರ್ಯಕ್ರಮದ ಉದ್ದೇಶ. ನಾಗಪೂಜೆ ಮತ್ತು ಗೋಪೂಜೆಯೊಂದಿಗೆ ಆರಂಭವಾಗುವ ಈ ಹಬ್ಬದಲ್ಲಿ ಇಳಕಲ್ ಸೀರೆ, ಕೋಲಾಟ, ಪಗಡಿ, ರಂಗೋಲಿ, ಸೇವಿಗೆ ಹೊಸೆಯುವುದು, ರೊಟ್ಟಿ ಬಡಿಯುವುದು, ಬುಟ್ಟಿ ಬ್ಯಾಲೆನ್ಸ್, ಬೀಸಣಿಕೆ ಸ್ಪರ್ಧೆ ಏರ್ಪಡಿಸಲಾಗಿತ್ತು.

ಇದನ್ನು ಓದಿ:  Naga Panchami 2026: ಆ. 17 ನಾಗರ ಪಂಚಮಿ; ಪೂಜಾ ಮುಹೂರ್ತ ಮತ್ತು ಸರ್ಪ ನಮಸ್ಕಾರ ಮಂತ್ರಗಳ ಮಹತ್ವ ತಿಳಿಯಿರಿ

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More