AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಶತಕ ವಂಚಿತ ಕೆಎಲ್ ರಾಹುಲ್

India vs Sri Lanka: ಕೆ.ಎಲ್. ರಾಹುಲ್ ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 82 ರನ್ ಗಳಿಸಿ ಶತಕ ವಂಚಿತರಾದರು. ಸ್ನಾಯು ಸೆಳೆತದ ಹೊರತಾಗಿಯೂ, ಅವರು ದೇವದತ್ ಪಡಿಕ್ಕಲ್ ಜೊತೆ 162 ರನ್ ಸೇರಿದಂತೆ ಪ್ರಮುಖ ಜೊತೆಯಾಟಗಳನ್ನು ರೂಪಿಸಿದರು. ಇದು ಅವರ 21 ನೇ ಟೆಸ್ಟ್ ಅರ್ಧಶತಕವಾಗಿದ್ದು, ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರೂ, ಶತಕದ ಅವಕಾಶವು ಲಂಕಾ ಫಿಲ್ಡರ್‌ಗಳ ಚುರುಕುತನದಿಂದ ಕೈತಪ್ಪಿತು.

ಪೃಥ್ವಿಶಂಕರ
|

Updated on: Aug 16, 2026 | 5:48 PM

Share
ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಉತ್ತಮ ಪ್ರದರ್ಶನ ನೀಡಿದರಾದರೂ ಶತಕದಂಚಿನಲ್ಲಿ ಎಡವಿ ಶತಕ ವಂಚಿತರಾದರು. ಮೊದಲ ಇನ್ನಿಂಗ್ಸ್​ನಲ್ಲಿ ರಾಹುಲ್​ಗೆ ಶತಕ ಬಾರಿಸುವ ಎಲ್ಲಾ ಅವಕಾಶಗಳಿದ್ದವು. ಆದರೆ ಲಂಕಾ ಫಿಲ್ಡರ್​​ನ ಚುರುಕಾದ ಫಿಲ್ಡಿಂಗ್ ರಾಹುಲ್ ಶತಕಕ್ಕೆ ಅಡ್ಡಿಯಾಯಿತು(PC-PTI).

1 / 5
ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೆ.ಎಲ್. ರಾಹುಲ್ 175 ಎಸೆತಗಳನ್ನು ಎದುರಿಸಿ ಒಂದು ಸಿಕ್ಸ್ ಮತ್ತು 10 ಬೌಂಡರಿಗಳ ಸಹಾಯದಿಂದ 82 ರನ್ ಕಲೆಹಾಕಿದರು. 127 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಾಹುಲ್​ಗೆ ಇದು ಅವರ ಟೆಸ್ಟ್ ವೃತ್ತಿಜೀವನದ 21 ನೇ ಅರ್ಧಶತಕವಾಗಿದೆ(PC-PTI).

2 / 5
 ಪಂದ್ಯದ ಮೊದಲ ದಿನದಂದು ರಾಹುಲ್ 77 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ ಸ್ನಾಯು ಸೆಳೆತಕ್ಕೆ ತುತ್ತಾದರು. ಇದರಿಂದಾಗಿ ಅವರು ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿ ಪೆವಿಲಿಯನ್ ಸೇರಿಕೊಂಡಿದ್ದರು. ಇದಾದ ಬಳಿಕ ಮೊದಲ ದಿನ ರಾಹುಲ್​ ಮತ್ತೆ ಬ್ಯಾಟಿಂಗ್​ಗೆ ಬರಲಿಲ್ಲ(PC-PTI).

3 / 5
ಆದರೆ ಎರಡನೇ ದಿನ ಬ್ಯಾಟಿಂಗ್‌ ಮಾಡುವ ಅವಕಾಶ ರಾಹುಲ್​ಗೆ ಸಿಕ್ಕಿತು. ಆದಾಗ್ಯೂ ಎರಡನೇ ದಿನದಾಟ ಮಳೆಯಿಂದಾಗಿ ತಡವಾಗಿ ಪ್ರಾರಂಭವಾಯಿತು. ಮೊದಲ ದಿನ ಅಜೇಯರಾಗಿ ಉಳಿದಿದ್ದ ರಿಷಭ್ ಪಂತ್ 39 ರನ್‌ಗಳಿಗೆ ಔಟಾದ ನಂತರ, ರಾಹುಲ್ ಎರಡನೇ ದಿನ ಬ್ಯಾಟಿಂಗ್‌ಗೆ ಮರಳಿದರು. ಮೊದಲ ದಿನದ ರಾಹುಲ್ ಬ್ಯಾಟಿಂಗ್ ಪ್ರದರ್ಶನವನ್ನು ಗಮನಿಸಿದರೆ, ಅವರು ಶತಕ ಪೂರೈಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು(PC-PTI).

4 / 5
ಆದರೆ ಕೇಸರ ನುವಂತ ಅವರ ಸ್ಪಿನ್ ಮ್ಯಾಜಿಕ್​ನಿಂದಾಗಿ ರಾಹುಲ್ ಅವರ ಇನ್ನಿಂಗ್ಸ್ 82 ರನ್​ಗಳಿಗೆ ಕೊನೆಗೊಂಡಿತು. ಆದಾಗ್ಯೂ ರಾಹುಲ್ ಮೊದಲ ಇನ್ನಿಂಗ್ಸ್‌ನಲ್ಲಿ ದೇವದತ್ ಪಡಿಕ್ಕಲ್ ಅವರೊಂದಿಗೆ ಎರಡನೇ ವಿಕೆಟ್‌ಗೆ 162 ರನ್‌ಗಳ ಅದ್ಭುತ ಪಾಲುದಾರಿಕೆಯನ್ನು ಹಂಚಿಕೊಂಡರು. ಹಾಗೆಯೇ ಯಶಸ್ವಿ ಜೈಸ್ವಾಲ್ ಜೊತೆಗೆ ಮೊದಲ ವಿಕೆಟ್‌ಗೆ 47 ರನ್‌ಗಳ ಜೊತೆಯಾಟವನ್ನು ಕಟ್ಟಿದ್ದರು(PC-PTI).

5 / 5
Follow Us