AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಣಕೈಗೆ ಗಾಯ ಮಾಡಿಕೊಂಡ ಶುಭ್​ಮನ್ ಗಿಲ್..!

ಭಾರತ-ವೆಸ್ಟ್ ಇಂಡೀಸ್ ಏಕದಿನ ಸರಣಿ ಆರಂಭಕ್ಕೆ ಮುನ್ನ, ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಅಭ್ಯಾಸದ ವೇಳೆ ಗಾಯಗೊಂಡಿದ್ದಾರೆ. ಮೊಹಮ್ಮದ್ ಸಿರಾಜ್ ಎಸೆದ ಬೌನ್ಸರ್ ಅವರ ಬಲ ಮೊಣಕೈಗೆ ತಗುಲಿದ ಪರಿಣಾಮ ಈ ಘಟನೆ ನಡೆದಿದೆ. ತಕ್ಷಣ ಚಿಕಿತ್ಸೆ ಪಡೆದು, ಬ್ಯಾಂಡೇಜ್ ಹಾಕಿದ ನಂತರ ಗಿಲ್ ಮತ್ತೆ ನೆಟ್ಸ್‌ಗೆ ಮರಳಿದರು. ಈ ನಡುವೆ ರೋಹಿತ್ ಮತ್ತು ಕೊಹ್ಲಿ ಕೂಡ ಅಭ್ಯಾಸ ನಡೆಸಿದರು. ಇದು ತಂಡಕ್ಕೆ ಆತಂಕ ತಂದರೂ, ಪಂದ್ಯಕ್ಕೆ ಸಿದ್ಧತೆ ಮುಂದುವರಿದಿದೆ.

ಪೃಥ್ವಿಶಂಕರ
|

Updated on: Sep 25, 2026 | 9:33 PM

Share
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ತಿರುವನಂತಪುರದಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕೆ ಉಭಯ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಈ ನಡುವೆ ಟೀಂ ಇಂಡಿಯಾ ಪಾಳಯದಿಂದ ಆಘಾತಕ್ಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ತಂಡದ ನಾಯಕ ಶುಭ್​ಮನ್ ಗಿಲ್ ಗಾಯಕ್ಕೆ ತುತ್ತಾಗಿದ್ದಾರೆ(PC-PTI).

1 / 5
ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾದ ಅಭ್ಯಾಸದ ಸಮಯದಲ್ಲಿ, ತಂಡದ ನಾಯಕ ಶುಭ್​ಮನ್ ಗಿಲ್, ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಎಸೆದ ಬೌನ್ಸ್ ಎಸೆತದಿಂದ ಗಾಯಕ್ಕೆ ತುತ್ತಾಗಿದ್ದಾರೆ. ಚೆಂಡು ಗಿಲ್ ಅವರ ಬಲ ಮೊಣಕೈಗೆ ತಗುಲಿದ ಪರಿಣಾಮದಿಂದಾಗಿ ತೀವ್ರ ನೋವಿನಿಂದ ನರಳಲಾರಂಭಿಸಿದರು. ಇದರಿಂದಾಗಿ ಗಿಲ್ ತಕ್ಷಣವೇ ನೆಟ್‌ನಿಂದ ಹೊರಹೋಗಬೇಕಾಯಿತು(PC-PTI).

2 / 5
ಶುಭ್‌ಮನ್ ಗಿಲ್ ನೆಟ್ಸ್‌ನಲ್ಲಿ ಗಾಯಗೊಂಡ ನಂತರ, ತಕ್ಷಣವೇ ತಂಡದ ಫಿಸಿಯೋ ಮೈದಾನಕ್ಕೆ ಬಂದು ಸುಮಾರು 20 ನಿಮಿಷಗಳ ಕಾಲ ಚಿಕಿತ್ಸೆ ನೀಡಿದರು. ನಂತರ ಗಿಲ್ ಅವರ ಬಲ ಮೊಣಕೈಗೆ ಬ್ಯಾಂಡೇಜ್ ಮಾಡಲಾಯಿತು. ಸ್ವಲ್ಪ ಸಮಯ ಡಗೌಟ್‌ನಲ್ಲಿ ವಿಶ್ರಾಂತಿ ಪಡೆದ ಗಿಲ್, ಮತ್ತೆ ನೆಟ್ಸ್‌ಗೆ ಮರಳಿದರು(PC-PTI).

3 / 5
ಇನ್ನು ಅನುಭವಿ ಜೋಡಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ಸುಮಾರು 20 ನಿಮಿಷಗಳ ಕಾಲ ಬ್ಯಾಟಿಂಗ್ ಅಭ್ಯಾಸ ಮಾಡಿದರು. ಕಳೆದ ಅಫ್ಘಾನಿಸ್ತಾನ ವಿರುದ್ಧದ ಸರಣಿಯನ್ನು ತಪ್ಪಿಸಿಕೊಂಡಿದ್ದ ಕೊಹ್ಲಿ ಫಾರ್ಮ್‌ ಕಂಡುಕೊಳ್ಳಲು ಭಾರತೀಯ ಬೌಲರ್‌ಗಳು ಮತ್ತು ಸ್ಥಳೀಯ ನೆಟ್ ಬೌಲರ್‌ಗಳ ವಿರುದ್ಧ ಅದ್ಭುತ ಹೊಡೆತಗಳನ್ನು ಆಡಿದರು(PC-PTI).

4 / 5
ಭಾರತ ತಂಡ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭ್​ಮನ್ ಗಿಲ್ (ನಾಯಕ), ರುತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ನಮನ್ ಧೀರ್, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಕೆಎಲ್ ರಾಹುಲ್, ಧ್ರುವ್ ಜುರೆಲ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಮೊಹಮ್ಮದ್ ಸಿರಾಜ್, ಆಕಿಬ್ ನಬಿ(PC-PTI).

5 / 5
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us