AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇ-ಸಿಮ್ ಆಫರ್ ಹೆಸರಲ್ಲಿ ಹೊಸ ವಂಚನೆ:  ಕ್ಷಣಾರ್ಧದಲ್ಲೇ ಖಾತೆಯಿಂದ ಲಕ್ಷಾಂತರ ಹಣ ಲೂಟಿ!

ರಾಜಧಾನಿ ಬೆಂಗಳೂರಿನಲ್ಲಿ ಇ-ಸಿಮ್ (e-SIM) ಅಪ್‌ಗ್ರೇಡ್ ಹೆಸರಿನಲ್ಲಿ ಸೈಬರ್ ವಂಚಕರು ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ದೋಚುತ್ತಿದ್ದಾರೆ. ವಂಚಕರು ಕರೆ ಮಾಡಿ ಒಟಿಪಿ ಪಡೆದು ಸಿಮ್ ಡಿಆಕ್ಟಿವೇಟ್ ಮಾಡಿ ಖಾತೆ ಲೂಟಿ ಮಾಡುತ್ತಿದ್ದಾರೆ. ಈ ಹೊಸ ವಂಚನೆ ಜಾಲದಿಂದ ಸುರಕ್ಷಿತವಾಗಿರಲು ಪೊಲೀಸರು ನೀಡಿರುವ ಎಚ್ಚರಿಕೆ ಹಾಗೂ ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ.

ಇ-ಸಿಮ್ ಆಫರ್ ಹೆಸರಲ್ಲಿ ಹೊಸ ವಂಚನೆ:  ಕ್ಷಣಾರ್ಧದಲ್ಲೇ ಖಾತೆಯಿಂದ ಲಕ್ಷಾಂತರ ಹಣ ಲೂಟಿ!
ಸಾಂದರ್ಭಿಕ ಚಿತ್ರImage Credit source: gettyimages.com
ಭಾವನಾ ಹೆಗಡೆ
|

Updated on: Aug 17, 2026 | 8:44 AM

Share

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಇ-ಸಿಮ್ ನೆಪದಲ್ಲಿ ಲಕ್ಷಾಂತರ ರೂಪಾಯಿ ಸೈಬರ್ ಲೂಟಿ.
  • ಒಟಿಪಿ ಪಡೆದು ಸಿಮ್ ಕಡಿತಗೊಳಿಸಿ ಖಾತೆಯಿಂದ ಹಣ ದೋಚಿದ ವಂಚಕರು.
  • ಅಪರಿಚಿತ ಕರೆಗಳಿಗೆ ಸಾರ್ವಜನಿಕರು ಒಟಿಪಿ ಶೇರ್ ಮಾಡದಂತೆ ಪೊಲೀಸರ ಸೂಚನೆ.

ಬೆಂಗಳೂರು, ಆಗಸ್ಟ್ 17: ಟೆಲಿಕಾಂ ಸೇವಾದಾರರಿಂದ ಕರೆ ಮಾಡಲಾಗುತ್ತಿದೆ ಎಂದು ನಂಬಿಸಿ, ನಿಮ್ಮ ಫೋನ್‌ನ ಸಾಮಾನ್ಯ ಸಿಮ್ ಕಾರ್ಡ್ ಅನ್ನು ‘ಇ-ಸಿಮ್’ (e-SIM) ಗೆ ಅಪ್‌ಗ್ರೇಡ್ ಮಾಡಿಕೊಡುವುದಾಗಿ ಹೇಳುವ ಸೈಬರ್ ಚೋರರ ಹೊಸ ವಂಚನೆ ಜಾಲವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಉಚಿತವಾಗಿ ಅಥವಾ ಸುಲಭವಾಗಿ ಇ-ಸಿಮ್ ನೀಡುತ್ತೇವೆ ಎಂದು ನಂಬಿಸುವ ವಂಚಕರು, ಮೊಬೈಲ್ ಒಟಿಪಿ (OTP) ಹಾಗೂ ಲಾಗಿನ್ ಕೋಡ್‌ಗಳನ್ನು ಪಡೆದು ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಖನ್ನ ಹಾಕುತ್ತಿದ್ದಾರೆ.

ಲಕ್ಷಾಂತರ ಹಣ ಕಳೆದುಕೊಂಡ ಸಂತ್ರಸ್ತರು

ಬೆಂಗಳೂರಿನಲ್ಲಿ ಇ-ಸಿಮ್ (e-SIM) ಅಪ್‌ಗ್ರೇಡ್ ಹೆಸರಿನಲ್ಲಿ ಸೈಬರ್ ವಂಚಕರು ಇಬ್ಬರು ನಿವಾಸಿಗಳಿಂದ ಲಕ್ಷಾಂತರ ರೂಪಾಯಿ ದೋಚಿದ್ದಾರೆ. ದೊಡ್ಡಬಳ್ಳಾಪುರ ರಸ್ತೆಯ ಮರಸಂದ್ರದ 51 ವರ್ಷದ ವ್ಯಕ್ತಿಯನ್ನು ವಾಟ್ಸಾಪ್ ಮೂಲಕ ಸಂಪರ್ಕಿಸಿದ ವಂಚಕರು, ಒಟಿಪಿ (OTP) ಪಡೆದು ಫೋನ್ ನೆಟ್‌ವರ್ಕ್ ಸ್ಥಗಿತಗೊಳಿಸಿ ಅವರ ಮೂರು ಬ್ಯಾಂಕ್ ಖಾತೆ ಹಾಗೂ ಕ್ರೆಡಿಟ್ ಕಾರ್ಡ್‌ಗಳಿಂದ ಒಟ್ಟು 6.2 ಲಕ್ಷ ರೂ. ಹಣವನ್ನು ಅನಧಿಕೃತವಾಗಿ ಡ್ರಾ ಮಾಡಿದ್ದಾರೆ. ಮತ್ತೊಂದೆಡೆ, ಚಿಕ್ಕಬಾಣಾವರದ ಶೋಯೈಬ್ (40) ಎಂಬುವರಿಗೆ ಸಿಮ್ ಡಿ-ಆಕ್ಟಿವೇಟ್ ಆಗಲಿದೆ ಎಂದು ಹೆದರಿಸಿ, ಇ-ಸಿಮ್ ನೀಡುವ ನೆಪದಲ್ಲಿ ಗೂಗಲ್ ಸೈನ್-ಇನ್ ಕೋಡ್ ಪಡೆದುಕೊಂಡು 2.8 ಲಕ್ಷ ರೂ. ಹಣವನ್ನು ಲೂಟಿ ಮಾಡಿದ್ದಾರೆ.

ಸೈಬರ್ ವಂಚಕರು ಕಾರ್ಯಾಚರಣೆ ನಡೆಸುವುದು ಹೇಗೆ?

ಅಪರಿಚಿತರು ಕರೆ ಮಾಡಿ ಟೆಲಿಕಾಂ ಕಂಪನಿಯ ಪ್ರತಿನಿಧಿ ಎಂದು ಪರಿಚಯಿಸಿಕೊಳ್ಳುತ್ತಾರೆ. ವಂಚಕರು ತಮ್ಮ ಬಳಿ ಇರುವ ಮೊಬೈಲ್ ಸಾಧನದಲ್ಲಿ ನಿಮ್ಮ ಸಂಖ್ಯೆಗೆ ಇ-ಸಿಮ್ ಆಕ್ಟಿವೇಶನ್‌ ಪ್ರಕ್ರಿಯೆಯನ್ನು ಆರಂಭಿಸುತ್ತಾರೆ. ನಿಮ್ಮ ಫೋನ್‌ಗೆ ಬರುವ ಒಟಿಪಿ ಅಥವಾ QR ಕೋಡ್ ಲಿಂಕ್ ಅನ್ನು ಪಡೆದುಕೊಂಡ ತಕ್ಷಣ, ನಿಮ್ಮ ಫೋನ್‌ನ ಫಿಸಿಕಲ್ ಸಿಮ್ ಆಟೋಮ್ಯಾಟಿಕ್ ಆಗಿ ಕಡಿತಗೊಳ್ಳುತ್ತದೆ. ನಿಮ್ಮ ಸಂಖ್ಯೆಯ ಪೂರ್ಣ ನಿಯಂತ್ರಣ (ಕರೆಗಳು, SMS, OTP) ವಂಚಕರ ವಶವಾಗುತ್ತದೆ. ಇದನ್ನೇ ಬಳಸಿಕೊಂಡು ಬ್ಯಾಂಕಿಂಗ್ ಆಪ್‌ಗಳ ಪಾಸ್‌ವರ್ಡ್ ಮರುಹೊಂದಿಸಿ ಖಾತೆಯಲ್ಲಿರುವ ಮೊತ್ತವನ್ನು ದೋಚುತ್ತಾರೆ.

ಸುರಕ್ಷತೆಯಾಗಿರಲು ಪೊಲೀಸರ ಪ್ರಮುಖ ಸೂಚನೆಗಳು

ಯಾವುದೇ ಅಧಿಕೃತ ಟೆಲಿಕಾಂ ಸಂಸ್ಥೆಗಳು (Airtel, Jio, Vi ಇತ್ಯಾದಿ) ವಾಟ್ಸಾಪ್ ಅಥವಾ ಫೋನ್ ಕರೆ ಮೂಲಕ ಇ-ಸಿಮ್ ಅಪ್‌ಗ್ರೇಡ್ ಮಾಡಲು ಕೋರುವುದಿಲ್ಲ. ಕರೆಯಲ್ಲಿ ಅಥವಾ ವಾಟ್ಸಾಪ್‌ನಲ್ಲಿ ಬಂದ ಒಟಿಪಿ, ಗೂಗಲ್ ಕೋಡ್, ಅಥವಾ ಕ್ಯೂಆರ್ ಕೋಡ್‌ಗಳನ್ನು ಯಾರೊಂದಿಗೂ ಶೇರ್ ಮಾಡಬಾರದು. ಇ-ಸಿಮ್ ಆಕ್ಟಿವೇಶನ್ ಅನ್ನು ಟೆಲಿಕಾಂ ಕಂಪನಿಗಳ ಅಧಿಕೃತ ಆಪ್‌ಗಳು ಅಥವಾ ಪ್ರಮುಖ ಮಳಿಗೆಗಳಿಗೆ (Service Stores) ಖುದ್ದಾಗಿ ತೆರಳಿ ಮಾತ್ರ ಮಾಡಿಸಬೇಕು. ಇದ್ದಕ್ಕಿದ್ದಂತೆ ಮೊಬೈಲ್ ಸಿಗ್ನಲ್ ಪೂರ್ತಿಯಾಗಿ ಹೋಗಿ ಸ್ಥಗಿತಗೊಂಡರೆ ತಕ್ಷಣವೇ ಟೆಲಿಕಾಂ ಸೇವಾದಾರರನ್ನು ಹಾಗೂ ಬ್ಯಾಂಕ್‌ಗಳನ್ನು ಸಂಪರ್ಕಿಸಿ ಅಕೌಂಟ್ ಬ್ಲಾಕ್ ಮಾಡಿ. ವಂಚನೆಗೊಳಗಾದ ಸಂದರ್ಭದಲ್ಲಿ ತಕ್ಷಣವೇ 1930 ಸೈಬರ್ ಹೆಲ್ಪ್‌ಲೈನ್‌ಗೆ ಕರೆ ಮಾಡಿ ದೂರು ನೀಡಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಇಂದು ನಾಗಪಂಚಮಿಯ ಜೊತೆಗೆ ಸೂರ್ಯ ಸಂಕ್ರಮಣದ ವಿಶೇಷ ಪರ್ವ ದಿನ!
ಇಂದು ನಾಗಪಂಚಮಿಯ ಜೊತೆಗೆ ಸೂರ್ಯ ಸಂಕ್ರಮಣದ ವಿಶೇಷ ಪರ್ವ ದಿನ!
ಚಿಕ್ಕಪ್ಪನ ಜೊತೆ ನಟನೆ, ನಟ ನಿರಂಜನ್ ಹೇಳಿದ್ದೇನು? ವಿಡಿಯೋ ನೋಡಿ
ಚಿಕ್ಕಪ್ಪನ ಜೊತೆ ನಟನೆ, ನಟ ನಿರಂಜನ್ ಹೇಳಿದ್ದೇನು? ವಿಡಿಯೋ ನೋಡಿ
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!