‘ತಾಯಿಮಾಮನ್ ತಂಗಮೋದಿರಂ’ ಯೋಜನೆಗೆ ಸಿಎಂ ವಿಜಯ್ ಚಾಲನೆ; ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್
ತಮಿಳುನಾಡು ಮುಖ್ಯಮಂತ್ರಿ ವಿಜಯ್ ತಮ್ಮ ಚುನಾವಣಾ ಭರವಸೆಯಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಮಕ್ಕಳಿಗೆ 1 ಗ್ರಾಂ ಚಿನ್ನದ ಉಂಗುರ ನೀಡುವ "ತಾಯಿಮಾಮನ್ ತಂಗಮೋದಿರಂ ತಿಟ್ಟಂ" ಯೋಜನೆಯನ್ನು ಆರಂಭಿಸಿದ್ದಾರೆ. ಈ ಯೋಜನೆಯಡಿ ನವಜಾತ ಶಿಶುಗಳಿಗೆ ಚಿನ್ನದ ಉಂಗುರ ವಿತರಿಸಲಾಗುತ್ತಿದ್ದು, ಇದು ರಾಜ್ಯದ ಜನರ ಬಹುಕಾಲದ ಬೇಡಿಕೆಯಾಗಿತ್ತು.
ಚೆನ್ನೈ, ಸೆಪ್ಟೆಂಬರ್ 28: ತಮಿಳುನಾಡು ಮುಖ್ಯಮಂತ್ರಿ ವಿಜಯ್ ತಮ್ಮ ಚುನಾವಣಾ ಭರವಸೆಯಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಮಕ್ಕಳಿಗೆ 1 ಗ್ರಾಂ ಚಿನ್ನದ ಉಂಗುರ ನೀಡುವ “ತಾಯಿಮಾಮನ್ ತಂಗಮೋದಿರಂ ತಿಟ್ಟಂ” ಯೋಜನೆಯನ್ನು ಆರಂಭಿಸಿದ್ದಾರೆ. ಈ ಯೋಜನೆಯಡಿ ನವಜಾತ ಶಿಶುಗಳಿಗೆ ಚಿನ್ನದ ಉಂಗುರ ವಿತರಿಸಲಾಗುತ್ತಿದ್ದು, ಇದು ರಾಜ್ಯದ ಜನರ ಬಹುಕಾಲದ ಬೇಡಿಕೆಯಾಗಿತ್ತು.
ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಚುನಾವಣಾ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆಯನ್ನು ಈಡೇರಿಸಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ನವಜಾತ ಶಿಶುಗಳಿಗೆ 1 ಗ್ರಾಂ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡುವ ಯೋಜನೆಗೆ ಚಾಲನೆ ನೀಡಿದ್ದಾರೆ. ತಾಯಿಮಾಮನ್ ತಂಗಮೋದಿರಂ ತಿಟ್ಟಂ ಯೋಜನೆ ಅಡಿಯಲ್ಲಿ ಈ ಚಿನ್ನದ ಉಂಗುರಗಳನ್ನು ನೀಡಲಾಗುತ್ತಿದೆ. ಮದುರೈ ಸೇರಿದಂತೆ ರಾಜ್ಯದಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಜನ್ಮ ನೀಡಿದ ತಾಯಂದಿರಿಗೆ ಈ ಭಾಗ್ಯ ದೊರೆಯುತ್ತಿದೆ.
ಈ ಯೋಜನೆಯ ಮೂಲಕ, ಸಿಎಂ ವಿಜಯ್ ಅವರು ಸೋದರ ಮಾವನಂತೆ ಮಹಿಳೆಯರಿಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಸಂದೇಶವನ್ನು ನೀಡಿದ್ದಾರೆ. ಈ ಹಿಂದೆ ಜಯಲಲಿತಾ ಅವರ ಹೆಸರಿನಲ್ಲಿ ಆರಂಭವಾಗಿದ್ದ ಅನೇಕ ಜನಪರ ಯೋಜನೆಗಳ ಮುಂದುವರಿದ ಭಾಗವಾಗಿ ಇದನ್ನು ನೋಡಲಾಗುತ್ತಿದೆ. ತಮಿಳುನಾಡು ರಾಜ್ಯವು ಹಲವು ವರ್ಷಗಳಿಂದ ವಿವಿಧ ರೀತಿಯ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಪ್ರಸ್ತುತ ನವಜಾತ ಶಿಶುಗಳಿಗೆ ಚಿನ್ನದ ಉಂಗುರ ನೀಡುವ ಯೋಜನೆಯು ಆ ಸಾಲಿಗೆ ಹೊಸ ಸೇರ್ಪಡೆಯಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

