AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Thalapathy Vijay

Thalapathy Vijay

Thalapathy Vijay – ದಳಪತಿ ವಿಜಯ್ ತಮಿಳು ಚಿತ್ರರಂಗದಲ್ಲಿ ಮೂರು ದಶಕಗಳ ಕಾಲ ಸ್ಟಾರ್ ನಟನಾಗಿ ಮೆರೆದು, ಕೋಟ್ಯಂತರ ಅಭಿಮಾನಿಗಳ ಪ್ರೀತಿಗೆ ಪಾತ್ರರಾದವರು. ಆಕ್ಷನ್ ಮತ್ತು ಸಾಮಾಜಿಕ ಸಂದೇಶದ ಸಿನಿಮಾಗಳ ಮೂಲಕ ಮುಂಚೂಣಿಗೆ ಬಂದ ಅವರು, ‘ತಮಿಳಗ ವೆಟ್ರಿ ಕಳಗಂ’ ರಾಜಕೀಯ ಪಕ್ಷವನ್ನು ಸ್ಥಾಪಿಸಿ ರಾಜಕೀಯ ರಂಗಕ್ಕೆ ಕಾಲಿಟ್ಟರು. ತದನಂತರ ನಡೆದ 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದರು. ತಮ್ಮ ಅದ್ಭುತ ನಟನಾ ಪಯಣಕ್ಕೆ ತೆರೆ ಎಳೆಯುವ ಅವರ ಕೊನೆಯ ಚಿತ್ರ ‘ಜನ ನಾಯಗನ್’ ಜುಲೈ 23ರಂದು ಬಿಡುಗಡೆಯಾಗಿದೆ.

ಇನ್ನೂ ಹೆಚ್ಚು ಓದಿ
Follow us:

‘ತಾಯಿಮಾಮನ್ ತಂಗಮೋದಿರಂ’ ಯೋಜನೆಗೆ ಸಿಎಂ ವಿಜಯ್ ಚಾಲನೆ; ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​

ತಮಿಳುನಾಡು ಮುಖ್ಯಮಂತ್ರಿ ವಿಜಯ್ ತಮ್ಮ ಚುನಾವಣಾ ಭರವಸೆಯಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಮಕ್ಕಳಿಗೆ 1 ಗ್ರಾಂ ಚಿನ್ನದ ಉಂಗುರ ನೀಡುವ "ತಾಯಿಮಾಮನ್ ತಂಗಮೋದಿರಂ ತಿಟ್ಟಂ" ಯೋಜನೆಯನ್ನು ಆರಂಭಿಸಿದ್ದಾರೆ. ಈ ಯೋಜನೆಯಡಿ ನವಜಾತ ಶಿಶುಗಳಿಗೆ ಚಿನ್ನದ ಉಂಗುರ ವಿತರಿಸಲಾಗುತ್ತಿದ್ದು, ಇದು ರಾಜ್ಯದ ಜನರ ಬಹುಕಾಲದ ಬೇಡಿಕೆಯಾಗಿತ್ತು.

ಸಿಎಂ ವಿಜಯ್ ಬಗ್ಗೆ ಟೀಕೆ ಆರೋಪ: ಬಿಗ್​​ಬಾಸ್ ವೇದಿಕೆ ಮೇಲೆ ಸ್ಪಷ್ಟನೆ

ಕಳೆದ ವಾರ ಬಿಗ್​​ಬಾಸ್ ವೇದಿಕೆಯ ಮೇಲೆ ವಿಜಯ್ ಸೇತುಪತಿ ಆಡಿದ್ದ ಕೆಲ ಮಾತುಗಳನ್ನು ಸಿಎಂ ವಿಜಯ್ ಅವರ ವಿರುದ್ಧ ಆಡಲಾದ ಮಾತುಗಳು ಎಂದು ಬಿಂಬಿಸಲಾಗಿತ್ತು. ‘ನಾಯಕತ್ವ ಎಂದರೇನು ಎಂದು ತಿಳಿಯದೆ, ನಾಯಕತ್ವ ಎಂದರೇನು ಎಂದು ಅರ್ಥಮಾಡಿಕೊಳ್ಳದೆ ಭರವಸೆಗಳನ್ನು ನೀಡಿ, ನಂತರ ಸಮಸ್ಯೆಗಳು ಮತ್ತು ಜವಾಬ್ದಾರಿಗಳು ಬಂದಾಗ ಎದುರಾಳಿಯನ್ನು ದೂಷಿಸಿ ಓಡಿಹೋಗುವುದು ನಾಯಕನ ಗುಣವಲ್ಲ. ಅದು ವಂಚನೆ’ ಎಂದು ಸೇತುಪತಿ ಹೇಳಿದ್ದರು. ಇದೀಗ ವಿಜಯ್ ಸೇತುಪತಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಚಿತ್ರಮಂದಿರದಲ್ಲಿ ಮುಖಾಮುಖಿಯಾಗಲಿದ್ದಾರೆ ವಿಜಯ್ ಹಾಗೂ ಮಗ ಜೇಸನ್

ತಮಿಳು ಚಿತ್ರರಂಗದಲ್ಲಿ ಈ ಅಕ್ಟೋಬರ್‌ನಲ್ಲಿ ಅಪ್ಪ-ಮಗನ ನಡುವೆ ಅಪರೂಪದ ಬಾಕ್ಸ್ ಆಫೀಸ್ ಸ್ಪರ್ಧೆ ಏರ್ಪಡಲಿದೆ. ದಳಪತಿ ವಿಜಯ್ ಅವರ ಸೂಪರ್ ಹಿಟ್ 'ತಿರುಪಾಚಿ' ಮರುಬಿಡುಗಡೆಯಾಗುತ್ತಿದ್ದರೆ, ಮರುದಿನವೇ ಅವರ ಪುತ್ರ ಜೇಸನ್ ಸಂಜಯ್ ನಿರ್ದೇಶನದ 'ಸಿಗ್ಮಾ' ಸಿನಿಮಾ ತೆರೆಕಾಣಲಿದೆ. ಈ ಕುತೂಹಲಕಾರಿ ಕದನ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.

ಬಿಗ್ ಬಾಸ್‌ ವೇದಿಕೆಯಲ್ಲಿ ಸಿಎಂ ವಿಜಯ್​ಗೆ ಟಾಂಗ್ ಕೊಟ್ಟ ವಿಜಯ್ ಸೇತುಪತಿ?

ಬಿಗ್ ಬಾಸ್ ತಮಿಳು ಸೀಸನ್ 10ರ ವೇದಿಕೆಯಲ್ಲಿ ನಟ ವಿಜಯ್ ಸೇತುಪತಿ ನಾಯಕತ್ವದ ಕುರಿತು ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಸಿಎಂ ವಿಜಯ್ ಅವರನ್ನು ಉದ್ದೇಶಿಸಿ ಈ ಮಾತುಗಳನ್ನು ಹೇಳಲಾಗಿದೆ ಎಂದು ನೆಟ್ಟಿಗರು ಚರ್ಚಿಸುತ್ತಿದ್ದು, ಈ ವಿವಾದಕ್ಕೆ ಯಾವುದೇ ಆಧಾರವಿಲ್ಲ ಎಂದು ಅಭಿಮಾನಿಗಳು ಸ್ಪಷ್ಟಪಡಿಸಿದ್ದಾರೆ.

ಇಂಗ್ಲೆಂಡ್‌ನಲ್ಲೂ ಸಿಎಂ ವಿಜಯ್ ಜೊತೆ ಕಾಣಿಸಿಕೊಂಡ ತ್ರಿಷಾ; ವಿಡಿಯೋ ವೈರಲ್

ತಮಿಳುನಾಡಿನ ಸಿಎಂ ಸಿ. ಜೋಸೆಫ್ ವಿಜಯ್ ಅವರು ಎಲ್ಲೇ ಹೋದರೂ ಅಲ್ಲಿ ನಟಿ ತ್ರಿಷಾ ಕೃಷ್ಣನ್ ಕೂಡ ಇರುತ್ತಾರೆ ಎಂಬಂತಾಗಿದೆ. ತಮಿಳುನಾಡಿನಲ್ಲಿ ಮಾತ್ರವಲ್ಲದೇ ಇಂಗ್ಲೆಂಡ್‌ನಲ್ಲೂ ಅದು ಸಾಬೀತಾಗಿದೆ. ಕಾರ್ ರೇಸಿಂಗ್ ಪಂದ್ಯಾವಳಿಗೆ ಚಾಲನೆ ನೀಡಲು ವಿಜಯ್ ಅವರು ಇಂಗ್ಲೆಂಡ್‌ಗೆ ತೆರಳಿದ್ದರು. ಅವರಿಗೆ ತ್ರಿಷಾ ಕೂಡ ಸಾಥ್ ನೀಡಿದರು.

ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್; ಫ್ಯಾನ್ಸ್ ಫಿದಾ

ಬ್ರಿಟನ್‌ನ ಸಿಲ್ವರ್‌ಸ್ಟೋನ್ ರೇಸಿಂಗ್ ಟ್ರ್ಯಾಕ್‌ನಲ್ಲಿ ತಮಿಳು ಚಿತ್ರರಂಗದ ಇಬ್ಬರು ದೈತ್ಯ ಸೂಪರ್‌ಸ್ಟಾರ್‌ಗಳಾದ ತಮಿಳುನಾಡು ಮುಖ್ಯಮಂತ್ರಿ 'ದಳಪತಿ' ವಿಜಯ್ ಮತ್ತು 'ತಲಾ' ಅಜಿತ್ ಕುಮಾರ್ ಅಪರೂಪದ ಹಾಗೂ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಮಿಚೆಲಿನ್ ಲೀ ಮ್ಯಾನ್ಸ್ ಕಪ್ ರೇಸಿಂಗ್ ಪಂದ್ಯಾವಳಿಯಲ್ಲಿ ಸ್ಪರ್ಧಿಸುತ್ತಿರುವ ಅಜಿತ್ ಕುಮಾರ್ ಅವರನ್ನು ಕಂಡ ತಮಿಳುನಾಡು ಸಿಎಂ ವಿಜಯ್, ರೇಸಿಂಗ್ ಸರ್ಕ್ಯೂಟ್‌ನಲ್ಲಿ ಓಡಿಬಂದು ಅವರನ್ನು ತಬ್ಬಿಕೊಂಡಿದ್ದಾರೆ.

ಮುನಿಸು ಮರೆತು ಒಂದಾಗಿರುತ್ತಿರುವ ಸ್ಟಾರ್​​ ನಟರು, ವಿಜಯ್ ಬಗ್ಗೆ ಅಜಿತ್ ಹೇಳಿದ್ದೇನು?

ಕಳೆದ 30 ವರ್ಷಗಳಿಂದಲೂ ತಮಿಳು ಚಿತ್ರರಂಗದಲ್ಲಿ ವಿಜಯ್ ಮತ್ತು ಅಜಿತ್ ಅವರು ಪರಸ್ಪರ ಪ್ರತಿಸ್ಪರ್ಧಿಗಳಾಗಿದ್ದಾರೆ. ಅವರ ಅಭಿಮಾನಿಗಳು ಸಹ ದಶಕಗಳಿಂದಲೂ ಆನ್​​ಲೈನ್ ಹಾಗೂ ಆಫ್​​ಲೈನ್​​ನಲ್ಲಿ ಪರಸ್ಪರರ ವಿರುದ್ಧ ಜಗಳ ಮಾಡುತ್ತಾ, ಪರಸ್ಪರರ ಕಾಲೆಳೆಯುತ್ತಾ ಬರುತ್ತಿದ್ದಾರೆ. ವಿಜಯ್ ಹಾಗೂ ಅಜಿತ್ ಸಹ ಪರಸ್ಪರರಿಂದ ದೂರವೇ ಉಳಿದಿದ್ದರು. ಆದರೆ ಇದೀಗ ವಿದೇಶಿ ನೆಲದಲ್ಲಿ ಈ ಇಬ್ಬರೂ ಒಂದಾಗುತ್ತಿದ್ದಾರೆ.

ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಒಂದಾದ ಸಿಎಂ ವಿಜಯ್, ಅಜಿತ್; ಅಭಿಮಾನಿಗಳಿಗೆ ಅಚ್ಚರಿ

ನಟ ಅಜಿತ್ ಭಾಗವಹಿಸಲಿರುವ ಕಾರ್ ರೇಸ್ ಸ್ಪರ್ಧೆಗೆ ಸಿಎಂ ವಿಜಯ್ ಅವರು ಚಾಲನೆ ನೀಡಲಿದ್ದಾರೆ. ಈ ರೀತಿ ಅಜಿತ್ ಮತ್ತು ವಿಜಯ್ ಅವರು ಒಂದಾಗುತ್ತಾರೆ ಎಂದು ಅವರ ಅಭಿಮಾನಿಗಳು ಊಹಿಸಿರಲಿಲ್ಲ. ಆದ್ದರಿಂದ ಎಲ್ಲರಿಗೂ ಅಚ್ಚರಿ ಆಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಸಂತಸ ಹಂಚಿಕೊಂಡಿದ್ದಾರೆ.

ತಮಿಳುನಾಡು ವಿಜಯ್ ನೇತೃತ್ವದ ಟಿವಿಕೆ ಮೈತ್ರಿಕೂಟಕ್ಕೆ ಜಾತ್ಯತೀತ ಸಾಮಾಜಿಕ ನ್ಯಾಯ ವಿಜಯ ಮೈತ್ರಿ ಎಂಬ ಹೆಸರು

ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿರುವ ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಮತ್ತು ಕಾಂಗ್ರೆಸ್ ಸೇರಿ ಇನ್ನಿತರೆ ಪಕ್ಷಗಳ ಮೈತ್ರಿಗೆ 'ಜಾತ್ಯತೀತ ಸಾಮಾಜಿಕ ನ್ಯಾಯ ವಿಜಯ ಮೈತ್ರಿ' ಎಂದು ನಾಮಕರಣ ಮಾಡಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಮೈತ್ರಿಕೂಟವು ರೂಪುಗೊಂಡಿದ್ದು, ರಾಜ್ಯದ ಪ್ರಮುಖ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲು ಸಜ್ಜಾಗಿದೆ.

ಸಿನಿಮಾ ವೇದಿಕೆಯಲ್ಲಿ ರಾಜಕೀಯ ಸದ್ದು; ‘ಟಿವಿಕೆ’ ಜಪಕ್ಕೆ ಪ್ರತಿಕ್ರಿಯಿಸಿದ ಜೇಸನ್ ಸಂಜಯ್

ತಮಿಳು ನಟ ವಿಜಯ್ ಪುತ್ರ ಜೇಸನ್ ಸಂಜಯ್ ನಿರ್ದೇಶನದ 'ಸಿಗ್ಮಾ' ಪ್ರೀ-ರಿಲೀಸ್ ಈವೆಂಟ್‌ನಲ್ಲಿ 'ಟಿವಿಕೆ' ರಾಜಕೀಯ ಪಕ್ಷದ ಘೋಷಣೆಗಳು ಮೊಳಗಿವೆ. ವೇದಿಕೆಯಲ್ಲಿ ಧನ್ಯವಾದ ತಿಳಿಸುವಾಗ ಅಭಿಮಾನಿಗಳು ತಂದೆಯ ಪಕ್ಷದ ಪರ ಕೂಗಿದಾಗ, ಜೇಸನ್ ಸಂಜಯ್ 'ಥಂಬ್ಸ್ ಅಪ್' ತೋರಿಸಿ ನಗುಮುಖದಿಂದ ಸ್ವೀಕರಿಸಿದ್ದಾರೆ. 

‘ನನ್ನ ಉದ್ದೇಶ ಯಾರನ್ನೂ ನೋಯಿಸುವುದಾಗಿರಲಿಲ್ಲ’; ವಿಧಾನಸಭಾ ಭಾಷಣದ ವಿವಾದಕ್ಕೆ ಸಿಎಂ ವಿಜಯ್ ಸ್ಪಷ್ಟನೆ

ತಮಿಳುನಾಡು ಮುಖ್ಯಮಂತ್ರಿ ವಿಜಯ್ ತಮ್ಮ ಎಕ್ಸ್​ ಪೇಜಿನಲ್ಲಿ ವಿಧಾನಸಭೆಯಲ್ಲಿನ ತಮ್ಮ ವರ್ತನೆ ಯಾರನ್ನೂ ವೈಯಕ್ತಿಕವಾಗಿ ನೋಯಿಸುವ ಉದ್ದೇಶವನ್ನು ಹೊಂದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿಧಾನಸಭೆಯಲ್ಲಿ ಪೊಲೀಸ್ ಸಬ್ಸಿಡಿ ವಿನಂತಿಯ ಸಮಯದಲ್ಲಿ, ನನ್ನ ಪ್ರತಿಕ್ರಿಯೆಯ ಸಮಯದಲ್ಲಿ ನನ್ನ ದೇಹ ಭಾಷೆ ಆಕಸ್ಮಿಕವಾಗಿತ್ತು. ಅದು ಯಾವುದೇ ದುರುದ್ದೇಶವನ್ನು ಹೊಂದಿರಲಿಲ್ಲ, ಆದ್ದರಿಂದ ದಯವಿಟ್ಟು ಅದನ್ನು ತಪ್ಪಾಗಿ ಅರ್ಥೈಸಬೇಡಿ ಎಂದು ನಾನು ವಿನಂತಿಸುತ್ತೇನೆ ಎಂದಿದ್ದಾರೆ.

ನಟಿಯರ ಚಾರಿತ್ರ್ಯ ವಧೆ ವಿರುದ್ಧ ದನಿ ಎತ್ತಿದ ಕಂಗನಾ ರಣಾವತ್: ತ್ರಿಷಾ ಕೃಷ್ಣನ್ ಉದಾಹರಣೆ

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್ ಹಾಗೂ ನಟಿ ತ್ರಿಷಾ ಕೃಷ್ಣನ್ ಅವರು ಆಪ್ತವಾಗಿದ್ದಾರೆ. ಆ ಕಾರಣಕ್ಕೆ ತ್ರಿಷಾ ಅವರನ್ನು ಆಗಾಗ ಟ್ರೋಲ್ ಮಾಡಲಾಗುತ್ತದೆ. ಇದನ್ನು ನಟಿ ಕಂಗನಾ ರಣಾವತ್ ಅವರು ಖಂಡಿಸಿದ್ದಾರೆ. ನಟಿಯರನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!
ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ಗವಿಸಿದ್ದೇಶ್ವರ ಶ್ರೀ
ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ಗವಿಸಿದ್ದೇಶ್ವರ ಶ್ರೀ
ಚೆನ್ನೈ ಮೆಟ್ರೋದಲ್ಲಿ ಪ್ರಧಾನಿ ಮೋದಿ–ಸಿಎಂ ವಿಜಯ್ ಪ್ರಯಾಣ
ಚೆನ್ನೈ ಮೆಟ್ರೋದಲ್ಲಿ ಪ್ರಧಾನಿ ಮೋದಿ–ಸಿಎಂ ವಿಜಯ್ ಪ್ರಯಾಣ
ಮಾಗಡಿ ಮಾರುಕಟ್ಟೆಯಲ್ಲಿ ರಾಶಿ ರಾಶಿ ಕಸ ಕಂಡು ಗರಂ ಆದ್ರು ಸಚಿವ ಬಾಲಕೃಷ್ಣ!
ಮಾಗಡಿ ಮಾರುಕಟ್ಟೆಯಲ್ಲಿ ರಾಶಿ ರಾಶಿ ಕಸ ಕಂಡು ಗರಂ ಆದ್ರು ಸಚಿವ ಬಾಲಕೃಷ್ಣ!
Live: ಮೈಸೂರು ದಸರಾ ಉದ್ಘಾಟನೆ ನೇರಪ್ರಸಾರ
Live: ಮೈಸೂರು ದಸರಾ ಉದ್ಘಾಟನೆ ನೇರಪ್ರಸಾರ
ಮೈಸೂರು ದಸರಾಗೆ ಕ್ಷಣಗಣನೆ: ಗವಿಸಿದ್ದೇಶ್ವರ ಶ್ರೀಗಳಿಂದ ನಾಡಹಬ್ಬಕ್ಕೆ ಚಾಲನೆ
ಮೈಸೂರು ದಸರಾಗೆ ಕ್ಷಣಗಣನೆ: ಗವಿಸಿದ್ದೇಶ್ವರ ಶ್ರೀಗಳಿಂದ ನಾಡಹಬ್ಬಕ್ಕೆ ಚಾಲನೆ
ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!
ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!