AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುನಿಸು ಮರೆತು ಒಂದಾಗಿರುತ್ತಿರುವ ಸ್ಟಾರ್​​ ನಟರು, ವಿಜಯ್ ಬಗ್ಗೆ ಅಜಿತ್ ಹೇಳಿದ್ದೇನು?

ಕಳೆದ 30 ವರ್ಷಗಳಿಂದಲೂ ತಮಿಳು ಚಿತ್ರರಂಗದಲ್ಲಿ ವಿಜಯ್ ಮತ್ತು ಅಜಿತ್ ಅವರು ಪರಸ್ಪರ ಪ್ರತಿಸ್ಪರ್ಧಿಗಳಾಗಿದ್ದಾರೆ. ಅವರ ಅಭಿಮಾನಿಗಳು ಸಹ ದಶಕಗಳಿಂದಲೂ ಆನ್​​ಲೈನ್ ಹಾಗೂ ಆಫ್​​ಲೈನ್​​ನಲ್ಲಿ ಪರಸ್ಪರರ ವಿರುದ್ಧ ಜಗಳ ಮಾಡುತ್ತಾ, ಪರಸ್ಪರರ ಕಾಲೆಳೆಯುತ್ತಾ ಬರುತ್ತಿದ್ದಾರೆ. ವಿಜಯ್ ಹಾಗೂ ಅಜಿತ್ ಸಹ ಪರಸ್ಪರರಿಂದ ದೂರವೇ ಉಳಿದಿದ್ದರು. ಆದರೆ ಇದೀಗ ವಿದೇಶಿ ನೆಲದಲ್ಲಿ ಈ ಇಬ್ಬರೂ ಒಂದಾಗುತ್ತಿದ್ದಾರೆ.

ಮುನಿಸು ಮರೆತು ಒಂದಾಗಿರುತ್ತಿರುವ ಸ್ಟಾರ್​​ ನಟರು, ವಿಜಯ್ ಬಗ್ಗೆ ಅಜಿತ್ ಹೇಳಿದ್ದೇನು?
Ajith Vijay
ಮಂಜುನಾಥ ಸಿ.
|

Updated on: Sep 12, 2026 | 4:20 PM

Share

ಮುಖ್ಯಾಂಶಗಳು

  • ದಳಪತಿ ವಿಜಯ್-ಅಜಿತ್ ತಮಿಳಿನ ಸೂಪರ್ ಸ್ಟಾರ್ ನಟರು
  • 30 ವರ್ಷಗಳಿಂದಲೂ ಇವರು ಪ್ರತಿಸ್ಪರ್ಧಿಗಳಾಗಿದ್ದಾರೆ.
  • ಇದೀಗ ಈ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರರಂಗದಲ್ಲಿ ವಿಶೇಷವಾಗಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸ್ಟಾರ್ ವಾರ್ಸ್ ಸಾಮಾನ್ಯ. ತೆಲುಗು ರಾಜ್ಯಗಳು ಮತ್ತು ತಮಿಳುನಾಡಿನಲ್ಲಿ ಇದು ತುಸು ಹೆಚ್ಚಾಗಿಯೇ ಇದೆ. ತಮಿಳಿನ ವಿಜಯ್ ಮತ್ತು ಅಜಿತ್ ಅಭಿಮಾನಿಗಳ ಬಗ್ಗೆ ಪದೇ ಪದೇ ಜಗಳ ನಡೆಯುತ್ತಲೇ ಇರುತ್ತದೆ. ಖುದ್ದು ವಿಜಯ್ ಮತ್ತು ಅಜಿತ್ ಸಹ ಪರಸ್ಪರ ದೂರವೇ ಇರುತ್ತಾರೆ. ಇಬ್ಬರ ನಡುವೆ ವೃತ್ತಿ ವೈರತ್ವ ಸಹಜವಾಗಿಯೇ ಇತ್ತು. ಕಳೆದ ಮೂರು ದಶಕದಿಂದಲೂ ಈ ಇಬ್ಬರು ಪರಸ್ಪರ ಪ್ರತಿಸ್ಪರ್ಧಿಗಳಾಗಿದ್ದಾರೆ. ಆದರೆ ಇದೀಗ ವಿಜಯ್ ಮತ್ತು ಅಜಿತ್ ಒಟ್ಟಿಗೆ ಸೇರುತ್ತಿದ್ದಾರೆ. ಅದೂ ಭಾರತದಲ್ಲಿ ಅಲ್ಲ ಬದಲಿಗೆ ಬ್ರಿಟನ್​​ನಲ್ಲಿ.

ತಮಿಳುನಾಡು ಮುಖ್ಯಮಂತ್ರಿ ಮತ್ತು ತಮಿಳು ಸೂಪರ್‌ಸ್ಟಾರ್ ವಿಜಯ್ ಅವರು ಶನಿವಾರ ಇಂಗ್ಲೆಂಡ್‌ನ ಸಿಲ್ವರ್‌ಸ್ಟೋನ್‌ನಲ್ಲಿ ನಡೆಯಲಿರುವ ಲೆ ಮಾನ್ಸ್ (Le Mans) ರೇಸ್‌ನಲ್ಲಿ ಸಾಂಪ್ರದಾಯಿಕ ಹಸಿರು ಧ್ವಜ (ಗ್ರೀನ್ ಫ್ಲ್ಯಾಗ್) ಹಾರಿಸುವ ಮೂಲಕ ರೇಸಿಗೆ ಚಾಲನೆ ನೀಡಲಿದ್ದಾರೆ. ವಿಶೇಷವೆಂದರೆ ತಮಿಳಿನ ಸ್ಟಾರ್ ನಟ ಅಜಿತ್ ಅವರು ತಮ್ಮ ತಂಡದೊಂದಿಗೆ ಇದೇ ರೇಸ್‌ನಲ್ಲಿ ಸ್ಪರ್ಧಿಯಾಗಿ ಭಾಗಿ ಆಗಲಿದ್ದಾರೆ. ರೇಸ್‌ಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ನಡುವೆ ಇದೆ ಎನ್ನಲಾದ ಪೈಪೋಟಿಯ ವದಂತಿಗಳ ಹೊರತಾಗಿಯೂ, 34 ವರ್ಷಗಳ ತಮ್ಮ ಸಹೋದ್ಯೋಗಿಯನ್ನು ಬಹಳ ಅಭಿಮಾನ ಮತ್ತು ಮೆಚ್ಚುಗೆಯಿಂದ ಸ್ಮರಿಸಿದರು. ವಿಜಯ್ ಈಗ ತಮಿಳುನಾಡಿನ ಮುಖ್ಯಮಂತ್ರಿಯಾಗಿರುವುದಕ್ಕೆ ಅಜಿತ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.

ರೇಸ್‌ಗೆ ವಿಜಯ್ ಆಗಮಿಸುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಜಿತ್, ‘ತಮ್ಮ ಬ್ಯುಸಿ ವೇಳಾಪಟ್ಟಿಯಿಂದ ಸಮಯ ಮಾಡಿಕೊಂಡು ಸಿಲ್ವರ್‌ಸ್ಟೋನ್‌ಗೆ ಬಂದು ನಮ್ಮನ್ನು ಭೇಟಿ ಮಾಡಲು ಬಂದಿರುವ ತಮಿಳುನಾಡಿನ ಗೌರವಾನ್ವಿತ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರಿಗೆ ನಾನು ಅತ್ಯಂತ ಕೃತಜ್ಞನಾಗಿದ್ದೇನೆ. ನಾವು ಕಳೆದ 34 ವರ್ಷಗಳಿಂದ ಚಿತ್ರರಂಗದಲ್ಲಿ ಸಹೋದ್ಯೋಗಿಗಳಾಗಿದ್ದೇವೆ, ಅವರು ಈಗ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದು ನನಗೆ ತುಂಬಾ ಸಂತೋಷ ತಂದಿದೆ’ ಎಂದಿದ್ದಾರೆ.

ಭವಿಷ್ಯದಲ್ಲಿ ಭಾರತದಲ್ಲಿಯೂ ಕ್ರೀಡಾಕೂಡಗಳು ನಡೆಯುವ ಬಗ್ಗೆ ಆಶಾವಾದ ವ್ಯಕ್ತಪಡಿಸಿದ ಅವರು, “ಅವರು (ವಿಜಯ್) ಕೇವಲ ಮೋಟಾರ್‌ಸ್ಪೋರ್ಟ್ಸ್ ಮಾತ್ರವಲ್ಲದೆ, ಪ್ರತಿಯೊಂದು ವಿಭಾಗದ ಕ್ರೀಡೆಗಳನ್ನು ಉತ್ತೇಜಿಸಲು ಸಾಕಷ್ಟು ಶ್ರಮಿಸುತ್ತಿದ್ದಾರೆ. ಅವರು ಮೋಟಾರ್‌ಸ್ಪೋರ್ಟ್ಸ್ ಮೇಲೂ ಗಮನ ಹರಿಸುತ್ತಿದ್ದಾರೆ. ಲೆ ಮಾನ್ಸ್ ಸೀರೀಸ್‌ನಂತಹ ರೇಸ್‌ಗಳನ್ನು ಭಾರತ ಮತ್ತು ಚೆನ್ನೈನಲ್ಲಿ ಆಯೋಜಿಸಲು ಲಾಜಿಸ್ಟಿಕ್ಸ್ ಮತ್ತು ಮೂಲಭೂತ ಸೌಕರ್ಯಗಳ ದೃಷ್ಟಿಯಿಂದ ಏನೆಲ್ಲಾ ಬೇಕಾಗುತ್ತದೆ ಎಂಬುದನ್ನು ಖುದ್ದಾಗಿ ನೋಡಲು ಅವರು ಆಹ್ವಾನವನ್ನು ಸ್ವೀಕರಿಸಿ ಬಂದಿರುವುದಕ್ಕೆ ನನಗೆ ಸಂತೋಷವಾಗಿದೆ. ಇಂತಹ ಕಾರ್ಯಕ್ರಮಗಳು ಭಾರತಕ್ಕೆ ಬರಬೇಕು ಮತ್ತು ನಾವೆಲ್ಲರೂ ಭಾರತದಲ್ಲೇ ರೇಸ್ ಮಾಡಬೇಕು ಎಂಬುದು ನನ್ನ ಆಸೆ’ ಎಂದರು.

ಇದನ್ನೂ ಓದಿ:ಹಾಲಿವುಡ್ ಸ್ಟಾರ್ ನಟನೆದುರು ಕತ್ತಿ ಬೀಸಿದ ವಿಜಯ್ ದೇವರಕೊಂಡ

ಅಜಿತ್ ಅವರು 1993 ರ ‘ಅಮರಾವತಿ’ ಚಿತ್ರದ ಮೂಲಕ ನಾಯಕರಾಗಿ ಪಾದರ್ಪಣೆ ಮಾಡಿದರು ಮತ್ತು ವಿಜಯ್ ಅವರು 1992 ರ ‘ನಾಲೈ ತೀರ್ಪು’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಬಂದರು. ಮೂರು ದಶಕಗಳಿಗೂ ಹೆಚ್ಚು ಕಾಲದಿಂದ, ಇಬ್ಬರ ಅಭಿಮಾನಿಗಳು ಇವರ ನಡುವಿನ ಪೈಪೋಟಿಯಿಂದ ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ ಪರಸ್ಪರ ಜಗಳವಾಡುತ್ತಾ ಬಂದಿದ್ದಾರೆ. ವಿಜಯ್ ಅಭಿಮಾನಿಗಳನ್ನು ‘ಅನಿಲ್‌ಗಳು’ (ಅಳಿಲುಗಳು) ಮತ್ತು ಅಜಿತ್ ಅಭಿಮಾನಿಗಳನ್ನು ‘ಆಮೈಗಳು’ (ಆಮೆಗಳು) ಎಂದು ಪರಸ್ಪರ ಕುಚೋದ್ಯ ಮಾಡಲು ನಿಕ್‌ನೇಮ್‌ಗಳನ್ನು ಸಹ ಸೃಷ್ಟಿಸಿಕೊಂಡಿದ್ದರು.

ಆದರೆ ಈಗ ಇಬ್ಬರೂ ಒಂದಾಗುತ್ತಿದ್ದು, ಈ ಅಪರೂಪದ ಘಟನೆಯನ್ನು ನೋಡಲು ಸ್ಕಾಟ್‌ಲ್ಯಾಂಡ್, ಐರ್ಲೆಂಡ್, ವೇಲ್ಸ್ ಮತ್ತು ಇತರ ಹಲವು ಸ್ಥಳಗಳಿಂದ ಅಭಿಮಾನಿಗಳು ಲಂಡನ್‌ಗೆ ಪ್ರಯಾಣ ಬೆಳೆಸುತ್ತಿದ್ದಾರೆ. ವಿಜಯ್ ಮತ್ತು ಅಜಿತ್ ಅವರುಗಳನ್ನು ಒಟ್ಟಿಗೆ ನೋಡಲೆಂದು ಹಲವಾರು ಅಭಿಮಾನಿಗಳು ರೇಸಿಗೆ ಬಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!
ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!
ದೆಹಲಿಯಲ್ಲಿ ಇಂಡಿ ಮೈತ್ರಿಕೂಟದ ಪ್ರತಿಭಟನೆ
ದೆಹಲಿಯಲ್ಲಿ ಇಂಡಿ ಮೈತ್ರಿಕೂಟದ ಪ್ರತಿಭಟನೆ
ಬಸ್ ಚಾಲನೆ ಮಾಡುತ್ತಲೇ ಮೊಬೈಲ್‌ನಲ್ಲಿ ಹರಟೆ
ಬಸ್ ಚಾಲನೆ ಮಾಡುತ್ತಲೇ ಮೊಬೈಲ್‌ನಲ್ಲಿ ಹರಟೆ
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು