ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಕೇಳಿಬಂತು ಗಂಭೀರ ಆರೋಪ
ಬಿಗ್ ಬಾಸ್ ಮನೆಯ ಕಿಚನ್‌ನಲ್ಲಿ ಸೌಂದರ್ಯಾ ಶೆಟ್ಟಿ ಹಾಗೂ ಸಂಗೀತಾ ನಡುವೆ ಕೆಲಸದ ಹಂಚಿಕೆ ಕುರಿತು ಚರ್ಚೆ ನಡೆದಿದೆ. ಗಂಡುಮಕ್ಕಳ ಕೆಲಸ ಮತ್ತು ವುಮೆನ್ ಕಾರ್ಡ್ ಪ್ಲೇ ಮಾಡುವ ವಿಷಯದಲ್ಲಿ ಸೌಂದರ್ಯಾ ಎಚ್ಚರಿಕೆ ನೀಡಿದ್ದು, ತಡರಾತ್ರಿ ಅಡುಗೆ ಮಾಡಿಸುವ ಪ್ರವೃತ್ತಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ಕನ್ನಡ ಮನೆಯ ಕಿಚನ್ ಏರಿಯಾದಲ್ಲಿ ಕೆಲಸದ ಹಂಚಿಕೆ ಹಾಗೂ ವುಮೆನ್ ಕಾರ್ಡ್ ಪ್ಲೇ ಮಾಡುವ ಕುರಿತು ಸ್ಪರ್ಧಿಗಳಾದ ಸೌಂದರ್ಯಾ ಶೆಟ್ಟಿ ಮತ್ತು ಸಂಗೀತಾ ನಡುವೆ ಚರ್ಚೆ ನಡೆದಿದೆ. ಕಿಚನ್‌ನಲ್ಲಿ ಪಾತ್ರೆ ತೊಳೆಯುತ್ತಿದ್ದ ವೇಳೆ ಈ ಇಬ್ಬರೂ ಮನೆಮಂದಿಯ ನಡೆ-ನುಡಿಗಳ ಬಗ್ಗೆ ಮುಕ್ತವಾಗಿ ಚರ್ಚಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ವಯಸ್ಸು, ಜಾತಿ, ಹಣ, ಲಿಂಗ ಯಾವುದೂ ಲೆಕ್ಕಕ್ಕರ ಬರೋದಿಲ್ಲ. ಎಲ್ಲರೂ ಇಲ್ಲಿ ಸಮಾನರು. ಆದರೆ, ಈ ಬಾರಿ ಮನೆಗೆಲಸ ಮಹಿಳೆಯರಿಗೆ ಮಾತ್ರ ವಹಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ. ‘ಇಲ್ಲಿ ಗಂಡುಮಕ್ಕಳು ಕೆಲಸ ಮಾಡುತ್ತಿಲ್ಲ, ಪ್ರತಿಯೊಬ್ಬರೂ ಎರಡೆರಡು ಕೆಜಿ ತೂಕ ಜಾಸ್ತಿ ಆಗಿದ್ದಾರೆ. ಅವರ ಕೆಲಸವನ್ನು ನಾನು ಮಾಡಲು ಸಾಧ್ಯವಿಲ್ಲ’ ಎಂದು ಸೌಂದರ್ಯಾ ನೇರವಾಗಿ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸಂಗೀತಾ, ‘ಮಧ್ಯರಾತ್ರಿ ಕಾವ್ಯಾ ಬಳಿ ಅಡುಗೆ ಮಾಡಿಸಿದ್ದಾರೆ’ ಎಂದು ಆರೋಪಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

