AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲಿವುಡ್ ಸ್ಟಾರ್ ನಟನೆದುರು ಕತ್ತಿ ಬೀಸಿದ ವಿಜಯ್ ದೇವರಕೊಂಡ

ಭಾರತದ ನಟ-ನಟಿಯರು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಲು ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ ಹಾಲಿವುಡ್ ನಟರುಗಳು ಭಾರತದ ಸಿನಿಮಾಗಳಲ್ಲಿ ನಟಿಸುವುದು ವಿರಳ. ಅದರಲ್ಲೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುವುದು ಇನ್ನೂ ಕಡಿಮೆ. ಇದೀಗ ಹಾಲಿವುಡ್​​ನ ಸ್ಟಾರ್ ಖಳನನಟರೊಬ್ಬರು ಇದೀಗ ತೆಲುಗು ಸಿನಿಮಾನಲ್ಲಿ ವಿಲನ್ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಯಾರದು?

ಹಾಲಿವುಡ್ ಸ್ಟಾರ್ ನಟನೆದುರು ಕತ್ತಿ ಬೀಸಿದ ವಿಜಯ್ ದೇವರಕೊಂಡ
Ranabaali Arnold
ಮಂಜುನಾಥ ಸಿ.
|

Updated on: Sep 10, 2026 | 2:24 PM

Share

ಮುಖ್ಯಾಂಶಗಳು

  • ವಿಜಯ್ ದೇವರಕೊಂಡ ಸಿನಿಮಾನಲ್ಲಿ ಹಾಲಿವುಡ್ ನಟ
  • ಬ್ಲಾಕ್ ಬಸ್ಕರ್ ಹಾಲಿವುಡ್ ಸಿನಿಮಾಗಳ ವಿಲನ್ ಅರ್ನಾಲ್ಡ್
  • ಅರ್ನಾಲ್ಡ್ ವೋಸ್ಲೊ ಇದೀಗ ವಿಜಯ್ ದೇವರಕೊಂಡ ಜೊತೆ ನಟಿಸುತ್ತಿದ್ದಾರೆ.

ಭಾರತೀಯ ಸಿನಿಮಾಗಳ ನಟ-ನಟಿಯರು ಹಾಲಿವುಡ್​​ ಸಿನಿಮಾಗಳಲ್ಲಿ ನಟಿಸುವುದು ಇತ್ತೀಚೆಗೆ ಸಾಮಾನ್ಯ ಆಗಿದೆ. ದೀಪಿಕಾ ಪಡುಕೋಣೆ, ನಸಿರುದ್ಧೀನ್ ಶಾ, ಅಲಿ ಫಜಲ್, ಆಲಿಯಾ ಭಟ್, ವಿದ್ಯುತ್ ಜಾಮ್ವಾಲ್, ಅನುಪಮ್ ಖೇರ್ ದಕ್ಷಿಣದ ಸ್ಟಾರ್ ನಟ ಧನುಶ್ ಇನ್ನೂ ಹಲವರು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಹಾಲಿವುಡ್ ನಟರುಗಳು ಭಾರತದ ಸಿನಿಮಾಗಳಲ್ಲಿ ನಟಿಸಿರುವುದು ಬಹಳ ವಿರಳ. ಅದರಲ್ಲೂ ದಕ್ಷಿಣದ ಸಿನಿಮಾಗಳಲ್ಲಿ ಹಾಲಿವುಡ್ ಸಿನಿಮಾ ನಟರು ನಟಿಸಿರುವುದು ಕಡಿಮೆ. ಆದರೆ ಇತ್ತೀಚೆಗೆ ಈ ಪದ್ಧತಿ ಹೆಚ್ಚಾಗುತ್ತಿದೆ.

ಧನುಶ್ ನಟನೆಯ ‘ಜಗಮೇ ತಾಂದಿರಮ್’ ಸಿನಿಮಾನಲ್ಲಿ ಕೆಲ ಹಾಲಿವುಡ್ ನಟರು ನಟಿಸಿದ್ದರು. ಅದಾದ ಬಳಿಕ ‘ಆರ್​​ಆರ್​​ಆರ್’ ಸಿನಿಮಾನಲ್ಲಿಯೂ ಅದು ರಿಪೀಟ್ ಆಯ್ತು. ಇದೀಗ ವಿಜಯ್ ದೇವರಕೊಂಡ ನಟನೆಯ ‘ರಣಬಾಲಿ’ ಸಿನಿಮಾನಲ್ಲಿ ಮತ್ತೊಬ್ಬ ಖ್ಯಾತ ಹಾಲಿವುಡ್ ನಟ ವಿಲನ್ ಆಗಿ ನಟಿಸುತ್ತಿದ್ದಾರೆ. ಅದುವೇ ಅರ್ನಾಲ್ಡ್ ವೋಲ್ಸೊ. ಹೆಸರಿನಿಂದ ಇವರನ್ನು ಗುರುತಿಸುವುದು ಹಲವು ಭಾರತೀಯ ಸಿನಿಮಾ ಪ್ರೇಮಿಗಳಿಗೆ ಕಷ್ಟವಾಗಬಹುದು. ಆದರೆ ‘ಮಮ್ಮಿ’ ಸಿನಿಮಾದ ವಿಲನ್ ಎಂದರೆ ಥಟ್ಟನೆ ನೆನಪಾಗುತ್ತದೆ. ಬೋಡಾದ ತಲೆ, ಕಟ್ಟು ಮಸ್ತಾದ ದೇಹದ ಅರ್ನಾಲ್ಡ್ ವೋಸ್ಲೊ ಹಾಲಿವುಡ್​​ನ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದು, ಇದೀಗ ಅವರು ತೆಲುಗಿನ ‘ರಣಬಾಲಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

‘ರಣಬಾಲಿ’ ಸಿನಿಮಾದ ಟೀಸರ್ ನಿನ್ನೆಯಷ್ಟೆ (ಸೆಪ್ಟೆಂಬರ್ 09) ಬಿಡುಗಡೆ ಆಗಿದ್ದು, ಟೀಸರ್​​ನಲ್ಲಿ ಅರ್ನಾಲ್ಡ್ ವೋಸ್ಲೊ ಪಾತ್ರದ ಸಣ್ಣ ಝಲಕ್ ತೋರಿಸಲಾಗಿದೆ. ‘ರಣಬಾಲಿ’ ಸಿನಿಮಾ ಬ್ರಿಟೀಷರ ವಿರುದ್ಧ ಹೋರಾಡುವ ಹೋರಾಟನ ಕತೆಯನ್ನು ಒಳಗೊಂಡಿದ್ದು, ಸಿನಿಮಾನಲ್ಲಿ ಅರ್ನಾಲ್ಡ್ ವೊಸ್ಲೊ ಬ್ರಿಟೀಷ್ ಅಧಿಕಾರಿ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಟೀಸರ್​​ನಲ್ಲಿ ಸಹ ಅರ್ನಾಲ್ಡ್ ಅವರ ಪಾತ್ರದ ದೃಶ್ಯವನ್ನು ಸೇರಿಸಲಾಗಿದೆ.

ಇದನ್ನೂ ಓದಿ:ಹಾಲಿವುಡ್​​ಗೆ ಹೊರಟ ಬಾಲಿವುಡ್ ನಿರ್ದೇಶಕ, ಆಸ್ಕರ್ ಗೆದ್ದ ಹೀರೋ ಜೊತೆ ಸಿನಿಮಾ

ಅರ್ನಾಲ್ಡ್ ವೋಸ್ಲೊ, ಹಾಲಿವುಡ್​​ನ ಬಹುದೊಡ್ಡ ಖಳನಟರುಗಳಲ್ಲಿ ಒಬ್ಬರು. ವಿಶ್ವ ಪ್ರಸಿದ್ಧ ‘ಮಮ್ಮಿ’ ಸಿನಿಮಾಗಳ ಜೊತೆಗೆ, ‘ಏಜೆಂಟ್ ಕೋಡಿ ಬ್ಯಾಂಕ್ಸ್’ ಸಿನಿಮಾನಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದರು. ಇವುಗಳ ಹೊರತಾಗಿ, ‘ಡಾರ್ಕ್​​ಮ್ಯಾನ್’, ಆಸ್ಕರ್ ನಾಮಿನೇಟ್ ಆಗಿದ್ದ ‘ಬ್ಲಡ್ ಡೈಮೆಂಡ್’, 2008ರ ‘ಒಡೆಸಿಯಸ್’, ‘ಜಿಐ ಜೋ’ನ ಎರಡು ಸಿನಿಮಾ, ‘ಫೈರ್ ಆಂಡ್ ಐಸ್’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ವಿಜಯ್ ದೇವರಕೊಂಡ ನಟನೆಯ ‘ರಣಬಾಲಿ’ ಸಿನಿಮಾನಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ 64 ವರ್ಷದ ಈ ನಟ.

‘ರಣಬಾಲಿ’ ಸಿನಿಮಾ, ರಣಬಾಲಿ ಹೆಸರಿನ ಕ್ರಾಂತಿಕಾರಿ ಹೋರಾಟಗಾರನ ಕತೆಯನ್ನು ಒಳಗೊಂಡಿದೆ. ಬ್ರಿಟೀಷರನ್ನು ಆಯುಧಗಳ ಮೂಲಕ ಎದುರಿಸಿದ ಒಬ್ಬ ಯುವಕನ ಕತೆಯನ್ನು ಹೊಂದಿದೆ. ನಿನ್ನೆ ಬಿಡುಗಡೆ ಆಗಿರುವ ಟೀಸರ್​​ನಲ್ಲಿ ವಿಜಯ್ ದೇವರಕೊಂಡ ಕತ್ತಿ ಹಿಡಿದು ಎದುರು ಬಂದವರ ತಲೆಗಳನ್ನು ಕಡಿಯುತ್ತಿರುವ ದೃಶ್ಯವಿದೆ. ಸಿನಿಮಾನಲ್ಲಿ ಮುಖ್ಯ ವಿಲನ್ ಪಾತ್ರದಲ್ಲಿ ಅರ್ನಾಲ್ಡ್ ವೋಸ್ಲೊ ನಟಿಸಿದ್ದು, ವಿಜಯ್ ದೇವರಕೊಂಡ, ಅರ್ನಾಲ್ಡ್ ಎದುರು ಕತ್ತಿ ಝಳಪಿಸಲಿದೆಯೇ ಕಾದು ನೋಡಬೇಕಿದೆ. ಅಂದಹಾಗೆ ಅರ್ನಾಲ್ಡ್ ಅವರು ‘ರಣಬಾಲಿ’ ಜೊತೆಗೆ ‘ಮಮ್ಮಿ’ ಸಿನಿಮಾದ ಸೀಕ್ವೆಲ್​​ನಲ್ಲೂ ನಟನೆ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More